ಸುದ್ದಿಮೂಲ ವಾರ್ತೆ ಕೊಪ್ಪಳ, ಜ.01:
ಟಿಪ್ಪರ್ ಚಾಲಕರಿಗೆ ಯಾವುದೇ ನಿಯಮವಿದ್ದಂತೆ. ಟಿಪ್ಪರುಗಳು ಓಡಾಟದಿಂದ ಜನರು ಬೆಚ್ಚಿಿ ಬೀಳುವಂತಾಗಿದೆ. ಇದಕ್ಕೆೆ ಉದಾಹರಣೆಯಾಗಿ ಇಂದು ಎರಡು ಟಿಪ್ಪರುಗಳ ಅಪಘಾತ ಮಾಡಿರುವ ಪ್ರಕರಣ ನಡೆದಿವೆ.
ಕೊಪ್ಪಳ ತಾಲೂಕಿನ ಗಿಣಗೇರಿಯ ಬಳಿಯಲ್ಲಿ ಕಲ್ಯಾಾಣಿ ಸ್ಟೀಲ್ ಕಾರ್ಖಾನೆ ಬಳಿಯಲ್ಲಿ ಸರ್ಕಾರಿ ಬಸ್ಗೆ ಟಿಪ್ಪರ್ ಡಿಕ್ಕಿಿ ಹೊಡೆದಿದೆ. ಈ ಪರಿಣಾಮವಾಗಿ ಬಸ್ಸಿಿನಲ್ಲಿದ್ದ ನಾಲ್ವರಿಗೆ ಗಾಯವಾಗಿದೆ. ಗಾಯಾಳುಗಳನ್ನು ಜಿಲ್ಲಾಾಸ್ಪತ್ರೆೆಗೆ ದಾಖಲಿಸಲಾಗಿದೆ.
ಕೊಪ್ಪಳದಿಂದ ಹುಲಿಗಿ ಹೊರಟಿದ್ದ ಸಾರಿಗೆ ಬಸ್ ಗೆ ಕಲ್ಯಾಾಣಿ ಕಾರ್ಖಾನೆ ಅದಿರು ಸಾಗಿಸುತ್ತಿಿದ್ದ ಟಿಪ್ಪರ್ ಬಸ್ಗೆ ಹಿಂಬದಿಯಿಂದ ಗುದ್ದಿದ್ದರಿಂದ ಬಸ್ಸಿಿನ ಗಾಜುಗಳು ಚೂರು, ಬಸ್ಸಿಿನಲ್ಲಿದ್ದ ಮಹಿಳೆಯರಿಗೆ ಗಾಯವಾಗಿದೆ.
ಇನ್ನೊೊಂದು ಪ್ರಕರಣದಲ್ಲಿ ಕೊಪ್ಪಳ ನಗರದಲ್ಲಿ ಯದ್ವಾಾತದ್ವಾಾವಾಗಿ ಟಿಪ್ಪರು ಓಡಿಸಿ ಕಂಕರ ತುಂಬಿದ ಟಿಪ್ಪರ ಕಾರಿಗೆ ಡಿಕ್ಕಿಿ ಹೊಡೆದಿದೆ. ಇದರಿಂದಾಗಿ ಕಾರ್ ಹಿಂಭಾಗದಲ್ಲಿ ಸಂಪೂರ್ಣ ನುಜ್ಜುಗುಜ್ಜು ಆಗಿದೆ. ಕಾರ್ ಗೆ ಡಿಕ್ಕಿಿ ಹೊಡೆದು ಪರಾರಿಯಾಗಲು ಚಾಲಕ ಯತ್ನಸಿದ್ದ. ಆದರೆ ನಾಗರಿಕರು ತಡೆದು ಆಕ್ರೋೋಶ ವ್ಯಕ್ತಪಡಿಸಿದ್ದಾಾರೆ. ಟಿಪ್ಪರ ಓಡಾಟಕ್ಕೆೆ ಟಿಪ್ಪರ ವಿರುದ್ದ ನಾಗರಿಕರು ಸಿಡಿದೆದ್ದಾಾರೆ.
ಕೊಪ್ಪಳದ ನಗರಸಭೆಯ ಮುಂದೆ ಘಟನೆಯಿಂದಾಗಿ ಜನ ಜಮಾಯಿಸಿದ್ದರು. ಈ ವೇಳೆ ಟಿಪ್ಪರ್ ಚಾಲಕನ ವಿರುದ್ದ ನಾಗರಿಕರು ಹರಿಹಾಯ್ದು ಟಿಪ್ಪರ್ ತಡೆದಿದ್ದರು. ಸ್ಥಳಕ್ಕೆೆ ನಗರ ಸಂಚಾರಿ ಪೊಲೀಸರು ಬಂದು ವಾತಾವರಣ ತಿಳಿಗೊಳಿಸಿದ್ದಾಾರೆ.
ಟಿಪ್ಪರ್ಗಳ ದಾಂಗುಡಿ; ಒಂದೇ ದಿನ ಎರಡು ಕಡೆ ಅಪಘಾತ

