ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.04:
ಬ್ಯಾಾನರ್ ಗಲಭೆ ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ನೀಡದಿದ್ದಲ್ಲಿ ಬಿಜೆಪಿಯ ನಿಯೋಗವು ರಾಜ್ಯಪಾಲರಿಗೆ ಲಿಖಿತ ದೂರು ಸಲ್ಲಿಸಿ, ರಾಜ್ಯ ಸರ್ಕಾರಕ್ಕೆೆ ಸೂಕ್ತ ನಿರ್ದೇಶನ ನೀಡಲು ಕೋರುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತಿಳಿಸಿದ್ದಾಾರೆ.
ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹೈಕೋರ್ಟ್ನ ಹಾಲಿ ಮುಖ್ಯನ್ಯಾಾಯಾಧೀಶರಿಂದ ಇಡೀ ಘಟನೆಯ ತನಿಖೆ ನಡೆಸಬೇಕು ಅಥವಾ ಸಿಬಿಐ ತನಿಖೆಗೆ ಸರ್ಕಾರ ಶಿಾರಸ್ಸು ಮಾಡಬೇಕು. ಬಿಜೆಪಿಯು ಬೇರೆ ಯಾವುದೇ ತನಿಖೆ ಒಪ್ಪುುವುದಿಲ್ಲ. ಶಾಸಕ ಜಿ. ಜನಾರ್ಧನರೆಡ್ಡಿಿ ಅವರನ್ನು ಗುರಿಯನ್ನಾಾಗಿಸಿ ನಡೆದಿರುವ ದಾಳಿ ಇದಾಗಿದ್ದು, ಗಲಭೆಯನ್ನು ತಪ್ಪಿಿಸುವಲ್ಲಿ ಪೊಲೀಸ್ ಸಂಪೂರ್ಣ ವಿಲವಾಗಿದೆ ಎಂದರು.
ರೈಲ್ವೆೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಅವರು, ಸಿಎಂಗೆ ಕುರ್ಚಿ ಚಿಂತೆ, ಬಳ್ಳಾಾರಿ ಮಹಾನಗರ ಪಾಲಿಕೆ ಆಯುಕ್ತರಿಗೂ ಕುರ್ಚಿ ಚಿಂತೆ. ಅದಕ್ಕೇ ನಗರಾದ್ಯಂತ ಅನಧಿಕೃತವಾಗಿ ಬ್ಯಾಾನರ್ಗಳನ್ನು ಅಳವಡಿಸಲು ಅವಕಾಶ ನೀಡಿದ್ದಾಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ತುಂಬಾ ಒಳ್ಳೆೆಯವರು. ಕರ್ನಾಟಕದಲ್ಲಿ ಪ್ರತಿಯೊಬ್ಬ ಸಚಿವರೂ ಗೃಹ ಸಚಿವರೇ. ಪೊಲೀಸ್ ಇಲಾಖೆಯಲ್ಲಿ ನೈತಿಕತೆಯೇ ಇಲ್ಲವಾಗಿದೆ. ಲವ-ಕುಶರಂತೆ ಇದ್ದಿದ್ದ ಬಿ. ಶ್ರೀರಾಮುಲು – ಜಿ. ಜನಾರ್ಧನರೆಡ್ಡಿಿ ಒಂದಾಗಲು ಈ ಘಟನೆ ಕಾರಣವಾಗಿದೆ.
ಬಳ್ಳಾಾರಿ ಶಾಸಕ ನಾರಾ ಭರತರೆಡ್ಡಿಿ ಆವೇಗದಲ್ಲಿದ್ದಾಾನೆ. ಇಂಥಹವರು ಶಾಸಕರು ಎಂದು ಹೇಳಲು ನನಗೇ ಬೇಸರವಾಗುತ್ತಿಿದೆ. ಸರ್ಕಾರ ತಕ್ಷಣವೇ ಇವರನ್ನು ಬಂಧಿಸಬೇಕು. ಕಾಂಗ್ರೆೆಸ್ ನಾಶವಾಗುವ ಹಂತದಲ್ಲಿದೆ. ಶಾಸಕ ನಾರಾ ಭರತರೆಡ್ಡಿಿ ಸಾರ್ವಜನಿಕರ ಜೊತೆ ವ್ಯವಹರಿಸುವ ಕುರಿತು ಅಗತ್ಯವಿದ್ದಲ್ಲಿ ನನ್ನ ಜೊತೆ ಆರು ತಿಂಗಳು ಇರಲಿ, ಕಲಿಸುವೆ ಎಂದರು.
ವಿಧಾನಪರಿಷತ್ತಿಿನ ವಿರೋಧ ಪಕ್ಷದ ಮುಖಂಡ ಚಲುವಾದಿ ನಾರಾಯಣಸ್ವಾಾಮಿ ಅವರು, ಕಾಂಗ್ರೆೆಸ್ ಮೂರು ರಾಜ್ಯಗಳಲ್ಲಿ ಮಾತ್ರ ಆಡಳಿತದಲ್ಲಿದೆ. ಮುಂದಿನ ದಿನಗಳಲ್ಲಿ ಈ ಮೂರೂ ರಾಜ್ಯಗಳಲ್ಲಿ ಮತದಾರರು ಕಾಂಗ್ರೆೆಸ್ಗೆ ನಾಮ ಹಾಕಲಿದ್ದಾಾರೆ. ಇಡೀ ಪ್ರಕರಣದಲ್ಲಿ ಡಿವೈಎಸ್ಪಿಿ ಚಂದ್ರಕಾಂತ ನಂದಾರೆಡ್ಡಿಿ ಅವರನ್ನು ಸರ್ಕಾರ ತಕ್ಷಣವೇ ಅಮಾನತು ಮಾಡಬೇಕು. ಇಲ್ಲವಾದಲ್ಲಿ ಬಿಜೆಪಿ ಹೋರಾಟ ನಡೆಸಲಿದೆ ಎಂದರು.
ಈ ಸಂದರ್ಭಗಳಲ್ಲಿ ಶಾಸಕ ಜಿ. ಜನಾರ್ಧನರೆಡ್ಡಿಿ, ಮಾಜಿ ಸಚಿವ ಬಿ. ಶ್ರೀರಾಮುಲು, ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿಿ ಇನ್ನಿಿತರರು ಉಪಸ್ಥಿಿತರಿದ್ದರು.

