ಸುದ್ದಿಮೂಲ ವಾರ್ತೆ ರಾಯಚೂರು, ಜ.03:
ರಾಯಚೂರು ಮತ್ತು ಸುತ್ತಮುತ್ತಲಿನ ಗ್ರಾಾಮಗಳಲ್ಲಿ ಕನ್ನಡ ಭಾಷೆ ಬಳಕೆ, ಬೆಳೆಸುವುದಕ್ಕೆೆ ಕನ್ನಡ ಪರ ಸಂಘ, ಸಂಸ್ಥೆೆಗಳು ಆದ್ಯತೆ ನೀಡುವಂತೆ ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಹೇಳಿದರು.
ಪಾಲಿಕೆಯ ಕಚೇರಿಯ ಸಭಾಂಗಣದಲ್ಲಿ ಕನ್ನಡ ಮಿತ್ರ ಕೂಟ ರಾಯಚೂರು ಸಮಿತಿಯಿಂದ ಮುದ್ರಿಿಸಿದ್ದ ಕನ್ನಡ ಅಂಕಿಗಳ ವಾರ್ಷಿಕ ದಿನ ದರ್ಶಿಕೆ ಬಿಡುಗಡೆ ಮಾಡಿ ಮಾತನಾಡಿದರು. ಕನ್ನಡ ಬೆಳವಣಿಗೆಯ ಜೊತೆಗೆ ಸುತ್ತಮುತ್ತಲ ವಾತಾವರಣ ಸ್ವಚ್ಛವಾಗಿ ಇಡಲು ಎಲ್ಲರ ಸಹಕಾರ ಕೋರಿದರು.
ನಗರದ ಸ್ವಚ್ಛತೆಗೆ ಗೋಡೆ ಬರಹದ ಮೂಲಕ ಇತಿಹಾಸ ಮೆಲಕು ಹಾಕಿಸುವ ಕೆಲಸ ಮಾಡುತ್ತಿಿದ್ದು ಸಂಘ ಸಂಸ್ಥೆೆಘಿ, ಜನರ ಸಹಕಾರಕ್ಕೆೆ ಮನವಿ ಮಾಡಿದರು. ಜನವರಿ ಕೊನೆಯ ವಾರದಲ್ಲಿ ಜಿಲ್ಲಾಡಳಿತದಿಂದ ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ರಾಯಚೂರು ಉತ್ಸವ ಹಮ್ಮಿಿಕೊಂಡಿದ್ದು ಕನ್ನಡ ಪರ ಸಂಘಟನೆಗಳು ಹಾಗೂ ಇನ್ನಿಿತರ ಸಂಘಟನೆಗಳು ಕೈ ಜೋಡಿಸಿದಾಗ ಮಾತ್ರ ಈ ಕಾರ್ಯಕ್ರಮ ಯಶಸ್ವಿಿಯಾಗಲು ಸಾಧ್ಯ, ಅದಕ್ಕಾಾಗಿ ಸಹಕಾರ ಸಹಯೋಗ ನೀಡಬೇಕೆಂದು ಕೋರಿದರು.
ಕನ್ನಡ ಮಿತ್ರ ಕೂಟದ ಅಧ್ಯಕ್ಷ ಅಶೋಕ್ ಕುಮಾರ ಜೈನ್, ಪ್ರೊೊಬೇಷನರಿ ಐಎಎಸ್ ಅಧಿಕಾರಿ ಪುರುರಾಜ್ ಸಿಂಗ್, ನಾಗರಾಜ್ ಹಾಗೂ ಭರತ್ , ಸಂಸ್ಥಾಾಪಕ ಬಶೀರ ಅಹ್ಮದ್ ಹೊಸಮನಿ ,ರಫೀಕ್ ಅಹಮದ್, ರಾಮಣ್ಣ ಮ್ಯಾಾದಾರ, ಚಂದ್ರಶೇಖರ ಪಾಟೀಲ್, ರಮೇಶ್ ಕಲ್ಲೂತಕ, ಎಸ್ ಹನುಮಂತಪ್ಪ ,ರುದ್ರಯ್ಯ ಗುಣಾರಿ, ಇಮಾಮುದ್ದೀನ್ ಮಾಡಗಿರಿ, ಹಾಗೂ ಜಗದೀಶ, ಗೋವಿಂದ್ ರಾಜ್, ಮಾನ್ಸಿಂಗ್, ಇತರರಿದ್ದರು.
ಕನ್ನಡ ಭಾಷೆ ಬೆಳೆಸಿ, ಉತ್ತಮ ಪರಿಸರಕ್ಕೆ ಕೈ ಜೋಡಿಸಿ – ಆಯುಕ್ತ

