ಸುದ್ದಿಮೂಲ ವಾರ್ತೆ ರಾಯಚೂರು, ಜ.03:
ನಾವು ಯಾವಾಗಲೂ ಆರೋಗ್ಯವಂತರಾಗಿರಬೇಕಾದರೆ ತಾಜಾ ಗುಣಮಟ್ಟದ ತರಕಾರಿ, ಮನೆಯ ಊಟ ಸೇವಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ವೈದ್ಯ ಶಿವರಾಜ ಉತ್ತನೂರು ಹೇಳಿದರು.
ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಾಲಯದಲ್ಲಿ ಹಮ್ಮಿಿಕೊಂಡಿದ್ದ ಹೊಸ ವರ್ಷದ ಕಾರ್ಯಕ್ರಮದಲ್ಲಿ ಪಾಲ್ಗೊೊಂಡು ಮಾತನಾಡಿದರು.
ನಿತ್ಯ ಇಲ್ಲಸಲ್ಲದ ಪದಾರ್ಥ ಸೇವಿಸುವ ಬದಲಿಗೆ ಹೆಚ್ಚೆೆಚ್ಚು ಹಸಿ ತರಕಾರಿ ಬಳಸತಕ್ಕದ್ದು, ಮಾರುಕಟ್ಟೆೆಯಲ್ಲಿ ಸಿಗುವ ಸಿದ್ದ ಆಹಾರ ಪದಾರ್ಥಗಳನ್ನು ಸ್ವಲ್ಪ ಮಟ್ಟಿಿಗೆ ಬದಿಗೊತ್ತಿಿ ಶುದ್ಧ ತರಕಾರಿಗಳನ್ನು ಬಳಸುವುದು ಅತಿ ಅವಶ್ಯ ಎಂದರು.
ನಿತ್ಯವೂ ಹೆಚ್ಚಿಿನ ಮಟ್ಟಿಿಗೆ ನೀರು ಸೇವನೆ ಆರೋಗ್ಯಕ್ಕೆೆ ಉತ್ತಮ ಎಂದ ಅವರು ನಮ್ಮ ಆರೋಗ್ಯ ನಮ್ಮ ಜವಾಬ್ದಾಾರಿ ನಮ್ಮ ಕೈಯಲ್ಲಿಯೇ ಇದೆ ಎಂದು ಹೇಳಿದರು.
ಇದನ್ನೆೆಲ್ಲ ಬ್ರಹ್ಮಕುಮಾರಿ ವಿಶ್ವ ವಿದ್ಯಾಾಲಯವು ತನಗಾಗಿ ತಾನು ಏನನ್ನೂ ಬಯಸುವುದಿಲ್ಲ ಉತ್ತಮ ಆರೋಗ್ಯಘಿ, ಸದೃಢ ಸಮಾಜಕ್ಕಾಾಗಿ ಮಾರ್ಗದರ್ಶನ ಮಾಡುತ್ತಿಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜಯೋಗಿನಿ ಬಿ.ಕೆ.ಸ್ಮಿಿತಾ ಅಕ್ಕನವರು ಮಾತನಾಡಿ, ಎಲ್ಲರ ಬಾಳಲ್ಲಿ ಹೊಸ ವರ್ಷ ಬೆಳಕಾಗಲಿ ದುರಾಲೋಚನೆ ಮಾಡುವುದನ್ನು ಬಿಟ್ಟು ಸದಾ ಶಿವ ಚಿಂತನೆ, ಆಧ್ಯಾಾತ್ಮಿಿಕ ಚಿಂತನೆ, ಯೋಗ ಧ್ಯಾಾನಗಳ ಕಡೆ ಹೆಚ್ಚು ಸಮಯ ಕೊಡುವುದು ಈ ವರ್ಷದ ಮುಖ್ಯ ಉದ್ದೇಶವಾಗಿರಲಿ. ಮೊಬೈಲ್ ಬಳಕೆ ಮಾಡದೆ ಪುಸ್ತಕಗಳನ್ನು ಓದುವ, ಒಳ್ಳೆೆ ವಚನ ಕವಿತೆ ಭಗವಂತನ ಭಕ್ತಿಿಗೀತೆಳ ಆಲಿಸುವ ರೂಢಿ ಹಾಕಿಕೊಳ್ಳೋೋಣ ಎಂದು ಹೇಳಿದರು.
ಈ ತಿಂಗಳ 18ರ ವರೆಗೆ ವಿದ್ಯಾಾಲಯದಲ್ಲಿ ಬೆಳಿಗ್ಗೆೆ 06.30 ರಿಂದ 07.30 ರವರೆಗೆ ಒತ್ತಡ ಮುಕ್ತ ಜೀವನಕ್ಕಾಾಗಿ ರಾಜಯೋಗ ಶಿಬಿರ ಆಯೋಜಿಸಿದ್ದು ಭಾಗವಹಿಸಲು ಸಲಹೆ ಮಾಡಿದರು.
ಡಾ. ನಾಗಭೂಷಣ, ಡಾ. ಜ್ಯೋೋತಿ ಚೌಡಕಿ,ಡಾ. ವಿದ್ಯಾಾಶ್ರಿ, ಬಿ.ಕೆ. ಶಾರದಾ ಅಕ್ಕ, ಪಂ. ರಘುಪತಿ ಪೂಜಾರ ದಿನ್ನಿಿ ಸೇರಿ ಇತರರಿದ್ದರು.

