ಸುದ್ದಿಮೂಲ ವಾರ್ತೆ ರಾಯಚೂರು, ಜ.05:
ಇಲ್ಲಿನ ರಾಯಚೂರು ಮಹಾನಗರ ಪಾಲಿಕೆಯು ವಿಶೇಷವಾಗಿ ಆಯೋಜಿಸಿರುವ ವಿವಿಧ ಐಇಸಿ ಚಟುವಟಿಕೆಗಳ ಕಾರ್ಯಕ್ರಮಕ್ಕೆೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಹಾಗೂ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಅವರು ಚಾಲನೆ ನೀಡಿದರು.
ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಯಚೂರು ಮಹಾನಗರ ಪಾಲಿಕೆಯಿಂದ ರಾಯಚೂರು ನಗರದ ಸ್ವಚ್ಛತಾ ಅಭಿಯಾನದ ಸಹಿ ಸಂಗ್ರಹ ಅಭಿಯಾನಕ್ಕೆೆ ಸಚಿವರು ಹಾಗೂ ಶಾಸಕರು ಸಹಿ ಮಾಡಿ ಚಾಲನೆ ನೀಡಿದರು.
ರಾಯಚೂರ ನಗರ ಶುಚಿತ್ವಕ್ಕಾಾಗಿ ಜನವರಿ 12ರಂದು ಆಯೋಜಿಸಿರುವ ಸ್ವಚ್ಛತಾ ಓಟದ ಅಂಗವಾಗಿ ರೂಪಿಸಲಾಗಿದ್ದ ಸೆಲ್ಫಿಿ ಸ್ಟ್ಯಾಾಂಡನಲ್ಲಿ ಸಚಿವರು ಹಾಗೂ ಶಾಸಕರು ಭಾವಚಿತ್ರ ತೆಗೆಯಿಸಿಕೊಂಡರು. ಇದೆ ವೇಳೆ ವೇದಿಕೆಯ ಕಾರ್ಯಕ್ರಮ ನಡೆಯಿತು.
ಸಚಿವರು ಹಾಗೂ ಶಾಸಕರು ಮತ್ತು ಅಧಿಕಾರಿಗಳು ಸ್ವಚ್ಛತಾ ಓಟ ಸಂದೇಶದ ಕ್ಯಾಾಪ್ ಟಿ-ಶರ್ಟ್ ಬಿಡುಗಡೆ ಮಾಡಿದರು. 2026ರ ನೂತನ ಕ್ಯಾಾಲೆಂಡರ್ಗಳನ್ನು ಸಹ ಲೋಕಾರ್ಪಣೆ ಮಾಡಿದರು. ಇದೆ ವೇಳೆ ಸ್ವಚ್ಛತಾ ಓಟದ ಪೋಸ್ಟರಗಳನ್ನು ಸಹ ಬಿಡುಗಡೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ.ಎಸ್. ಶಿವರಾಜ ಪಾಟೀಲ್, ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ಆರ್.ಬಸನಗೌಡ ತುರ್ವಿಹಾಳ, ವಿಧಾನ ಪರಿಷತ್ ಶಾಸಕ ಎ.ವಸಂತಕುಮಾರ, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಅರುಣಾಂಕ್ಷು ಗಿರಿ, ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ, ಪಾಲಿಕೆಯ ಉಪ ಆಯುಕ್ತ ಸಂತೋಷ ರಾಣಿ, ಪಾಲಿಕೆಯ ಸಮಿತಿ ಕಾರ್ಯದರ್ಶಿ ಕೃಷ್ಣ ಶಾವಂತಗೇರಿ, ಪಾಲಿಕೆಯ ವಲಯ ಆಯುಕ್ತ ಮಲ್ಲಿಕಾರ್ಜುನ ಬಿ.ಎಂ., ಪಾಲಿಕೆಯ ಅಧಿಕಾರಿ ಕೃಷ್ಣ ಕಟ್ಟಿಿಮನಿ ಸೇರಿದಂತೆ ಇತರರು ಇದ್ದರು.
ರಾಯಚೂರು ಮಹಾನಗರ ಪಾಲಿಕೆಯಿಂದ ವಿಶೇಷ ಕಾರ್ಯಕ್ರಮ ರಾಯಚೂರು ಸ್ವಚ್ಛತೆಯ ಸಹಿ ಸಂಗ್ರಹ ಅಭಿಯಾನ, ಸ್ವಚ್ಛತಾ ಓಟಕ್ಕೆ ಚಾಲನೆ

