ಸುದ್ದಿಮೂಲ ವಾರ್ತೆ ರಾಯಚೂರು, ಜ.03:
ರಾಯಚೂರು ತಾಲೂಕಿನ ಮಮದಾಪುರ ಗ್ರಾಾಮದ ಎಂ.ಜಿ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಜಾಲಿಬೆಂಚಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲಿಕೋತ್ಸವ ಸಮಾರಂಭ ಹಮ್ಮಿಿಕೊಳ್ಳಲಾಗಿತ್ತುಘಿ.
ಕಾರ್ಯಕ್ರಮಕ್ಕೆೆ ಚಾಲನೆ ನೀಡಿದ ಶಾಲೆಯ ಮುಖ್ಯಸ್ಥ ಮಹೇಶ್ವರಿ ಬಸವರಾಜ್ ಮಾತನಾಡಿ, ಸರ್ಕಾರಿ ಅಥವಾ ಖಾಸಗಿ ಶಿಕ್ಷಣ ಸಂಸ್ಥೆೆ ಮೂಲ ಉದ್ದೇಶ ಪ್ರತಿಯೊಂದು ಮಗುವಿಗೆ ಶಿಕ್ಷಣ ಕೊಡುವುದು ಆಗಿದೆ. ಮಕ್ಕಳಲ್ಲಿರುವ ಸೂಪ್ತ ಪ್ರತಿಭೆ ಅನಾವರಣಕ್ಕೆೆ ಉತ್ತಮ ವೇದಿಕೆಯಾಗಲಿ ಎಂದು ಸಲಹೆ ಮಾಡಿದರು.
ಮುನಿಯಪ್ಪ ಮುದ್ದಪ್ಪ ಪದವಿ ಕಾಲೇಜಿನ ಪ್ರಾಾಚಾರ್ಯ ಹಾಗೂ ಮುಖ್ಯಸ್ಥ ಶರಣಬಸವ ಮಾತನಾಡಿ, ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಹೆಚ್ಚು ಆಸಕ್ತಿಿ ತೋರಿಸಲು ಮತ್ತು ಅವರಲ್ಲಿರುವ ಕಲೆಯನ್ನ ಪ್ರಸ್ತುತ ಪಡಿಸಲು ಶಿಕ್ಷಕರು ಮಹತ್ವದ ಕಾರ್ಯ ಮಾಡಬೇಕು ಅಂದಾಗ ನಮ್ಮ ವೃತ್ತಿಿ ಸಾರ್ಥಕತೆ ಆಗಲಿದೆ ಎಂದರು.
ಉಡಮಗಲ್ ಖಾನಾಪೂರದ ಸರ್ಕಾರಿ ಪ್ರೌೌಢಶಾಲೆ ಶಿಕ್ಷಕ ದಂಡಪ್ಪ ಬಿರಾದಾರ, ಜಾಲಿಬೆಂಚಿ ವಲಯದ ಸಿಆರ್ಪಿ ನೀಲಕಂಠ, ಸಂಸ್ಥೆೆಯ ಮುಖ್ಯಸ್ಥ ಬಸವರಾಜ್ ಮಾಲಿಪಾಟೀಲ್. ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾಾರ್ಥಿಗಳಿದ್ದರು.
ಮಮದಾಪುರ : ವಲಯ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ

