ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.04:
ಶಾಸಕ ಭರತರೆಡ್ಡಿ ಅವರ ಆಪ್ತ ಗೆಳೆಯ ಸತೀಶ್ ರೆಡ್ಡಿಿಯ ಖಾಸಗಿ ಗನ್ಮೆನ್ಗಳು ಹಾರಿಸಿದ್ದ ಗುಂಡಿನಿಂದಲೇ ಬ್ಯಾಾನರ್ ಗಲಭೆಯಲ್ಲಿ ಗುಂಡು ತಗಲಿ ಮೃತಪಟ್ಟ ರಾಜಶೇಖರರೆಡ್ಡಿ ಮೃತಪಟ್ಟಿಿದ್ದಾಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಇಬ್ಬರು ಗನ್ಮೆನ್ ಸೇರಿ ಒಟ್ಟು 13 ಜನರನ್ನು ಪೊಲೀಸರು ಬಂಧಿಸಿದ್ದಾಾರೆ.
ಬ್ರೂಸ್ಪೇಟೆ ಪೊಲೀಸರು, ಸತೀಶ್ ರೆಡ್ಡಿಿಯ ಖಾಸಗಿ ಗನ್ಮೆನ್ಗಳಾಗಿರುವ ಪಂಜಾಬ್ ರಾಜ್ಯದ ಬಲಜಿತಸಿಂಗ್ ಮತ್ತು ಗುರುಚರಣ ಸಿಂಗ್ ಮತ್ತು ಬಳ್ಳಾಾರಿ ನಗರದ 11 ಜನರನ್ನು ಬಂಧಿಸಿ, ವೈದ್ಯಕೀಯ ತಪಾಸಣೆಯ ನಂತರ ನ್ಯಾಾಯಾಂಗ ಬಂಧನಕ್ಕೆೆ ಒಪ್ಪಿಿಸಿದ್ದಾಾರೆ.
ಸತೀಶ್ ರೆಡ್ಡಿಿ ಅವರು ಖಾಸಗಿಯಾಗಿ ಒಟ್ಟು ಆರು ಗನ್ಮೆನ್ಗಳನ್ನು ನೇಮಕ ಮಾಡಿಕೊಂಡಿದ್ದಾಾರೆ. ಬಂಧಿತರ ವಿಚಾರಣೆ ನಡೆದಿದೆ. ಒಟ್ಟು 45 ಜನರನ್ನು ಗುರುತಿಸಿ ವಿಚಾರಣೆ ನಡೆಸಲಾಗಿದೆ. ಪ್ರಕರಣದ ತನಿಖೆಯು ಡಿವೈಎಸ್ಪಿಿ ಚಂದ್ರಕಾಂತ ನಂದಾರೆಡ್ಡಿಿ ಹಾಗೂ ಬ್ರೂಸ್ಪೇಟೆ ಸಿಪಿಐ ಮಹಾಂತೇಶ್ ಅವರ ನೇತೃತ್ವದಲ್ಲಿ ನಡೆದಿದೆ.

