ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಜ.03:
ಪಟ್ಟಣದಲ್ಲಿ ಕಳ್ಳತನ ನಡೆದ ಕೇವಲ 12 ಗಂಟೆಗಳಲ್ಲೇ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಹರಪನಹಳ್ಳಿಿ ಪೊಲೀಸರು ಯಶಸ್ವಿಿಯಾಗಿದ್ದಾರೆ.
ಮಂಗಳವಾರ ಬೆಳಗ್ಗೆೆ ನಗರದ ಬಾಣಗೇರಿಯ ಶಿಕ್ಷಕಿ ಬಿ ಶಹಾನಾಜ್ ಬೇಗಂ ಎಂಬುವವರ ಮನೆಯಲ್ಲಿ 15 ವರೆತೊಲ ಚಿನ್ನಾಾಭರಣ ಕಳ್ಳತನ ಮತ್ತು ನಗರದ ಬೇರೊಂದು ಪ್ರಕರಣದಿಂದ 3 ಲಕ್ಷ ಬೆಲೆ ಬಾಳುವ ಚಿನ್ನಾಾಭರಣ ಮತ್ತು 1 ಲಕ್ಷ ಬೆಲೆ ಬಾಳುವ ಆಟೋ ಕಳ್ಳತನ ಮಾಡಿದ್ದ ಆರೋಪಿಗಳಾದ ಸಂಗೀತ (35) ಮತ್ತು ಸಹೋದರ ಜಿ ವೆಂಕಟೇಶ (30)ಇವರುಗಳನ್ನು ಸದರಿ ಪ್ರಕರಣಗಳಿಂದ ಬಂಧಿಸಿ ಚಿನ್ನಾಾಭರಣಗಳನ್ನು ವಶಕ್ಕೆೆ ಪಡೆದುಕೊಂಡಿದ್ದಾರೆ.
ಇವರುಗಳು ಹರಪನಹಳ್ಳಿಿ ನಗರಕ್ಕೆೆ ಸಮೀಪದ ಕಾಯಕದಹಳ್ಳಿಿ ಗ್ರಾಾಮದವರಾಗಿದ್ದು ಶಿಕ್ಷಕಿ ಬಿ ಶಹಾನಾಜ್ ಬೇಗಂ ಮನೆ ಸೇರಿದಂತೆ ಹಲವಾರು ಮನೆಗಳಲ್ಲಿ ಮನೆ ಕೆಲಸಕ್ಕೆೆಂದು ಸೇರಿ ಚಿನ್ನಾಾಭರಣ ಸೇರಿದಂತೆ ಲಾಭದಾಯಕ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಬಂದರೆ ತಮ್ಮನಾದ ಜಿ ವೆಂಕಟೇಶನು ಅವುಗಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿಿದ್ದನೆಂದು ಹರಪನಹಳ್ಳಿಿ ಪಿಎಸ್. ಐ ಶಂಭುಲಿಂಗ ಎಸ್ ಹಿರೇಮಠ ತಿಳಿಸಿದ್ದಾರೆ.
ಕೆಲಸಕ್ಕೆೆ ಸೇರಿಸಿಕೊಳ್ಳುವ ಮುನ್ನ ನಿಗಾ ವಹಿಸಿ:
ನಗರ ಸೇರಿದಂತೆ ಗ್ರಾಾಮೀಣ ಪ್ರದೇಶದಿಂದ ಬರುವವರನ್ನು ಕೆಲಸಕ್ಕೆೆ ತೆಗೆದುಕೊಳ್ಳುವಾಗ ವಿಶೇಷ ನಿಗಾ ಇರಿಸಬೇಕು, ಅವರ ಪೂರ್ವಾಪರ ವಿಚಾರಿಸಬೇಕು, ಕೆಲಸಕ್ಕೆೆ ತೆಗೆದುಕೊಳ್ಳುವವರ ಸಮಗ್ರ ಮಾಹಿತಿ ಕಲೆ ಹಾಕಿರಬೇಕು, ಅವರ ನಡತೆಗಳ ಬಗ್ಗೆೆ ಹೆಚ್ಚಿಿನ ಗಮನ ಇರಬೇಕು ಎಂದು ಪೋಲೀಸರು ನಗರದ ನಿವಾಸಿಗಳಿಗೆ ತಿಳಿಸಿದ್ದಾರೆ.
ಹರಪನಹಳ್ಳಿ : ಕಳ್ಳ- ಕಳ್ಳಿ ಬಂಧನ

