ಸುದ್ದಿಮೂಲ ವಾರ್ತೆ ಮಾನ್ವಿ, ಜ.03:
ಲೊಯೋಲಾ ಸಮಾಜ ಸೇವಾ ಕ್ಲಬ್ನ ವಿದ್ಯಾಾರ್ಥಿಗಳಿಂದ ಸಂಗ್ರಹಿಸಿದ ದೇಣಿಗೆಯ ಮೂಲಕ ಮಾನ್ವಿಿ ಬಸ್ ನಿಲ್ದಾಾಣದಲ್ಲಿ ತಾಯಿ ಎದೆ ಹಾಲು ಉಣಿಸುವ ಕೊಠಡಿ ಶನಿವಾರ ಉದ್ಘಾಾಟಿಸಲಾಯಿತು.
ಲೊಯೋಲಾ ಶಾಲೆಯ ನಿರ್ದೇಶಕ ಾ. ಸಿರಿಲ್ ರಾಜ್ ಹಾಗೂ ಲೊಯೋಲಾ ಪಿಯು ಕಾಲೇಜಿನ ಪ್ರಾಾಂಶುಪಾಲ ಾ. ಪ್ರವೀಣ್ ಕುಮಾರ ಅವರು ಕೊಠಡಿ ಉದ್ಘಾಾಟಿಸಿ ಇಂತಹ ಮಾನವೀಯ ಕಾರ್ಯಗಳು ಸಮಾಜದ ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ಶಿಶುಗಳ ಆರೈಕೆ ಮತ್ತು ತಾಯಂದಿರ ಗೌರವ ಹೆಚ್ಚಿಿಸುವ ನಿಟ್ಟಿಿನಲ್ಲಿ ಇದು ಮಹತ್ವದ ಹೆಜ್ಜೆೆಯಾಗಿದೆ ಎಂದು ಹೇಳಿದರು.
ಸಮಾಜ ಸೇವಾ ಕ್ಲಬ್ನಮುಖ್ಯ ಸಂಚಾಲಕ ಸುಭಾಷ್ ಸಿಂಗ್ ಮತ್ತು ಡೇವಿಡ್ ಕುಮಾರ ವಿದ್ಯಾಾರ್ಥಿಗಳ ಸಹಕಾರ ಶ್ಲಾಾಘಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಸೇವಾ ಕಾರ್ಯಕ್ರಮ ಹಮ್ಮಿಿಕೊಳ್ಳುವುದಾಗಿ ಹೇಳಿದರು. ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಜೂಲಿಯೆಟ್ ವಿದ್ಯಾಾರ್ಥಿಗಳ ಸೇವಾ ಭಾವನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಸ್ ಡಿಪೋ ವ್ಯವಸ್ಥಾಾಪಕ ಎಂ. ನಾಗರಾಜ ಮಾತನಾಡಿ, ಬಸ್ ನಿಲ್ದಾಾಣದಲ್ಲಿ ಪ್ರಯಾಣಿಸುವ ತಾಯಂದಿರಿಗೆ ಶಿಶು ಎದೆ ಹಾಲು ಉಣಿಸಲು ಇದುವರೆಗೆ ಸೂಕ್ತ ವ್ಯವಸ್ಥೆೆ ಇರಲಿಲ್ಲ. ಲೊಯೋಲಾ ಶಾಲೆಯ ಸಾಮಾಜಿಕ ಸೇವಾ ಕ್ಲಬ್ ಕೈಗೊಂಡ ಈ ಕಾರ್ಯ ಶ್ಲಾಾಘನೀಯವಾಗಿದೆ. ಸಾರ್ವಜನಿಕರ ಪರವಾಗಿ ಶಾಲೆ ಹಾಗೂ ವಿದ್ಯಾಾರ್ಥಿಗಳಿಗೆ ಕೃತಜ್ಞತೆ ತಿಳಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಲೊಯೋಲಾ ಪಿಯು ಕಾಲೇಜಿನ ಉಪ ಪ್ರಾಾಂಶುಪಾಲೆ ಶ್ರುತಿ ಖಾಸೀಮ್, ಘಟಕದ ಲೆಕ್ಕಪತ್ರ ಸಂಚಾಲಕ ನರೇಂದ್ರ ಸಿಂಗ್, ಕಿರಿಯ ಸಹಾಯಕ ಬಸಯ್ಯ ಗಡ್ಡಿಿ, ಟಿಸಿ ರಾಮಾಂಜನೇಯ, ಸಹಾಯಕ ಈರಪ್ಪ ಹಾಗೂ ಬಸ್ ನಿಲ್ದಾಾಣದ ಸಿಬ್ಬಂದಿ ಹಾಗೂ ಲೊಯೋಲಾ ಸಾಮಾಜ ಸೇವಾ ಕ್ಲಬ್ನ ವಿದ್ಯಾಾರ್ಥಿಗಳು, ಶಿಕ್ಷಕರು ಉಪಸ್ಥಿಿತರಿದ್ದರು.
ಮಾನ್ವಿ: ಲೊಯೋಲಾ ಸಂಸ್ಥೆಯಿಂದ ಬಸ್ ನಿಲ್ದಾಣದಲ್ಲಿ ತಾಯಿ ಎದೆ ಹಾಲು ಉಣಿಸುವ ಕೊಠಡಿ ಆರಂಭ

