ಸುದ್ದಿಮೂಲ ವಾರ್ತೆ ರಾಯಚೂರು, ಜ.01:
ರಾಯಚೂರಿನ ಜಿಲ್ಲಾಾ ಸರ್ಕಾರಿ ನೌಕರರ ಮನೋರಂಜನೆ ಕೇಂದ್ರದಲ್ಲಿ ರಾಗರಂಗ ಸಾಂಸ್ಕೃತಿಕ ಕಲಾ ವೇದಿಕೆಯ ವಾರ್ಷಿಕೋತ್ಸವದ ನಿಮಿತ್ತ ಸಂಗೀತ, ನೃತ, ಮತ್ತು ನಾಟಕ ಸಾಂಸ್ಕೃತಿಕ ಚಟುವಟಿಕೆಗಳ ಕಲಾ ಸಂಗಮ ಮನೋರಂಜನಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಾಟಿಸಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಮಾತನಾಡಿ, ಇಂತಹ ಕಾರ್ಯಕ್ರಮಗಳ ಮೂಲಕ ಕಲಾವಿದರ ಪ್ರೋೋತ್ಸಾಾಹಿಸುವ ಕೆಲಸ ಪಂಪಾಪತಿ ಹೂಗಾರ ಮಾಡುತ್ತಿಿರುವುದು ಶ್ಲಾಾಘನಿಯ ಎಂದರು.
ಆಹಾರ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ವೆಂಕಣ್ಣ ಮಾತನಾಡಿ ಶಿಕ್ಷಣ ಇಲಾಖೆಯ ಅಧಿಕಾರಿಯಾಗಿ ನಿವೃತ್ತಿಿಯಾಗಿರುವ ಪಂಪಾಪತಿ ಹೂಗಾರ ಅವರು ಸಂಗೀತ, ರಂಗಭೂಮಿ ಕ್ಷೇತ್ರಗಳಲ್ಲಿ ಅಭಿರುಚಿ ಉಳ್ಳವರಾಗಿದ್ದು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಿಸುತ್ತ ಹೊಸ ಪ್ರತಿಭೆಗಳಿಗೆ ವೇದಿಕೆ ನೀಡಿ ಪ್ರೋೋತ್ಸಾಾಹ ನೀಡುತ್ತಿಿರುವುದು ಸಂತೋಷದ ಹಾಗೂ ಹೆಮ್ಮೆೆಯ ವಿಷಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಇತ್ತಿಿಚೆಗೆ ನಿಧನರಾದ ಖ್ಯಾಾತ ಹಿಂದೂಸ್ತಾಾನಿ ಸಂಗೀತ ಶಿಕ್ಷಕ ನಾರಾಯಣ ಢಗೆ ಹಾಗೂ ರಂಗಭೂಮಿ ಕಲಾವಿದ ನರಸಿಂಗ್ ಮಲ್ಕಾಾರಿ ಅವರಿಗೆ ಸಂತಾಪ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಜಿ. ಸುದರ್ಶನ್ ಹಿಂದೂಸ್ತಾಾನಿ ಕ್ಲಾಾರಿಯೋನಿಟ್ ವಾದನ ಮಾಡಿದರು. ಕು.ವರ್ಷ ಶಕ್ತಿಿನಗರ ಇವರಿಂದ ಭರತನಾಟ್ಯ, ಪಂಪಾಪತಿ ಹೂಗಾರ, ವೀರೇಂದ್ರಕುಮಾರ್ ಕುರ್ಡಿ, ನರೇಂದ್ರಕುಮಾರ್, ದೀಪಾ, ಕ್ರಿಿಷ್ಟಪ್ಪ ಇಂಪಾದ ಹಾಡುಗಳ ಹಾಡಿದರು. ವೆಂಕಟ್ ನರಸಿಂಹಲು ತಂಡದವರಿಂದ ಖುರ್ಚಿ-ಖುರ್ಚಿ ಎಂಬ ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಂಡ ಕರ್ನಾಟಕ ಹೂಗಾರ ಸಂಘದ ರಾಜ್ಯಾಧ್ಯಕ್ಷ ಬಸವರಾಜ್ ಹೂಗಾರ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಪಂಪಾಪತಿ ಹೂಗಾರ, ನಿವೃತ್ತ ಪಿಡಿಓ ರಾಮದೇವಿ, ಜೆಸ್ಕಾಾಂನ ವಿಶ್ವನಾಥ ಹೂಗಾರ, ದೈಹಿಕ ಶಿಕ್ಷಕ ವೆಂಕಣ್ಣಘಿ, ನಿವೃತ್ತ ಶಿಕ್ಷಕ ಕಿಷ್ಟಪ್ಪಘಿ, ವೀರೇಂದ್ರ ಕುಮಾರ್ ಕುರ್ಡಿ, ಸುರೇಶಕುಮಾರ್ ಇತರರಿದ್ದರು.
ರಾಗರಂಗ ಸಾಂಸ್ಕೃತಿಕ ಕಲಾ ವೇದಿಕೆ ವಾರ್ಷಿಕೋತ್ಸವ ಕಲಾವಿದರಿಗೆ ಪ್ರೋತ್ಸಾಹ ಶ್ಲಾಘನೀಯ – ಪಾಟೀಲ

