ಸುದ್ದಿಮೂಲ ವಾರ್ತೆ ಗಂಗಾವತಿ, ಜ.01:
ಗಂಗಾವತಿ ನಗರವಲ್ಲದೆ ಸುತ್ತ-ಮುತ್ತಲಿನ ಅನೇಕ ಗ್ರಾಾಮಗಳ ಸರ್ವ ಜನಾಂಗದ ಆರಾಧ್ಯ ದೈವ, ತ್ರಿಿಕಾಲ ಜ್ಞಾಾನಿ, ಮಹಾ ತಪಸ್ವಿಿ, ಕಾಯಕಯೋಗಿ ಮುಂದೊಂದು ದಿನ ಗಂಗಾವತಿ ಛೋಟಾಬಾಂಬೆ ಎಂದು ಸಾರಿದ್ದ ಶ್ರೀಚನ್ನಬಸವ ತಾತನವರ 80ನೇ ವರ್ಷದ ಪುಣ್ಯಸ್ಮರಣೋತ್ಸವ ಅಂಗವಾಗಿ ಗುರುವಾರ ಸಂಜೆ ಭಾರಿ ಜನಸ್ತೋೋಮ ಮಧ್ಯೆೆ ಸಕಲ ವಾದ್ಯ-ಮೇಳಗಳೊಂದಿಗೆ ಅದ್ದೂರಿಯಿಂದ ಜೋಡು ರಥೋತ್ಸವ ಜರುಗಿತು.
ಶ್ರೀಚನ್ನಬಸವ ತಾತನವರ ರಥೋತ್ಸವದೊಂದಿಗೆ ಇಲ್ಲಿಯ ಮಲ್ಲಿಕಾರ್ಜುನ ಮಠದಲ್ಲಿನ ಶ್ರೀಈಶ್ವರ ದೇವರ ರಥೋತ್ಸವವೂ ಜರುಗಿತು.
ಬೆಳಿಗ್ಗೆೆ ಶ್ರೀಚನ್ನಬಸವ ತಾತನ ಕರ್ತೃ ಗದ್ದುಗೆಗೆ ರುದ್ರಾಾಭಿಷೇಕ, ಬಿಲ್ವಾಾರ್ಚನೆ, ಮಹಾ ಮಂಗಳಾರತಿ ನೆರವೇರಿಸಲಾಯಿತು. ಬಳಿಕ ಗದ್ದುಗೆಗೆ ಹಾಗೂ ಮೇಲಿರುವ ತಾತನವರ ಮೂರ್ತಿಗೆ ಬಗೆ ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಸಂಪ್ರದಾಯದಂತೆ ಬೆಳಿಗ್ಗೆೆ ಶ್ರೀಚನ್ನಬಸವ ಶಿವಯೋಗಿಗಳ ಮಡಿ ತೇರು ಎಳೆಯಲಾಯಿತು. ಜಾತ್ರಾಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಅಸಂಖ್ಯಾಾತ ಭಕ್ತ ಸಮೂಹಕ್ಕೆೆ ಅಚ್ಚುಕಟ್ಟಾಾಗಿ ಪ್ರಸಾದ ವ್ಯವಸ್ಥೆೆ ಮಾಡಲಾಗಿತ್ತು.
ತಿಂಗಳ ಪರಿಯಂತ ಇಲ್ಲಿಯ ಪುರಾಣ ಮಂಟಪದಲ್ಲಿ ಜರುಗಿದ
ಶ್ರೀಚನ್ನಬಸವತಾತನವರ ಪುರಾಣ ಮಹಾಮಂಗಲಗೊಂಡಿತು. ಹೆಬ್ಬಾಾಳ ಶ್ರೀನಾಗಭೂಷಣ ಶಿವಾಚಾರ್ಯ ಸಾನಿಧ್ಯದಲ್ಲಿ ದೇಗುಲದಲ್ಲಿ ಜರುಗಿದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ಜರುಗಿದವು.
ರಾಜ್ಯದ ಯಾವುದೇ ಮೂಲೆಯಲ್ಲಿ ವಾಸವಿದ್ದ ಭಕ್ತರು ಇಂದು ತಾತನ ದರ್ಶನಪಡೆದು ತಮ್ಮ ವಿವಿಧ ಅರಕೆಗಳನ್ನು ಸಲ್ಲಿಸಿ ದೇವರ ಕೃಪೆಗೆ ಪಾತ್ರರಾಗುತ್ತಾಾರೆ. ಕಾರಟಗಿ ಸೇರಿದಂತೆ ದೂರದ ಅನೇಕ ಗ್ರಾಾಮಗಳಿಂದ ಸರ್ವ ಧರ್ಮೀಯ ಭಕ್ತಾಾದಿಗಳು ಗುಂಪು-ಗುಂಪಾಗಿ ಸಹಸ್ರ ಸಂಖ್ಯೆೆಯಲ್ಲಿ ಗಂಗಾವತಿ ತಾತನ ದೇಗುಲಕ್ಕೆೆ ಪಾದಯಾತ್ರೆೆ ಮೂಲಕ ಆಗಮಿಸಿ ತಮ್ಮ ಹರಕೆ ತೀರಿಸಿ ಭಕ್ತಿಿ ಸೇವೆ ಸಮರ್ಪಿಸಿದರು. ಮತ್ತು ವಿವಿಧ ಉದ್ಯೋೋಗಗಳ ನಿಮಿತ್ಯ ರಾಜ್ಯದ ನಾನಾ ಜಿಲ್ಲೆೆಗಳಲ್ಲಿ ವಾಸವಿದ್ದ ಗಂಗಾವತಿಯ ಅನೇಕ ಭಕ್ತರು ತಮ್ಮ ಕುಟುಂಬ ಪರಿವಾರ ಸಮೇತ ಇಂದು ತಾತನ ದೇಗುಲಕ್ಕೆೆ ಆಗಮಿಸಿ ದರ್ಶನ ಪಡೆದು ತಮ್ಮ ಭಕ್ತಿಿ ಸೇವೆ ಸಮರ್ಪಿಸಿದರು.
ಶಾಸಕ ಗಾಲಿ ಜನಾರ್ಧನ ರೆಡ್ಡಿಿ, ಮಾಜಿ ಸಂಸದ ಎಸ್. ಶಿವರಾಮಗೌಡ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿಿ, ಜಿ.ವೀರಪ್ಪ ಕೇಸರಹಟ್ಟಿಿ, ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಾಮಿ, ಉದ್ಯಮಿಗಳಾದ ಕೆ.ಕಾಳಪ್ಪ, ವಿರುಪಾಕ್ಷಪ್ಪ ಸಿಂಗನಾಳ, ಸೂರಿಬಾಬು ನೆಕ್ಕಂಟಿ, ಸುರೇಶ ಸಿಂಗನಾಳ, ಕಳಕನಗೌಡ ಪಾಟೀಲ್, ಜಿ.ಶ್ರೀಧರ ಕೇಸರಹಟ್ಟಿಿ, ಮನೋಹರಗೌಡ ಹೇರೂರು, ಹೆಚ್.ಎಂ.ಸಿದ್ಧರಾಮಯ್ಯಸ್ವಾಾಮಿ, ಬಸವರಾಜ ಮಳೇಮಠ, ರಾಜು ನಾಯಕ, ಜೋಗದ ನಾರಾಯಣಪ್ಪ, ವೀರಭದ್ರಪ್ಪ ನಾಯಕ, ಜೋಗದ ಹನುಮಂತಪ್ಪ ನಾಯಕ ಮತ್ತು ಬಿಜೆಪಿ,ಕಾಂಗ್ರೆೆಸ್ ಸೇರಿದಂತೆ ಅನೇಕ ಹಾಲಿ ಮಾಜಿ ಚುನಾಯಿತರು ಮತ್ತು ಗಂಗಾವತಿ ಸೇರಿದಂತೆ ಸುತ್ತ-ಮುತ್ತಲಿನ ಅನೇಕ ಗ್ರಾಾಮಗಳ ಸರ್ವ ಸಮಾಜದ ಮುಖಂಡರು ಅಪಾರ ಸಂಖ್ಯೆೆಯ ಭಕ್ತಾಾದಿಗಳು ಈ ಜಾತ್ರಾಾ ಮಹೋತ್ಸವದಲ್ಲಿ ಭಾಗವಹಿಸಿ ತಾತನ ದರ್ಶನ ಪಡೆದು ಪುನಿತರಾಗಿ, ಸಂಜೆ ಸಕಲ ಅಲಂಕೃತಗೊಂಡ ಜೋಡು ರಥೋತ್ಸವದ ಸಂಭ್ರಮವನ್ನು ಕಣ್ತುಂಬಿಸಿಕೊಂಡು ಭಕ್ತಿಿಯಿಂದ ಬಾಳೆ ಹಣ್ಣು, ಉತ್ತತ್ತಿಿ, ಹೂವುಗಳನ್ನು ರಥಗಳಿಗೆ ಸಮರ್ಪಿಸಿ ನಮಸ್ಕರಿಸಿದರು.
ಭಾರಿ ಜನಸ್ತೋಮ ಮಧ್ಯೆ ಅದ್ದೂರಿಯಿಂದ ಗಂಗಾವತಿ ಶ್ರೀಚನ್ನಬಸವ ತಾತನ ಜೋಡು ರಥೋತ್ಸವ

