ಸುದ್ದಿಮೂಲ ವಾರ್ತೆ ಸಿಂಧನೂರು, ಜ.07:
ತಾಲೂಕಿನ ತುರವಿಹಾಳ ಪೊಲೀಸ್ ಠಾಣಾ ವ್ಯಾಾಪ್ತಿಿಯಲ್ಲಿ ನಡೆದ ಅಪ್ರಾಾಪ್ತ ಬಾಲಕಿಯ ಮೇಲಿನ ಅತ್ಯಾಾಚಾರ ಪ್ರಕರಣಕ್ಕೆೆ ಸಂಬಂಧಿಸಿದಂತೆ ಅಪರಾಧಿಗೆ 3ನೇ ಹೆಚ್ಚುವರಿ ಜಿಲ್ಲಾಾ ಮತ್ತು ಸತ್ರ ಪೋಕ್ಸೋೋ ನ್ಯಾಾಯಾಲಯವು 20 ವರ್ಷ ಕಠಿಣ ಶಿಕ್ಷೆ ಹಾಗೂ 15 ಸಾವಿರ ರೂ.ಗಳ ದಂಡ ವಿಧಿಸಿ ಆದೇಶಿಸಿದೆ.
ಮಸ್ಕಿಿ ತಾಲೂಕಿನ ಅಂಕನಾಳ ಗ್ರಾಾಮದ ಹನುಮಂತ ಪೂಜಾರಿ ಎನ್ನುವ ಆರೋಪಿ ಶಿಕ್ಷೆಗೆ ಗುರಿಯಾಗಿದ್ದಾಾನೆ. ಬಾಲಕಿಯ ತಂದೆ ನೀಡಿದ ದೂರು ಆಧರಿಸಿ ಅಂದಿನ ಆರಕ್ಷಕ ನಿರೀಕ್ಷಕ ವೀರಾರೆಡ್ಡಿಿ ನ್ಯಾಾಯಾಲಯದಲ್ಲಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಅತ್ಯಾಾಚಾರ ಸಾಬೀತಾದ ಹಿನ್ನಲೆಯಲ್ಲಿ ಆರೋಪಿಗೆ 3ನೇ ಹೆಚ್ಚುವರಿ ಜಿಲ್ಲಾಾ ಮತ್ತು ಸತ್ರ ಪೋಕ್ಸೋೋ ನ್ಯಾಾಯಾಲಯದ ನ್ಯಾಾಯಾಧೀಶರಾದ ಬಿ.ಬಿ.ಜಕಾತಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾಾರೆ. ಸರಕಾರದಿಂದ ನೊಂದ ಬಾಲಕಿಗೆ 7.5 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಆದೇಶಿಸಿದ್ದಾಾರೆ.
ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಎಂ.ಮಂಜುನಾಥ ಸ್ವಾಾಮಿ ವಾದ ಮಂಡಿಸಿದ್ದರು.
ಅಲಬನೂರು: ಕೊಲೆ ಅಪರಾಧಿಗೆ 7 ವರ್ಷ ಶಿಕ್ಷೆೆ
ಸುದ್ದಿಮೂಲ ವಾರ್ತೆ ಸಿಂಧನೂರು, ಜ.07:
ತಾಲ್ಲೂಕಿನ ಅಲಬನೂರು ಗ್ರಾಾಮದಲ್ಲಿ ನಡೆದ ಕೌಟುಂಬಿಕ ಕಲಹ ವಿಕೋಪಕ್ಕೆೆ ಹೋಗಿ ಕೊಲೆಯಲ್ಲಿ ಅಂತ್ಯಗೊಂಡ ಪ್ರಕರಣಕ್ಕೆೆ ಸಂಬಂಧಿಸಿದಂತೆ ಕೊಲೆ ಮಾಡಿದ ಅಪರಾಧಿಗೆ 7 ವರ್ಷ ಶಿಕ್ಷೆ ಹಾಗೂ ತಲಾ ರೂ.20 ಸಾವಿರ ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾಾ ಮತ್ತು ಸತ್ರ ನ್ಯಾಾಯಾಧೀಶ ಬಿ.ಬಿ.ಜಕಾತಿ ಮಂಗಳವಾರ ತೀರ್ಪು ನೀಡಿದ್ದಾಾರೆ.
2019ರಲ್ಲಿ ಅಲಬನೂರು ಗ್ರಾಾಮದ ಹುಲಿಗೆಮ್ಮ ಅವರ ಮಗಳು ಚಾಂದಿನಿ ಅವರನ್ನು ಮೌನೇಶ ಎಂಬುವವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಮದುವೆಯಾದ 2 ತಿಂಗಳ ಕಾಲ ಚೆನ್ನಾಾಗಿ ನೋಡಿಕೊಂಡ ಮೌನೇಶ ನಂತರ ಪತ್ನಿಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿಿದ್ದನು. 2020ರಲ್ಲಿ ಚಾಂದಿನಿಗೆ ಹೊಡೆಯುತ್ತಿಿದ್ದಾಾಗ ಬಿಡಿಸಲು ಹೋದ ಪತ್ನಿಿಯ ತಮ್ಮ ಆನಂದನಿಗೆ ಮೌನೇಶ ಹಾಗೂ ಆತನ ಅಣ್ಣ ಆಂಜನೇಯ, ಮೌನೇಶನ ತಾಯಿ ಹುಲಿಗೆಮ್ಮ ಸೇರಿ ಎದೆಗೆ ಗುದ್ದಿ, ನೆಲಕ್ಕೆೆ ಕೆಡವಿ ಹಲ್ಲೆೆ ಮಾಡಿದ್ದರು. ಹಲ್ಲೆೆಗೊಳಗಾದ ಆನಂದನನ್ನು ಸಿಂಧನೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆೆಗೆ ಕರೆ ತಂದ ನಂತರ ಆಸ್ಪತ್ರೆೆಯಲ್ಲಿ ಮೃತಪಟ್ಟನು ಎಂದು ಆನಂದನ ತಾಯಿ ಹುಲಿಗೆಮ್ಮ ದೂರು ನೀಡಿದ್ದರು.
ಈ ಕುರಿತು ಗ್ರಾಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿ.ಪಿ.ಐ.ಗಳಾದ ಬಾಲಚಂದ್ರ ಲಕ್ಕಂ ಹಾಗೂ ಚಂದ್ರಶೇಖರ ತನಿಖೆ ನಡೆಸಿ ಆರೋಪಿತರ ವಿರುದ್ಧ ನ್ಯಾಾಯಾಲಯಕ್ಕೆೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ವಾದ-ವಿವಾದಗಳನ್ನು ಆಲಿಸಿದ ನ್ಯಾಾಯಾಧೀಶರು ಮೂವರು ಆರೋಪಿಗಳಿಗೆ 7 ವರ್ಷ ಸಾದಾ ಶಿಕ್ಷೆ, ತಲಾ ರೂ.20 ಸಾವಿರ ದಂಡ ಹಾಗೂ ದಂಡದ ಮೊತ್ತದಲ್ಲಿ ತಲಾ ರೂ.15 ಸಾವಿರಗಳನ್ನು ಮೃತನ ತಾಯಿ, ತಂದೆ ಮತ್ತು ಹೆಂಡತಿಗೆ ನೀಡಬೇಕು ಎಂದು ಆದೇಶ ಹೊರಡಿಸಿದ್ದಾಾರೆ.

