ಸುದ್ದಿಮೂಲ ವಾರ್ತೆ ಕೊಪ್ಪಳ, ಜ.01:
ಶ್ರೀ ಗವಿಸಿದ್ಧೇಶ್ವರ ಜಾತ್ರಾಾ ಮಹೋತ್ಸವದ ಶನಿವಾರ, ಸಂಜೆ 4 ಘಂಟೆಗೆ ಶ್ರೀ ಗವಿಸಿದ್ಧೇಶ್ವರ ಮೂರ್ತಿಯ (ಪಲ್ಲಕ್ಕಿಿ) ಮೆರವಣಿಗೆಯು ಕೋಟೆ ಪ್ರದೇಶದ ಜಡೇಗೌಡರ ಮನೆಯಿಂದ ಆರಂಭವಾಗುವದು.
ಇದರಲ್ಲಿ ನಂದಿಕೋಲು, ಡೊಳ್ಳು, ಭಜನೆ, ಭಾಜಾ-ಭಜಂತ್ರಿಿ, ಪಂಜು, ಇಲಾಲು ಹಾಗೂ ನಾಡಿನ ಸಾಂಸ್ಕ್ರತಿಕ ವೈಭವವನ್ನು ಬಿಂಬಿಸುವ ಕೊಪ್ಪಳ ಜಿಲ್ಲಾಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಅನೇಕ ಜಾನಪದ ಕಲಾ ತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸಲಿವೆ.
ಉತ್ತರ ಕನ್ನಡದ ಪುರಿಷೋತ್ತಮಗೌಡ ಹಾಗೂ ತಂಡ ಕಾರವಾರ) ಸುಗ್ಗಿಿ ಕುಣಿತ, ಹಿರೇವಕ್ಕಲಕುಂಟಾದ ಮಾರುತೇಶ್ವರ ಡೊಳ್ಳಿಿನ ಕಲಾತಂಡದವರಿಂದ ಡೊಳ್ಳು ಕುಣಿತ, ವಿಜಯಪುರದ ಸಿದ್ಧಾಾಪುರ ಕಾರಿಜೋಳ ರೇವಣಸಿದ್ಧೇಶ್ವರ ಕಲಾ ತಂಡದವರಿಂದ ಸತ್ತಿಿಗೆ ಕುಣಿತ, ಬಳ್ಳಾಾರಿಯ ಅಂಜಲಿ ಮತ್ತು ತಂಡದವರಿಂದ ಹಕ್ಕಿಿ ಪಿಕ್ಕಿಿ ಕುಣಿತ, ಉಡುಪಿಯ ವಾಸುದೇವ ತಂಡದವರಿಂದ ಚಂಡೇ ವಾದನ, ಮಹಲಿಂಗಪುರ ತಂಡದವರಿಂದ ಕರಡಿ ಮಜಲು, ಕುನನುರಿನ ಬಿನ್ನಾಾಳ ತಂಡದವರಿಂದ ಹಲಗೆ ವಾದನ, ತುಮಕುರಿನ ಅಳಿಲುಘಟ್ಟ ತಂಡದವರಿಂದ ಕೊಂಬು ಕಹಳೆ, ಮಂಡ್ಯದ ಕುದರಿಗುಂಡಿ ತಂಡದವರಿಂದ ಪೂಜಾ ಕುಣಿತ, ಮಂಡ್ಯದ ಸಾದೊಳಲು ತಂಡದವರಿಂದ ಭದ್ರಕಾಳಿ ಕುಣಿತ. ಕುಣಿಕೇರಿಯ ಜಂಜಲ ಮೇಳ ಜಾಂಜಲ, ಚಿಲಕಮುಖಿಯ ದಾಲ ಪಟ, ಉಪ್ಪಾಾರಗಟ್ಟಿಿಯ ನಂದಿಕೋಲು, ಮುದ್ದಾಾಬಳ್ಳಿಿಯ ಡೊಳ್ಳು ಕುಣಿತ, ಇವರಿಂದ ಜಾನಪದ ಕಲಾ ತಂಡಗಳ ಪ್ರದರ್ಶನ ನೀಡುತ್ತವೆ.

