ಸುದ್ದಿಮೂಲ ವಾರ್ತೆ ರಾಯಚೂರು, ಜ.05:
ಸಾಮಾಜಿಕ ಕಾರ್ಯಕರ್ತನೆಂದು ಹೇಳಿಕೊಳ್ಳುತ್ತಿಿರುವ ಅಂಬಾಜಿರಾವ್ ಜಮೀನು ಅತಿಕ್ರಮಣ ಹಾಗೂ ನಕಲಿ ದಾಖಲೆ ಸೃಷ್ಟಿಿಸಿ ಜನಗಳಿಗೆ ಮೋಸ ಮಾಡುತ್ತಿಿದ್ದು ಗಡಿಪಾರು ಮಾಡಬೇಕೆಂದು ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ ಒತ್ತಾಾಯಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಸರ್ವೆ ನಂ.1423 ನಿವೇಶನದಲ್ಲಿ 27 ಗುಂಟೆ ಜಮೀನು ಚಂದ್ರಬಾಯಿ ಗಂಡ ಗೌಳಿ ಲಕ್ಷ್ಮಣರಾವ್ ಅವರಿಗೆ ಸೇರಿದ್ದು ಜಮೀನಿನ ನಕಲಿ ದಾಖಲೆ ಸೃಷ್ಟಿಿ ಮಾಡಿದ ವ್ಯಕ್ತಿಿ ಅಂಬಾಜಿ ರಾವ್ ತಂದೆ ಹೀರಾಲಾಲ್ ಮತ್ತು ಸ್ವಾಾತಿ ಗಂಡ ಅಂಬಾಜಿ ರಾವ್ ತಂದೆ ಹೀರಾಲಾಲ್ ಇವರೆಲ್ಲರೂ ಸೇರಿಕೊಂಡು ನಕಲಿ ಮರಣ ಪ್ರಮಾಣ ಸೃಷ್ಟಿಿಸಿ ತಹಸೀಲ್ದಾಾರ್ ಹಾಗೂ ಇಮಾಮ್ಪಾಷ ಮತ್ತು ರಾಯಚೂರು ಜಿಲ್ಲಾ ಅಧಿಕಾರಿ, ಮತ್ತು ಗ್ರಾಾಮಲೆಕ್ಕಾಾಧಿಕಾರಿ ಸೇರಿ ಎಲ್ಲರೂಜಮೀನು ವರ್ಗಾಯಿಸಿಕೊಟ್ಟಿಿದಾರೆ. ಇಂತಹ ಅಕ್ರಮ ತಡೆಯಲು ಕೋರಿದರು.
ಇವರ ವಿರುದ್ಧ ಈ ಹಿಂದೆ ನಗರಸಭೆ ಪೌರಾಯುಕ್ತರ ಮೇಲೆ ಹಲ್ಲೆೆ ಮಾಡಿದ ಪ್ರಕರಣದಲ್ಲಿ ರೌಡಿಶೀಟರ್ ಪ್ರಕರಣವಿದ್ದು ಕೂಡಲೆ ಅಂಬಾಜಿರಾವ್ ಮತ್ತವರ ಕುಟುಂಬದವರನ್ನು ಗಡಿಪಾರು ಮಾಡಲು ಆಗ್ರಹಿಸಿದರು. ಒಂದು ವಾರದೊಳಗೆ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸತ್ಯಾಾಗ್ರಹ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಿಯಲ್ಲಿ ಜಯರಾಜ್ ನಾಗಲಾಪುರ, ಮಂಜು, ಶಿವು, ಗೌತಮ್ ,ಜಿಲಾನಿ,ನಿಲೇಶ್ ಇತರರಿದ್ದರು.
ಅಂಬಾಜಿರಾವ್ ಗಡಿಪಾರು ಮಾಡದಿದ್ದರೆ ಹೋರಾಟ – ಪ್ರವೀಣಕುಮಾರ

