ಸುದ್ದಿಮೂಲ ವಾರ್ತೆ ಲಿಂಗಸಗೂರು, ಜ.01:
ಲಯನ್ಸ್ ಕ್ಲಬ್ ತಾಲೂಕಾಧ್ಯಕ್ಷರಾದ ಸಿದ್ದರಾಮಪ್ಪ ಕಾಡ್ಲೂರುರವರು ಪತ್ರಿಿಕಾ ವಿತರಕರಿಗೆ ಹಾಗೂ ಹಾಲು ಮಾರುವವರಿಗೆ ಸ್ವೇಟರ ವಿತರಣೆ ಮಾಡಿ ಸದುಪಯೋಗ ಮಾಡಿಕೊಳ್ಳುವಂತೆ ಹೇಳಿದರು
ಅವರು ಪಟ್ಟಣದ ಕಲ್ಯಾಾಣ ಕರ್ನಾಟಕ ಪತ್ರಿಿಕಾ ಕಾರ್ಯಾಲಯದ ಮುಂದೆ ಏರ್ಪಡಿಸಿದ ಸರಳ ಕಾರ್ಯಕ್ರಮದಲ್ಲಿ ಪತ್ರಿಿಕಾ ವಿತರಕರು ಹಾಗೂ ಹಾಲು ಹಾಕುವವರಿಗೆ ಸುಮಾರು 30 ಸ್ವೆೆಟರ್ ಗಳನ್ನು ವಿತರಣೆ ಮಾಡಿ ಮಾತನಾಡುತ್ತಾಾ ಲಯನ್ಸ್ ಕ್ಲಬ್ ಹಲವಾರು ಜನೋಪಯೋಗಿ ಚಟುವಟಿಕೆಗಳನ್ನು ಮಾಡುತ್ತಿಿದ್ದು ಜನ ಮತ್ತು ಜಾನುವಾರುಗಳ ಸಮಸ್ಯೆೆಗಳಿಗೆ ಸ್ಪಂದಿಸುತ್ತಿಿದೆ ತಾಲೂಕಿನ ನಾಗರಾಳ ಹಾಗೂ ತೊರಲಬೆಂಚಿಯಲ್ಲಿ ಜಾನುವಾರುಗಳಿಗೆ ಲಸಿಕಾ ಕಾರ್ಯಕ್ರಮ ಮಾಡಲಾಯಿತು ಕಣ್ಣು ತಪಾಸಣಾ ಶಿಬಿರ, ಆರೋಗ್ಯ ಪರೀಕ್ಷಾ, ದುಶ್ಚಟಗಳ ನಿವಾರಣೆ ಕಾರ್ಐ ಸೇರಿದಂತೆ ಹಲವಾರು ಉಪಯುಕ್ತ ಕೆಲಸಗಳನ್ನು ಲಯನ್ಸ್ ಕ್ಲಬ್ ಮಾಡುತ್ತಾಾ ಬಂದಿದೆ
ಇತ್ತೀಚೆಗೆ ಚಳಿಗಾಲ ಪ್ರಾಾರಂಭವಾಗಿದ್ದು ಹೆಚ್ಚಿಿನ ಚಳಿಇದ್ದು ಜೀವದ ಹಂಗು ತೊರೆದು ತಮ್ಮ ಜೀವನಕ್ಕಾಾಗಿ ಪತ್ರಿಿಕಾ ವಿತರಕರ ಸೇವೆ ಹಾಗೂ ಹಾಲು ಮಾರಾಟ ಮಾಡುವವರು ಚಳಿಯಲ್ಲಿ ಓಡಾಡಬೇಕಾಗುತ್ತದೆ ಅಂತಹ ಸಮಸ್ಯೆೆಯನ್ನು ಗಮನಿಸಿ ಸುಮಾರು 30 ಸ್ವೇಟರ್ ಗಳನ್ನು ಅರ್ಹರಿಗೆ ಹಂಚಿಕೆಯನ್ನು ಮಾಡಲಾಯಿತು ಇದರ ಸದುಪಯೋಗವನ್ನು ಪಡೆಯಬೇಕೆಂದು ಹೇಳಿದರು
ಪತ್ರಿಿಕಾ ವಿತರಕರ ಪರವಾಗಿ ರಮೇಶ ರಾಠೋಡ ಮಾತನಾಡಿ ಚಳಿ ಮಳೆಯನ್ನು ಲೆಕ್ಕಿಿಸದೆ ಪತ್ರಿಿಕೆ ವಿತರಿಸಬೇಕಾಗುತ್ತದೆ ವಿತರಕರ ಸಂಕಷ್ಟವನ್ನು ಗಮನಿಸಿ ಸಿದ್ದರಾಮಪ್ಪ ಕಾಡ್ಲೂರುರವರು ನಮಗೆಲ್ಲ ಸ್ವೆೆಟರ್ ಕೊಡಿಸಿದ್ದು ಶ್ಲಾಾಘನೀಯವಾಗಿದೆ ಎಂದರು
ಈ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘದ ತಾಲೂಕಾಧ್ಯಕ್ಷ ಅಮರೇಶಪ್ಪ ಹೂನೂರು, ಲಯನ್ಸ್ ಕ್ಲಬ್ ನ ನಾಗರಾಜ ಗಸ್ತಿಿ ವಕೀಲರು, ಡಾ ಚಂದ್ರಶೇಖರ ನಾಗಲೀಕರ್, ಶರಣಬಸವರಾಜ ನಾಡಗೌಡ, ಲಕ್ಷ್ಮೀಪತಿ ಹಟ್ಟಿಿ, ಬಸವರಾಜ ವಕೀಲರು, ಲಕ್ಷ್ಮಣ ಬಾರಿಕೇರ್, ಎಂ,ಜಿ ಹಿರೇಮಠ, ಹಾಜೀಬಾಬು, ಕನಕಪ್ಪ, ಹನಮಂತಪ್ಪ,ಸೇರಿದಂತೆ ಇದ್ದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಕಾಡ್ಲೂರು ರಿಂದ ಪತ್ರಿಕಾ ವಿತರಿಕರಿಗೆ ಸ್ವೆಟರ್ ವಿತರಣೆ

