ಸುದ್ದಿಮೂಲ ವಾರ್ತೆ ಕವಿತಾಳ, ಜ.06:
ಸಮೀಪದ ಮಸ್ಕಿಿ ತಾಲೂಕಿನ ಹಾಲಾಪುರ ನಾಡ ಕಚೇರಿಯಲ್ಲಿ ಅಧಿಕಾರಿಗಳ ಗೈರು ಹಾಜರಿಗೆ ಬೇಸತ್ತ ಸಾರ್ವಜನಿಕರು ಅಧಿಕಾರಿಗಳ ವಿರುದ್ದ ಆಕ್ರೋೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದಿದೆ.
ಬೆಳಿಗ್ಗೆೆ ಕಚೇರಿಗೆ ಆಗಮಿಸಿದ ಸಾರ್ವಜನಿಕರು ಖಾಲಿ ಖುರ್ಚಿಗಳನ್ನು ಕಂಡು ಬೇಸರ ವ್ಯಕ್ವಪಡಿಸಿದರು, ಸಮಯಕ್ಕೆೆ ಸರಿಯಾಗಿ ಅಧಿಕಾರಿಗಳು ಕಚೇರಿಗೆ ಬಾರದ ಹಿನ್ನೆೆಲೆಯಲ್ಲಿ ಪ್ರತಿನಿತ್ಯ ಕಚೇರಿಗೆ ಅಲೆಯುವಂತಾಗಿದೆ ಪಾಣಿ, ಜಾತಿ ಮತ್ತು ಆದಾಯ ವೃದ್ಧರ ಮಾಸಾಶನ ಪ್ರಮಾಣ ಪತ್ರ ಸೇರಿದಂತೆ ಇನ್ನಿಿತರ ಪತ್ರಗಳು ಪಡೆಯಬೇಕೆಂದರೆ ತಿಂಗಳ ಗಟ್ಟಲೆ ಅಲಿಯಬೇಕು. ಗ್ರಾಾಮ ಲೆಕ್ಕಾಾಧಿಕಾರಿಗಳು, ಉಪ ತಹಸೀಲ್ದಾಾರರು ಮತ್ತು ಕಂದಾಯ ನಿರೀಕ್ಷಕರು ಸೇರಿದಂತೆ ಕೇಸ್ ವರ್ಕರ್ ಕಚೇರಿಗೆ ಬರುತ್ತಿಿಲ್ಲ ಒಬ್ಬ ಕಂಪ್ಯೂೂಟರ್ ಆಪರೇಟರ್ ಮಾತ್ರ ಕಚೇರಿಯಲ್ಲಿದ್ದಾರೆ ಎಂದು ಗ್ರಾಾಮ ಪಂಚಾಯತಿ ಮಾಜಿ ಅಧ್ಯಕ್ಷ ರವಿ ದೇಸಾಯಿ ಅಧಿಕಾರಿಗಳ ವಿರುದ್ದ ಆಕ್ರೋೋಶ ವ್ಯಕ್ತಪಡಿಸಿದರು.
ಮೂರು ತಿಂಗಳಿಂದ ಕಚೇರಿಗೆ ಅಲೆಯುತ್ತಿಿದ್ದೇವೆ ಮದ್ಯಾಾಹ್ನ 12 ಗಂಟೆಯಾದರೂ ಅಧಿಕಾರಿ ಮತ್ತು ಸಿಬ್ಬಂದಿ ಬರುತ್ತಿಿಲ್ಲ ಬೆಳಿಗ್ಗೆೆಯಿಂದ ಕಾದು ಕುಳಿತಿದ್ದ ಮಹಿಳೆಯರು, ಅಂಗವಿಕಲರು ಮರಳಿ ತೆರಳಿದರು.
ಹಾಲಾಪುರ ನಾಡ ಕಚೇರಿ ವ್ಯಾಾಪ್ತಿಿಗೆ 30 ಹಳ್ಳಿಿಗಳು ಬರುತ್ತವೆ ವಯೋವೃದ್ದರು, ಮಹಿಳೆಯರು, ಅಂಗವಿಕಲರು ವಿವಿಧ ಕೆಲಸ ಕಾರ್ಯಗಳಿಗೆ ಪ್ರತಿನಿತ್ಯ ದೂರದ ಮಲ್ಲದಗುಡ್ಡ, ಹಿರೇದಿನ್ನಿಿ, ಚಿಕ್ಕದಿನ್ನಿಿ, ತೋರಣದಿನ್ನಿಿ, ಮಲ್ಕಪುರು, ಮರಕಂ ದಿನ್ನಿಿ, ಬಸಾಪುರು ಸೇರಿದಂತೆ ಇನ್ನು ಅನೇಕ ಗ್ರಾಾಮಗಳಿಂದ ಬರುವ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದನೆ ಸಿಗುತ್ತಿಿಲ್ಲವೆಂದು ಅಧಿಕಾರಿಗಳ ವಿರುದ್ಧ ದೂರಿದರು. ೆನ್ ಕರೆ ಮಾಡಿದರೆ ಮಸ್ಕಿಿಗೆ ಬನ್ನಿಿ ಎಂದು ಅಧಿಕಾರಿಗಳು ಹೇಳುತ್ತಾಾರೆ ಬೈಕ್ ಇದ್ದವರು ಹೋಗುತ್ತಾಾರೆ, ಅಂಗವಿಕಲರು, ಮಹಿಳೆಯರು ಹೇಗೆ ಹೋಗಬೇಕು. ಈ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆೆ ತಂದರು ಪ್ರಯೋಜನವಾಗಿಲ್ಲ ಎಂದು ವೀರನಗೌಡ ದಳಪತಿ, ಅರಳಪ್ಪ ಯದ್ದಲದಿನ್ನಿಿ ಆರೋಪಿಸಿದರು. ಸಮಯಕ್ಕೆೆ ಸರಿಯಾಗಿ ಅಧಿಕಾರಿಗಳು ಬಾರದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಕುಮಾರ ರಾಮಲದಿನ್ನಿಿ, ಅಮರೇಶ ಜಂಗಮರಹಳ್ಳಿಿ, ಎಚ್ಚರಿಸಿದರು.
ಸೋಮವಾರ ತಾವು ಭೇಟಿ ನೀಡಿದ ಸಮಯದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಯಲ್ಲಿ ಲಭ್ಯವಿದ್ದರೂ ಪ್ರತಿನಿತ್ಯ ಹೀಗಾಗುವುದಿಲ್ಲ ಈ ಬಗ್ಗೆೆ ಅಲ್ಲಿನ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಕಚೇರಿ ಸಮಯಕ್ಕೆೆ ತೆರಳಿ ಜಿಪಿಎಸ್ ೆಟೋ ಕಳುಹಿಸುವಂತೆ ಸೂಚಿಸಿದ್ದೇನೆ ಮುಂದೆ ಹೀಗಾಗದಂತೆ ನೋಡಿಕೊಳ್ಳಲಾಗುವುದು ಎಂದು ಮಸ್ಕಿಿ ತಹಸೀಲ್ದಾಾರ ಮಂಜುನಾಥ ಭೋಗಾವತಿ ಪ್ರತಿಕ್ರಿಿಯಿಸಿದರು.
ಹಾಲಾಪುರ ನಾಡ ಕಚೇರಿಯಲ್ಲಿ ಅಧಿಕಾರಿಗಳ ಗೈರು : ಸಾರ್ವಜನಿಕರ ಆಕ್ರೋಶ

