ಸುದ್ದಿಮೂಲ ವಾರ್ತೆ ರಾಯಚೂರು, ಜ.05:
ಭೀಮ್ ಆರ್ಮಿ ಜಿಲ್ಲಾಾಧ್ಯಕ್ಷ ಪ್ರವೀಣ ಕುಮಾರ ವೈಯಕ್ತಿಿಕ ತೇಜೋವಧೆ ಮಾಡಿ ಸುಳ್ಳು ದೂರು ನೀಡುತ್ತಿಿದ್ದ ಅವರೆಲ್ಲರ ವಿರುದ್ಧ ನ್ಯಾಾಯಾಲಯದಲ್ಲಿ ದಾವೆ ಹೂಡುವುದಾಗಿ ಸಾಮಾಜಿಕ ಕಾರ್ಯಕರ್ತ ಅಂಬಾಜಿರಾವ್ ಹೇಳಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಕಳೆದ ಕೆಲ ದಿನಗಳ ಹಿಂದೆ ನಗರದಲ್ಲಿ ನಕಲಿ ದಾಖಲೆ ಸೃಷ್ಟಿಿಸಿ ಆಸ್ತಿಿ ಲಪಟಾಯಿಸುತ್ತಿಿದ್ದ ಅಕ್ಷಯ ಕುಮಾರ ಭಂಡಾರಿ ಅಲಿಯಾಸ್ ಪ್ರಮೋದಕುಮಾರ, ಎಂಡಿ ಜಾವೀದ್, ಎ.ಹಸನ್ ವಿರುದ್ಧ ಹೋರಾಟ ಮಾಡಲಾಗಿತ್ತುಘಿ. ಅವರ ಕುಮ್ಮಕ್ಕಿಿನಿಂದ ಈ ಪ್ರವೀಣಕುಮಾರನನ್ನು ಎತ್ತಿಿ ಕಟ್ಟಲಾಗಿದೆ ಎಂದರು.
ಮುಕ್ತಾಾಯಗೊಂಡಿರುವ ಪ್ರಕರಣದಲ್ಲಿ ಆರೋಪಿ ಸ್ಥಾಾನದಲ್ಲಿ ನಿಲ್ಲಿಸುವ ಹುನ್ನಾಾರ ನಡೆಸಿದ್ದಾಾರಲ್ಲದೆ, ಈ ಬಗ್ಗೆೆ ತಾವು ಆಯುಕ್ತರಿಗೆ ಒಪ್ಪಿಿಗೆ ಪತ್ರ ನೀಡಿ ವಿವಾದ ಅಂತ್ಯಗೊಳಿಸಲಾಗಿದೆ. ಪಟ್ಟದಾರರಿಗೆ ಭೂಮಿ ನೀಡಲು ಕೋರಿದ್ದೇ ನಾನು. ಆದರೀಗ ಪ್ರವೀಣ ಕುಮಾರ ತಮ್ಮ ಹೆಸರಲ್ಲಿ ನಕಲಿ ಆಧಾರ, ವಂಶಾವಳಿ ಸೃಷ್ಟಿಿಸಿ ಆಸ್ತಿಿ ಪೋತಿ ಮಾಡಿಸಿಕೊಂಡಿದ್ದಾಾರೆ ಎಂದು ಹೇಳುತ್ತಿಿದ್ದಾಾರೆ. ಅಲ್ಲದೆ, ರಿಮ್ಸ್ ಆಸ್ಪತ್ರೆೆಯ ಶವಾಗಾರ ವಾಹನದ ಚಾಲಕನ ಭ್ರಷ್ಟಾಾಚಾರದ ಬಗ್ಗೆೆಯೂ ಬಹಿರಂಗವಾಗಿ ಮಾತನಾಡಿದ್ದೆೆ ಇದೆಲ್ಲವನ್ನು ಮುಂದಿರಿಸಿಕೊಂಡು ತೇಜೋವಧೆ ಮಾಡಲಾಗುತ್ತಿಿದೆ ಎಂದು ಆಪಾದಿಸಿದರು.
ಪ್ರವೀಣ್ ಕುಮಾರ ಅವರಿಗೆ ಮತ್ತು ಈ ಅಸ್ತಿಿಗೆ ಯಾವುದೇ ಸಂಬಂಧವಿರುವುದಿಲ್ಲ. ಇಂತಹ ಅರ್ಹತೆ ಇಲ್ಲದ ವ್ಯಕ್ತಿಿ ನನ್ನ ವಿರುದ್ಧ ಸಾರ್ವಜನಿಕರಿಗೆ ಸುಳ್ಳು ಅಪಪ್ರಚಾರ ಮಾಡುತ್ತಿಿದ್ದಾರೆ. ಸುದ್ದಿಗೋಷ್ಟಿಿ ಮತ್ತು ದೂರು ನೀಡಬೇಕಾದರೆ, ನೊಂದವರು ಇರಬೇಕು ರಾಯಚೂರು ನಗರದ ಯರಮರಸ್ ವ್ಯಾಾಪ್ತಿಿಯಲ್ಲಿ ಬರುವ ಸ.ನಂ 114/1, ರಲ್ಲಿ ಬರುವ 5 ಎಕರೆ ಈ ಜಮೀನು ಪ್ರವೀಣಕುಮಾರಗಾಗಲಿ ಅವರ ಕುಟುಂಬದವರಿಗಾಗಲಿ ಸಂಬಂಧ ಇರುವುದಿಲ್ಲ. ಸರಕಾರಿ ಭೂಮಿ ಇದ್ದರೆ ಮಾಡಲಿ, ಪಟ್ಟಾಾ ಭೂಮಿಗೆ ಮಾಡಲು ಅರ್ಹತೆ ಇರುವುದಿಲ್ಲವೆಂದರು.
ಅಲ್ಲದೆ, ತಮ್ಮ ವಿರುದ್ಧದ ಆಸ್ತಿಿ ಪ್ರಕರಣದಲ್ಲಿ ಮೂಲ ಮಾಲೀಕರು ಯಾವುದೆ ಮಾತು ಹೇಳಿಲ್ಲಘಿ. ದೂರು ನೀಡಿಲ್ಲ ಆದರೆ ಸಂಬಂಧವೇ ಇಲ್ಲದ ಭೀಮ್ ಆರ್ಮಿ ಅಧ್ಯಕ್ಷ ಎಂದು ಹೇಳಿಕೊಂಡು ಆರೋಪ ಮಾಡುತ್ತಿಿದ್ದು ತನ್ನ ತೇಜೋವಧೆ ಮುಂದುವರಿಸಿದರೆ ನ್ಯಾಾಯಾಲಯದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು.
ಇಂತಹ ದುಷ್ಟ ಕೃತ್ಯಳು ನಡೆದರೂ ನಾನು ಭಯ ಪಡುವುದಿಲ್ಲ, ನಾನು ಸಾರ್ವಜನಿಕರ ಪರ ಇನ್ನೂ ಹೆಚ್ಚಾಾಗಿ ಕೆಲಸ ಮಾಡುವೆ ಎಂದರು.
ಸುದ್ದಿಗೋಷ್ಠಿಿಯಲ್ಲಿ ಮಸೂದ್ ಅಲಿ, ಚಂದ್ರುಸಗಮಕುಂಟ, ಕಿಶನಕುಮಾರ ಇದ್ದರು.
ಸಂಘದ ಹೆಸರಲ್ಲಿ ತೇಜೋವಧೆ, ನ್ಯಾಯಾಲಯದಲ್ಲಿ ದಾವೆ – ಅಂಬಾಜಿರಾವ್

