ಬೀರಪ್ಪ ಹೀರಾ ಕವಿತಾಳ, ಜ.05:
ಸಮೀಪದ ಬಾಗಲವಾಡ ಗ್ರಾಾಮದ ಸರಕಾರಿ ಪ್ರೌೌಢ ಶಾಲೆಯ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು ಕಳೆದ ಆರು ತಿಂಗಳಿಂದ ಕಾಮಗಾರಿ ಸಂಪೂರ್ಣ ಸ್ಥಗಿತವಾಗಿದೆ. ಈ ಬಗ್ಗೆೆ ಅಧಿಕಾರಿಗಳು ಮತ್ತು ಉಪ ಗುತ್ತೇದಾರರು ಕಾಳಜಿ ವಹಿಸುತ್ತಿಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಕೊಠಡಿಗಳ ಕೊರತೆಯಿಂದ ವಿದ್ಯಾಾರ್ಥಿಗಳಿಗೆ ಸಂಕಷ್ಟ ಉಂಟಾಗಿದೆ. ಕಲ್ಯಾಾಣ ಕರ್ನಾಟಕ ಅಭಿವೃದ್ಧಿಿ ಮಂಡಳಿ ಮೈಕ್ರೊೊ ಯೋಜನೆಯಡಿಯಲ್ಲಿ ಸರಕಾರಿ ಪ್ರೌೌಢ ಶಾಲೆಯಲ್ಲಿ ವಿದ್ಯಾಾರ್ಥಿಗಳ ಅನುಕೂಲಕ್ಕಾಾಗಿ 4 ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆೆ ಅಂದಾಜು 72 ಲಕ್ಷ ನೀಡಲಾಗಿದೆ. ಕಾಮಗಾರಿಗೆ ಚಾಲನೆ ನೀಡಿದ್ದ ಸಚಿವ ಎನ್. ಎಸ್. ಬೋಸರಾಜು ಮತ್ತು ಶಾಸಕ ಜಿ.ಹಂಪಯ್ಯ ನಾಯಕ ಅವರು ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿಿನ ಸೂಚನೆ ನೀಡಿದ್ದರೂ ಕಾಮಗಾರಿ ಗುತ್ತಿಿಗೆ ಪಡೆದ ಕೆಆರ್ಡಿಐಎಲ್(ಭೂಸೇನೆ) ಅಧಿಕಾರಿಗಳು ಕೆಲಸ ಪೂರ್ಣಗೊಳಿಸುವ ಕುರಿತು ಕಾಳಜಿ ವಹಿಸುತ್ತಿಿಲ್ಲ ಎಂದು ಗ್ರಾಾಮಸ್ಥರು ಆರೋಪ ಮಾಡುತ್ತಿಿದ್ದಾರೆ.
350 ಕ್ಕೂ ಹೆಚ್ಚಿಿನ ಮಕ್ಕಳು ಕಲಿಯುತ್ತಿಿದ್ದು 12 ಕೊಠಡಿಗಳಲ್ಲಿ 5 ಕೊಠಡಿಗಳು ಸೋರುತ್ತಿಿವೆ ಹೀಗಾಗಿ ಅವುಗಳನ್ನು ಸದ್ಯ ಬಳಕೆ ಮಾಡಲು ಆಗುತ್ತಿಿಲ್ಲ ತರಗತಿ ನಡೆಸಲು ಕೊಠಡಿಗಳ ಅಗತ್ಯವಿದೆ ಎಂದು ಶಿಕ್ಷಕರು ಅಭಿಪ್ರಾಾಯಪಡುತ್ತಾಾರೆ.
ಎರಡು ಮಹಡಿಯ 4 ಕೊಠಡಿಗಳ ನಿರ್ಮಾಣ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದೆ, ಗುಣಮಟ್ಟದ ಮರಳು ಸಿಮೆಂಟ್ ಹಾಕುತ್ತಿಿಲ್ಲ ಸಮಯಕ್ಕೆೆ ಸರಿಯಾಗಿ ನೀರು ಸಿಂಪಡಣೆ ಮಾಡುತ್ತಿಿಲ್ಲ. ಕಾಮಗಾರಿಯ ಮಾಹಿತಿ ನಾಮಲಕ ಕೂಡ ಹಾಕಿಲ್ಲ. 6 ತಿಂಗಳಿಂದ ಕಾಮಗಾರಿ ಸ್ಥಗಿತವಾಗಿರುವದರಿಂದ ಕುಡುಕರ ತಾಣವಾಗಿದೆ ಮದ್ಯಪಾನ, ಧೂಮಪಾನ ಮಾಡಿ ಬಾಟಲ್ ಒಡೆದು ಹಾಕಲಾಗಿದೆ, ಮಲವಿಸರ್ಜನೆ ಮಾಡಿ ಗಲೀಜು ಮಾಡಲಾಗಿತ್ತಿಿದೆ. ಮಕ್ಕಳ ಸಂಖ್ಯೆೆಗೆ ಅನುಗುಣವಾಗಿ ಕೊಠಡಿಗಳು ಇಲ್ಲದ ಕಾರಣ ಸಂಕಷ್ಟ ಪಡುವಂತಾಗಿದೆ. ಕೂಡಲೇ ಜನಪ್ರತಿನಿಗಳು ಇತ್ತಕಡೆ ಗಮನಹರಿಸಿ ಅಧಿಕಾರಿಗಳ ವಿರುದ್ದ ಕ್ರಮ ಜರಗಿಸಬೇಕು ಎಂದು ಎಸ್ ಡಿ ಎಂ ಸಿ ಸದಸ್ಯ ನಾಗರಾಜ ಹಿಂದಿನಮನಿ ಆಕ್ರೋೋಶ ವ್ಯಕ್ತಪಡಿಸಿದರು.
ಬಾಗಲವಾಡ ಗ್ರಾಮದ ಸರಕಾರಿ ಪ್ರೌಢಶಾಲೆ ಕೊಠಡಿಗಳ ನಿರ್ಮಾಣ ಕಾಮಗಾರಿ ನೆನೆಗುದಿಗೆ

