ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಜ.01:
ರಾಜ್ಯ ಸರ್ಕಾರದ ವಸತಿ ಶಾಲೆಗಳು ಬಡವರು, ಹಿಂದುಳಿದ ಗ್ರಾಾಮೀಣ ಪ್ರದೇಶದ ಪ್ರತಿಭಾನ್ವಿಿತ ಮಕ್ಕಳ ಬದುಕಿಗೆ ಆಶಾಕಿರಣವಾಗಿವೆ ಎಂದು ಕಾಂಗ್ರೆೆಸ್ ಮುಖಂಡ ಮಲ್ಲಿಕಾರ್ಜುನಸ್ವಾಾಮಿ ಎಚ್.ಎಂ. ತಿಳಿಸಿದರು.
ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜು ಹಲುವಾಗಿಲು ಇಲ್ಲಿನ ಬೀಚಿ ರಂಗಮಂದಿರದಲ್ಲಿ ಶನಿವಾರ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು.
ತಾಲ್ಲೂಕಿನ ಅತ್ಯಂತ ಹಳೆಯ ವಸತಿ ಶಾಲೆಯಾದ ಮೊರಾರ್ಜಿ ದೇಸಾಯಿ ವಸತಿ ಶಾಲೆ ನವೀಕರಣಕ್ಕೆೆ ಐದು ಕೋಟಿ ರೂ.ಗಳ ಕಾಮಗಾರಿ ಕೈಗೆತ್ತಿಿಕೊಳ್ಳಲಾಗಿದೆ, ಇಂತಹ ಶಾಲೆಗಳನ್ನು ಗ್ರಾಾಮೀಣ ಪ್ರದೇಶದ ಪ್ರತಿಭಾನ್ವಿಿತ ವಿದ್ಯಾಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಮತ್ತು ತರಗತಿಯಲ್ಲಿ ನಡೆಯುವ ಪಾಠಗಳನ್ನು ಗಮನವಿಟ್ಟು ಆಲಿಸಿ ಜೀವನದಲ್ಲಿ ಸಾಧನೆ ಮಾಡುವತ್ತ ಗಮನವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಾಚಾರ್ಯ ನಾಗರಾಜ ಟಿ ಕನ್ನಿಿಹಳ್ಳಿಿ ಮಾತನಾಡಿ. ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ ಹಾಗೂ ಅವರ ಪತಿ ಮಲ್ಲಿಕಾರ್ಜುನ್ ಕಾಳಜಿಯಿಂದ ಕಳೆದ ಎರಡೂವರೆ ವರ್ಷಗಳಲ್ಲಿ ವಿದ್ಯಾಾರ್ಥಿಗಳಿಗೆ ಪೀಠೋಪಕರಣ, ಡೆಸ್ಕ್, ಬೆಂಚ್, ಮಂಚ, ಕಂಪ್ಯೂೂಟರ್, ಹೈಮ್ಟ್ಾ ಲೈಟ್, 24ಗಂಟೆ ಬಿಸಿನೀರಿನ ವ್ಯವಸ್ಥೆೆ, ಸೌಲಭ್ಯಗಳನ್ನು ಒದಗಿಸಿ ಅನುಕೂಲ ಮಾಡಿಕೊಟ್ಟಿಿದ್ದಾರೆ ಎಂದರು.
ಪ್ರಾಾಂಶುಪಾಲರುಗಳಾದ ಶಶಿಧರ್ ಕೆ ಅಟಲ್ ವಿದ್ಯಾಾಲಯ ಪಾವಗಡ, ಶಾಂತ ವಸದ್ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಲುವಾಗಿಲು, ಅಂಜಿನಪ್ಪ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಾಚಿಹಳ್ಳಿಿ ಮಾತನಾಡಿದರು.
ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜು ಹಲುವಾಗಲು ಇಲ್ಲಿನ ಬೀಚಿ ರಂಗಮಂದಿರದಲ್ಲಿ ಶನಿವಾರ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಕಾಂಗ್ರೆೆಸ್ ಮುಖಂಡ ಮಲ್ಲಿಕಾರ್ಜುನಸ್ವಾಾಮಿ ಎಚ್ ಎಂ ಉದ್ಘಾಾಟಿಸಿದರು.
ಜಡೆಪ್ಪ ಎಚ್, ವೀರಯ್ಯ ಬಿ ಎಂ, ವಾಲಿ ಚನ್ನಬಸಪ್ಪ ಇಟ್ಟಿಿಗಿ, ಯುವರಾಜಗೌಡ, ಮಾರುತಿ ಯು, ರಾಮಪ್ಪ ಎಚ್ ಸೇರಿದಂತೆ ಇತರರಿದ್ದರು.
ವಸತಿ ಶಾಲೆಗಳು ಪ್ರತಿಭಾನ್ವಿತರ ಆಶಾಕಿರಣವಾಗಿವೆ: ಎಚ್.ಎಮ್.ಮಲ್ಲಿಕಾರ್ಜುನ ಸ್ವಾಮಿ

