ಸುದ್ದಿಮೂಲ ವಾರ್ತೆ ರಾಯಚೂರು, ಜ.01:
ದಿವಂಗತ ಜಿ.ಸುರೇಶ್ ಅವರ 67ನೇ ಜನ್ಮದಿನದ ಅಂಗವಾಗಿ ಗುರುವಾರ ಮಲಿಯಾಬಾದ್ ಸರ್ಕಾರಿ ಪ್ರೌೌಢ ಶಾಲೆಯ 10ನೇ ತರಗತಿ ವಿದ್ಯಾಾರ್ಥಿಗಳಿಗೆ ಪಠ್ಯ ಸಾಮಾಗ್ರಿಿ ಗಳ ವಿತರಿಸಲಾಯಿತು.
ಇಂದು ಬೆಳಿಗ್ಗೆೆ ಶಾಲೆಯಲ್ಲಿನ ವಿದ್ಯಾಾರ್ಥಿಗಳಿಗೆ ಪರೀಕ್ಷೆ ಪ್ಯಾಾಡ್, ಪೆನ್ ಮತ್ತು ಶಿಕ್ಷಕ ನೀಲಕಂಠ ಮಳಿಮಠ ಅವರು ರಚಿಸಿದ ಗಣಿತ ವಿಷಯಲ್ಲಿ ಸುಲಭವಾಗಿ ಪಾಸಾಗುವ ಪುಸ್ತಕಗಳನ್ನು ಜಿ.ಸುರೇಶ್ ಪ್ರತಿಷ್ಠಾಾನದ ವತಿಯಿಂದ ವಿತರಿಸಿದ ನಂತರ ಮಾತನಾಡಿದ ಸಾಹಿತಿ ವೀರಹನುಮಾನ , ಜಿ. ಸುರೇಶ್ ಅವರು ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿರುವುದನ್ನು ನೆನೆಪಿಸಿದರು. ಶಿಕ್ಷಣ ಸಂಸ್ಥೆೆಗಳಲ್ಲಿ ಸಕ್ರಿಿಯವಾಗಿ ಕಾರ್ಯನಿರ್ವಹಿಸುತ್ತಾಾ ವಿದ್ಯಾಾರ್ಥಿಗಳಿಗೆ ಆಪ್ತರಾಗಿ ಪ್ರೋೋತ್ಸಾಾಹಿಸುವ ಅನೇಕ ಕಾರ್ಯಕ್ರಮ ಮಾಡುತ್ತ ಬಂದ ಅವರ ನೆನಪಿನಲ್ಲಿ ಪ್ರತಿಷ್ಠಾಾನದ ಮೂಲಕ ಉತ್ತಮ ಕಾರ್ಯ ಕೈಗೆತ್ತಿಿಕೊಂಡಿದ್ದಕ್ಕೆೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಮುಖ್ಯೋೋಪಾಧ್ಯಾಾಯ ಹಾಜಿಮಲಂಗ್ ಮಾತನಾಡಿ, ಜಿ.ಸುರೇಶ್ ಪ್ರತಿಷ್ಠಾಾನ ಅರ್ಥಪೂರ್ಣ ಸೇವೆಗೆ ನಮ್ಮ ಶಾಲೆಯನ್ನು ಆಯ್ಕೆೆ ಮಾಡಿಕೊಂಡಿದ್ದು ಸಂತೋಷವಾಗಿದೆ. ಅವರು ನೀಡಿದ ಪರೀಕ್ಷಾ ಸಾಮಗ್ರಿಿ ವಿದ್ಯಾಾರ್ಥಿಗಳಿಗೆ ತುಂಬಾ ಉಪಯುಕ್ತವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಶಿವಲಿಂಗ ಬುಕ್ ಡಿಪೋ ಮಾಲಿಕರಾದ ಜಿ.ಬಸವರಾಜ, ಮಲ್ಕಪ್ಪ ಪಾಟೀಲ್, ಹೆಚ್.ರಾಜೇಶ, ಈರಣ್ಣ ಬೆಂಗಾಲಿ, ರಾವುತ್ರಾವ್ ಬರೂರ, ಜಿ.ಅಜಯ್ ಚೌದ್ರಿಿ, ತಾರಾನಾಥ, ವೆಂಕಟೇಶ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಜಿ.ಸುರೇಶ್ ಪ್ರತಿಷ್ಠಾನ ಉದ್ಘಾಟನೆ, ಪಠ್ಯ ಸಾಮಗ್ರಿ ವಿತರಣೆ

