ಸುದ್ದಿಮೂಲ ವಾರ್ತೆ ರಾಯಚೂರು, ಜ.07:
ರಾಯಚೂರು ಜಿಲ್ಲೆಯಲ್ಲಿ ಜನವರಿ-2026ರ ಮಾಹೆಯಲ್ಲಿ ಜರುಗುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ 2026 ಕಾರ್ಯಕ್ರಮ ದಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ.
ಜನವರಿ 17ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆೆ 9 ಗಂಟೆಗೆ ರಾಜ್ಯ ಮಟ್ಟದ ವಾಲಿಬಾಲ್ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಆಸಕ್ತರು ಈ ಪಂದ್ಯಗಳ ನೋಡಲ್ ಅಧಿಕಾರಿಗಳಾದ ಟಿಪಿಇಒ ಮಾರುತಿ ಮೊ.ಸಂಖ್ಯೆೆ:9986121146 ಅಥವಾ ದೈಹಿಕ ಶಿಕ್ಷಕರಾದ ಮುಕ್ತರ್ ಅಹ್ಮದ್ ಅವರ ಮೊ.ಸಂಖ್ಯೆೆ:8050224221ಗೆ ಸಂಪರ್ಕಿಸಿ ತಂಡದ ಹೆಸರು ನೋಂದಾಯಿಸಬಹುದಾಗಿದೆ.
ಜನವರಿ 18ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆೆ 9 ಗಂಟೆಗೆ ಕಬ್ಬಡಿ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಆಸಕ್ತರು ಈ ಪಂದ್ಯಗಳ ನೋಡಲ್ ಅಧಿಕಾರಿಗಳಾದ ದೇವದುರ್ಗದ ಟಿಪಿಇಒ ಮುದುಕನ್ನ ಕವಡಿಮಟ್ಟಿಿ ಮೊ.ಸಂಖ್ಯೆೆ: 9448619792 ಅಥವಾ ದೈಹಿಕ ಶಿಕ್ಷಕರಾದ ಉಮೇಶ ಮೊ.ಸಂಖ್ಯೆೆ: 9448218095ಗೆ ಸಂಪರ್ಕಿಸಿ ತಂಡದ ಹೆಸರು ನೋಂದಾಯಿಸಬಹುದಾಗಿದೆ.
ಎಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

