ಸುದ್ದಿಮೂಲ ವಾರ್ತೆ ರಾಯಚೂರು, ಜ.05:
ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆೆ (ರಿಮ್ಸ್) ನಿರ್ದೇಶಕರು ಹಾಗೂ ಆಡಳಿತಾಧಿಕಾರಿಗಳು ನಿಷೇಧಿತ ಮಲಗುಂಡಿ ತೆಗೆಯುವ ಕೆಲಸವನ್ನು ಸಾಯಿ ಕರ್ಮಚಾರಿಗಳಿಂದ ಸ್ವಚ್ಛ ಮಾಡಿಸಿದ್ದು ನಿರ್ದೇಶಕರ ಮತ್ತು ಸಮಾಜ ಕಲ್ಯಾಾಣಾಧಿಕಾರಿಗಳ ಅಮಾನತ್ತು ಮಾಡಲು ಬಹುಜನ ದಲಿತ ಸಂಘರ್ಷ ಸಮಿತಿ ಮುಖಂಡ ಪ್ರಸಾದ ಭಂಡಾರಿ ಆಗ್ರಹಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ರಿಮ್ಸ್ ನಿರ್ದೇಶಕರು ಮತ್ತು ಆಡಳಿತಾಧಿಕಾರಿಗಳು ಹೊರಗುತ್ತಿಿಗೆ ಸಂಸ್ಥೆೆಯೊಂದಿಗೆ ಕೈಜೋಡಿಸಿ ಬಡ ಸಾಯಿ ಕರ್ಮಚಾರಿಗಳಿಂದ ಅಮಾನುಷ ಮತ್ತು ನಿಷೇಧಿತ ಮಲಗುಂಡಿ ಸ್ವಚ್ಚತೆ ಕಾರ್ಯ ಮಾಡಿಸುತ್ತಿಿರುವುದು ನಡೆದಿದ್ದು ಇದು ಮಹಾ ಅಪರಾಧವಾಗಿದೆ. ವೈದ್ಯಕೀಯ ಶಿಕ್ಷಣ ಭೋದಿಸುವ ಮತ್ತು ಆರೋಗ್ಯ ಸೇವೆ ಅರಿವು ಮೂಡಿಸುವ ರಿಮ್ಸ್ ಕಾಲೇಜಿನಲ್ಲಿಯೇ ಈ ದುರ್ಘಟನೆ ನಡೆದಿರುವುದು ನಾಚಿಕೆಯ ಸಂಗತಿಯಾಗಿದೆ ಎಂದು ಆಪಾದಿಸಿದರು.
ಕೆಲಸವನ್ನು ಪರಿಶಿಷ್ಟ ಜಾತಿಗೆ ಸೇರಿದ ಜನರಿಂದಲೆ ಮಾಡಿಸಲಾಗುತ್ತಿಿದ್ದು ಪರಿಶಿಷ್ಟ ಜಾತಿ ಸಮುದಾಯದ ಹಿತ ಕಾಪಾಡಬೇಕಾದ ಜಿಲ್ಲಾ ಸಮಾಜ ಕಲ್ಯಾಾಣ ಇಲಾಖೆಯ ಉಪನಿರ್ದೇಶಕರು ಈ ಅಮಾನುಷ ಪದ್ಧತಿಯನ್ನು ತಡೆಯದೆ ವೌನ ವಹಿಸಿರುವುದು ಗಂಭೀರ ನಿರ್ಲಕ್ಷವಾಗಿದ್ದು ತಕ್ಷಣ ಹೊರಗುತ್ತಿಿಗೆ ಪಡೆದವರ ಕಪ್ಪುು ಪಟ್ಟಿಿಗೆ ಸೇರಿಸಬೇಕು, ಇವರೆಲ್ಲರ ಅಮಾನತ್ತು ಮಾಡಿ ಕಾನೂನು ಪ್ರಕಾರ ದೂರು ದಾಖಲಿಸಿ, ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆೆ ತಾವು ವಿಡಿಯೋ, ಭಾವಚಿತ್ರ ಸಮೇತ ಜಿಲ್ಲಾಾ ಸಮಾಜ ಕಲ್ಯಾಾಣ ಇಲಾಖೆ ಅಧಿಕಾರಿ ಗಮನಕ್ಕೆೆ ತಂದು ಮೂರು ದಿನಗಳಾದರೂ, ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿಲ್ಲ ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕು. ಈ ಬೇಡಿಕೆಗಳು ಈಡೇರದಿದ್ದಲ್ಲಿ, ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಿಯಲ್ಲಿ ನರಸಿಂಹ ಗಧಾರ , ಸುಧಾಕರ ನೆಲಹಾಳ, ಸಾಗರ ಉರಕುಂದಪ್ಪ ಇತರರಿದ್ದರು.
ಸಾಯಿ ಕರ್ಮಚಾರಿಯಿಂದ ನಿಷೇಧಿತ ಮಲಗುಂಡಿ ಸ್ವಚ್ಛತೆ ರಿಮ್ಸ್ ನಿರ್ದೇಶಕ, ಸಮಾಜ ಕಲ್ಯಾಣಾಧಿಕಾರಿ ಅಮಾನತ್ತಿಗೆ ಭಂಡಾರಿ ಆಗ್ರಹ

