ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.03:
ಗುರುವಾರ ಸಂಜೆ ನಡೆದ ಬ್ಯಾಾನರ್ ಗಲಾಟೆಗೆ ಸಂಬಂಧಿಸಿದಂತೆ ನೂತನ ಎಸ್ಪಿಿ ಪವನ್ ನೆಜ್ಜೂರ್ ಅವರ ಅಮಾನತಿಗೆ ಬದಲು, ನಗರ ಡಿವೈಎಸ್ಪಿಿ ಅವರನ್ನು ಅಮಾನತು ಮಾಡಬೆಕು ಮತ್ತು ದ್ವೇಷ ಭಾಷಣ ವಿರೋಧಿ ಮಸೂದೆ (ಬಿಲ್) ಅಡಿಯಲ್ಲಿ ಶಾಸಕ ನಾರಾ ಭರತರೆಡ್ಡಿಿ ಅವರನ್ನು ಸರ್ಕಾರ ಬಂಧಿಸದಿದ್ದಲ್ಲಿ ಬಳ್ಳಾಾರಿಯಿಂದ ಬೆಂಗಳೂರಿಗೆ ಪಾದಯಾತ್ರೆೆ ನಡೆಸುವುದಾಗಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ತಿಳಿಸಿದ್ದಾಾರೆ.
ಶನಿವಾರ ಬೆಳಿಗ್ಗೆೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪವನ್ ನೆಜ್ಜೂರ್ ಅವರು ಕರ್ತವ್ಯಕ್ಕೆೆ ವರದಿ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ. ಈ ಘಟನೆಗೆ ಪವನ್ ಅವರನ್ನು ಹೊಣೆಗಾರರನ್ನಾಾಗಿ ಮಾಡಿದ್ದು ಸರ್ಕಾರದ ತಪ್ಪುು ನಿರ್ಧಾರ. ಗಲಭೆ ನಡೆದ ಸ್ಥಳವು ಡಿವೈಎಸ್ಪಿಿ ಚಂದ್ರಕಾಂತ ನಂದರೆಡ್ಡಿಿ ಅವರ ವ್ಯಾಾಪ್ತಿಿಗೆ ಬರಲಿದೆ. ಕಾರಣ ಅವರನ್ನೇ ಹೊಣೆಗಾರರನ್ನಾಾಗಿ ಮಾಡಬೇಕು ಎಂದರು.
ಬಳ್ಳಾಾರಿಯು ರಿಪಬ್ಲಿಿಕ್ ಕಾಂಗ್ರೆೆಸ್ ಆಗಿದೆ. ಮಹರ್ಷಿ ವಾಲ್ಮೀಕಿ ಹೆಸರಲ್ಲಿ ರಾಜಕೀಯ ನಡೆದಿದೆ. ವಾಲ್ಮೀಕಿ ಅಭಿವೃದ್ಧಿಿ ನಿಗಮದ ಹಗರಣ ಏನಾಯಿತು. ಶಾಸಕ ಜಿ. ಜನಾರ್ಧನರೆಡ್ಡಿಿ ಅವರಿಗೆ ಹೆಚ್ಚಿಿನ ಭದ್ರತೆ ನೀಡಬೇಕು. ಶಾಸಕ ಬಿ. ನಾಗೇಂದ್ರ ಅವರು ಬಳ್ಳಾಾರಿಯನ್ನು ಬಿಹಾರ ಮಾಡಲು ಯತ್ನಿಿಸಿದ್ದಾಾರೆ ಎಂದು ಆರೋಪಿಸಿದರು.
‘ರೌಡಿ ನಾಗೇಂದ್ರ, ಶಾಸಕರಾಗಿದ್ದು ನಮ್ಮಿಿಂದ’
ಮಾಜಿ ಸಚಿವ, ಶಾಸಕ ಬಿ. ನಾಗೇಂದ್ರ ರೌಡಿ. ಬಿ. ನಾಗೇಂದ್ರನನ್ನು ರಾಜಕೀಯಕ್ಕೆೆ ಕರೆದುಕೊಂಡು ಬಂದು, ಶಾಸಕರನ್ನಾಾಗಿ ಮಾಡಿದ್ದು ಬಿ. ಶ್ರೀರಾಮುಲು. ಈಗ, ಬಿ. ಶ್ರೀರಾಮುಲು ವಿರುದ್ಧ ಮಾತನಾಡುವ ಬಿ. ನಾಗೇಂದ್ರ, ಶ್ರೀರಾಮುಲುನ ಕಾಲಿನ ಧೂಳಿಗೂ ಸಮವಲ್ಲ ಎಂದು ಶಾಸಕ ಜಿ. ಜನಾರ್ಧನರೆಡ್ಡಿಿ ಅವರು ಟೀಕಿಸಿದ್ದಾಾರೆ.
ಬಿ. ನಾಗೇಂದ್ರನಿಗೆ ಆತ್ಮಸಾಕ್ಷಿ ಇದ್ದಲ್ಲಿ ಗುರುವಾರ ಸಂಜೆ ನಡೆದ ಘಟನೆಯಲ್ಲಿ ನಮ್ಮ ಮನೆಯ ಮೇಲೆ ಕಲ್ಲು ತೂರಿರುವ ಶಾಸಕ ನಾರಾ ಭರತರೆಡ್ಡಿಿಯ ಕ್ರಮವನ್ನು ಸಮರ್ಥನೆ ಮಾಡಿಕೊಂಡಿರುವುದು ಸರಿಯೇ? ವಾಲ್ಮೀಕಿ ಹಗರಣದಲ್ಲಿ ಸಿಕ್ಕಿಿಕೊಂಡಿರುವ ಬಿ. ನಾಗೇಂದ್ರ ಹೊರಬರಲು ಸಾಧ್ಯವಿಲ್ಲ. ಬಿ. ನಾಗೇಂದ್ರನ ರಾಜಕೀಯ ಮುಗಿದ ಕಥೆಯಾಗಿದೆ.
ನಗರ ಡಿವೈಎಸ್ಪಿಿ ಚಂದ್ರಕಾಂತ ನಂದರೆಡ್ಡಿಿ ಅವರು ಶಾಸಕ ನಾರಾ ಭರತರೆಡ್ಡಿಿ ಅವರನ್ನು ಎಸ್ಕಾಾರ್ಟ್ನಲ್ಲಿ ಎಸ್ಪಿಿ ಸರ್ಕಲ್ನಿಂದ ನಮ್ಮ ಮನೆಯವರೆಗೆ ಕರೆದುಕೊಂಡ ಬಂದು, ಇಡೀ ಗಲಭೆಗೆ ಕಾರಣವಾಗಿದ್ದಾಾರೆ. ಕಾರಣ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತು ಮಾಡಬೇಕು ಎಂದು ಅವರು ಆಗ್ರಹಿಸಿದರು.
ಅಷ್ಟೇ ಅಲ್ಲ, ಶಾಸಕ ನಾರಾ ಭರತರೆಡ್ಡಿಿ ಅವರು ಮಿಲ್ಲರಪೇಟೆಯ ದೌಲ ಅವರ ಮೂಲಕ ನಗರಾದ್ಯಂತ ಗಾಂಜಾ ವ್ಯವಹಾರ ನಡೆಸುತ್ತಿಿದ್ದಾಾರೆ ಎಂದು ದೌಲ ಮತ್ತು ಶಾಸಕರು ಇರುವ ವೀಡಿಯೋವನ್ನು ಪ್ಲೇ ಮಾಡಿ, ತೋರಿಸಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.

