ಸುದ್ದಿಮೂಲ ವಾರ್ತೆ ಲಿಂಗಸುಗೂರು, ಜ.03:
ಲಿಂಗಸೂಗೂರು ಪಟ್ಟಣದ ನಾನಾ ಕಚೇರಿಗಳಿಗೆ ಬೆಂಗಳೂರಿನ ಲೋಕಾಯುಕ್ತ ನ್ಯಾಾಯಾಧೀಶ ಎ.ವಿ.ಪಾಟೀಲ್ ನೇತೃತ್ವದ ಲೋಕಾಯುಕ್ತರ ತಂಡ ದಿಢೀರನೇ ಭೇಟಿ ನೀಡಿದ ಘಟನೆಯಿಂದ ವಿಚಲಿತರಾದ ಕೆಲ ಅಧಿಕಾರಿ ವರ್ಗ ಲೋಕಾಯುಕ್ತರ ಪ್ರಶ್ನೆೆಗಳಿಗೆ ಸರಿಯಾದ ಉತ್ತರ ನೀಡದು ತಡವರಿಸಿದರು.
ತಾಲೂಕಿನಲ್ಲಿ ಲಂಚ ಹಾಗೂ ಮಧ್ಯವರ್ತಿಗಳ ಅಕ್ರಮ ಹಾವಳಿ ಕುರಿತಾಗಿ ಸಾರ್ವಜನಿಕರಿಂದ ಬಂದ ದೂರಿನ ಹಿನ್ನಲೆ ಬೆಂಗಳೂರಿನ ಲೋಕಾಯುಕ್ತ ನ್ಯಾಾಯಾಧೀಶ ಎ.ವಿ.ಪಾಟೀಲ್ ನೇತೃತ್ವದ 20 ಲೋಕಾಯುಕ್ತ ಅಧಿಕಾರಿಗಳ ತಂಡ ಪಟ್ಟಣದ ಪುರಸಭೆ, ತಹಸೀಲ್ದಾಾರ, ಉಪನೊಂದಣಿ, ಆರೋಗ್ಯ ಇಲಾಖೆ ಸೇರಿ ತಾಲೂಕಿನ ವಿವಿಧ ಕಚೇರಿಗಳು ಸೇರಿ ನಾನಾ ಕಚೇರಿಗಳಿಗೆ ಏಕ ಕಾಲಕ್ಕೆೆ ಭೇಟಿ ನೀಡಿ ಕಡತ, ದಾಖಲೆಗಳು ಹಾಗೂ ವ್ಯವಹಾರ ಸಂಬಂಧಿತ ೈಲ್ಗಳ ಪರಿಶೀಲನೆ ನಡೆಸಿ ಸ್ಥಳದಲ್ಲಿದ್ದ ಅಧಿಕಾರಿಗಳ ವಿರುದ್ದ ಗರಂ ಆದ ಘಟನೆ ನಡೆದಿದೆ.
ಲೋಕಯುಕ್ತ ಅಧಿಕಾರಿಗಳು ಕೇಳುವ ಪ್ರಶ್ನೆೆಗಳಿಗೆ ಸರಿಯಾದ ಉತ್ತರ ನೀಡದ ಅಧಿಕಾರಿಗಳ ವಿರುದ್ದ ಗುಡುಗಿದ ಲೋಕಾಯುಕ್ತ ನ್ಯಾಾಯಾಧೀಶ ಎ.ವಿ.ಪಾಟೀಲ್ ಅವರು ನನಗೆ ಈ ೈಲ್ ಗೊತ್ತಿಿಲ್ಲ, ಅದು ನಾನು ಮಾಡಿಲ್ಲ, ಆ ಸೆಕ್ಷನ್ ನನಗೆ ಸಂಬಂಧಿಸಿದ್ದಲ್ಲವೆಂಬ ಅಧಿಕಾರಿಗಳ ಉತ್ತರಕ್ಕೆೆ ಕೋಪಗೊಂಡು ಸರಿಯಾಗಿ ಉತ್ತರ ಕೊಡಿ ಇಲ್ಲ ನಮ್ಮ ರೀತಿಯಲ್ಲಿ ಕೇಳಬೇಕಾಗುತ್ತದೆ. ನಮಗೆ ಈ ರೀತಿ ಉತ್ತರ ನೀಡುವ ನೀವು ಸಾರ್ವಜನಿಕರ ಹತ್ತಿಿರ ನಿಮ್ಮ ವರ್ತನೆ ಹೇಗಿರಬಹುದು ಎಂಬ ಮುನ್ನೆೆಚ್ಚರಿಕೆ ನೀಡಿ ಸರಿಪಡಿಸಿಕೊಳ್ಳದಿದ್ದರೆ ಸೂಕ್ತ ಕ್ರಮದ ಎಚ್ಚರಿಕೆ ನೀಡಿದರು.
ಪತ್ರಕರ್ತರಿಗೆ ಮಾಹಿತಿ ನೀಡಿದ ಲೋಕಾಯುಕ್ತ ನ್ಯಾಾಯಾಧೀಶ ಎ.ವಿ.ಪಾಟೀಲ್ ಹಲವಾರು ದೂರುಗಳ ಬಂದ ಹಿನ್ನೆೆಲೆಯಲ್ಲಿ ತಾಲೂಕಿನ ವಿವಿಧ ಕಛೇರಿಗಳಿಗೆ ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲಿಸಿದ್ದು ಸಮಗ್ರ ವರದಿ ದಿನಾಂಕ 7ರೊಳಗೆ ಮುಖ್ಯಲೋಕಾಯುಕ್ತರಿಗೆ ಸಲ್ಲಿಸುವುದಾಗಿ ತಿಳಿಸಿದರು. ಲೋಕಾಯುಕ್ತ ತಂಡದಲ್ಲಿ ಹೊಸಪೇಟೆ ಡಿ.ವೈ.ಎಸ್.ಪಿ ಸಚಿನ ಚಲುವಾದಿ, ಬೆಂಗಳೂರು ಪೊಲೀಸ್ ಇನ್ಸಪೆಕ್ಟರ್ ಆನಂದಗೌಡ ಇತರರಿದ್ದರು.
ಲಿಂಗಸೂಗೂರು ಕಚೇರಿಗಳಿಗೆ ಲೋಕಾಯುಕ್ತರ ದಿಢೀರ್ ಭೇಟಿ, ತಬ್ಬಿಬ್ಬಾದ ಅಧಿಕಾರಿಗಳು

