ಸುದ್ದಿಮೂಲ ವಾರ್ತೆ ರಾಯಚೂರು, ಜ.04:
ರಂಗೋಲಿ ಸ್ಪರ್ಧೆಗಳು ಸಾಂಸ್ಕೃತಿಕ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ತಲುಪಿಸಲು ಸಹಕಾರಿಯಾಗಿವೆ ಎಂದು ಶ್ರೀಸಾಯಿ ಧ್ಯಾಾನಮಂದಿರದ ಮುಖ್ಯಸ್ಥ ಸಾಯಿ ಕಿರಣ್ ಆದೋನಿ ಹೇಳಿದರು.
ಅವರಿಂದು ನಗರದ ಸಾಯಿಮಂದಿರದಲ್ಲಿ ಗ್ಯಾಾರಂಟಿ ನ್ಯೂಸ್ ವತಿಯಿಂದ ಸಂಕ್ರಾಾತಿ ಹಬ್ಬದ ಹಿನ್ನೆೆಲೆಯಲ್ಲಿ ಹಮ್ಮಿಿಕೊಂಡಿದ್ದ ರಂಗೋಲಿ ಸ್ವರ್ಧೆ ಉದ್ಘಾಾಟಿಸಿ ಮಾತನಾಡಿದರು ಸಂಕ್ರಾಾಂತಿ ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಸೌಹಾರ್ದತೆ ಪ್ರತಿಬಿಂಬಿಸುವ ಹಬ್ಬ. ಇಂತಹ ರಂಗೋಲಿ ಸ್ಪರ್ಧೆಗಳು ಸಾಂಸ್ಕೃತಿಕ ಮೌಲ್ಯಗ ಮುಂದಿನ ತಲೆಮಾರಿಗೆ ತಲುಪಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು. ಮಹಿಳೆಯರ ಕಲಾತ್ಮಕತೆ ಉತ್ತೇಜಿಸುವ ನಿಟ್ಟಿಿನಲ್ಲಿ ಗ್ಯಾಾರಂಟಿ ನ್ಯೂಸ್ ಕೈಗೊಂಡಿರುವ ಈ ಪ್ರಯತ್ನ ಶ್ಲಾಾಘನೀಯ ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಸ್ವಾಾಮಿ ಮಾತನಾಡಿ ಗ್ಯಾಾರೆಂಟಿ ನ್ಯೂಸ್ ವತಿಯಿಂದ ಆಯೋಜಿಸಲಾದ ರಂಗೋಲಿ ಸ್ಪರ್ಧೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉತ್ತಮ ಪ್ರಯತ್ನವಾಗಿದೆ.
ರಂಗೋಲಿ ಕೇವಲ ಕಲೆಯಲ್ಲ, ಅದು ನಮ್ಮ ಮನಸ್ಸಿಿನ ಸೃಜನಶೀಲತೆ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಮಹಿಳೆಯರು ಹಾಗೂ ಯುವತಿಯರು ಈ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಒಗ್ಗಟ್ಟು ಹೆಚ್ಚಾಾಗುತ್ತದೆ ಎಂದರು.
ನಂತರ ಪ್ರಥಮ ಸ್ಥಾಾನವನ್ನು ವಾಣಿ ಗಂಡ ವೆಂಕಟೇಶ್ , ದ್ವಿಿತೀಯ ಸ್ಥಾಾನವನ್ನು ಶಶಿಧರ್ ಅಂಗಡಿ , ತೃತೀಯ ಸ್ಥಾಾನವನ್ನು ಸಂಗೀತಾ ಪಡೆವರಿಗೆ ಗಣ್ಯರಿಂದ ನಗದು ಬಹುಮಾನ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಯಿತು. ಅಲ್ಲದೇ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿಿ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ನಾಗವೇಣಿ, ಪೂರ್ಣಿಮಾ ಶಿಕ್ಷಣ ಸಂಸ್ಥೆೆ ಅಧ್ಯಕ್ಷ ಕೇಶವರೆಡ್ಡಿಿ , ಕವಿತಾ ಆದೋನಿ , ಮಹೇಶ್ವರಿ ಬಿ ಗಚ್ಚಿಿನಮನಿ , ವಿಜಯರಾಜೇಶ್ವರಿ ಗೋಪಶೆಟ್ಟಿಿ , ಪ್ರತಿಭಾ ಗೋನಾಳ್ , ದಂಡಪ್ಪಬಿರದಾರ್ ಸೇರಿದಂತೆ ನೂರಾರು ಭಕ್ತಾಾದಿಗಳು ಉಪಸ್ಥಿಿತರಿದ್ದರು.
ಸಂಕ್ರಾತಿ ಹಿನ್ನೆಲೆ ಗ್ಯಾರಂಟಿ ನ್ಯೂಸ್ ವತಿಯಿಂದ ರಂಗೋಲಿ ಸ್ವರ್ಧೆ

