ಸುದ್ದಿಮೂಲ ವಾರ್ತೆ ಬೀದರ್, ಜ.08:
ಪ್ರವಾಸೋದ್ಯಮ ಸಚಿವಾಲಯ, ಭಾರತ ಸರ್ಕಾರದ ಬೆಂಗಳೂರು ಕಚೇರಿ, ಮತ್ತು ಸಹಾಯಕ ನಿರ್ದೇಶಕರ ಕಚೇರಿ ಬೀದರ್ ಸಂಯೋಗದೊಂದಿಗೆ ಡಿಸ್ಕವರ್ ಬೀದರ್ ಟ್ರಿಿಪ್ ಅಂಗವಾಗಿ ಬೀದರ್ ನಗರದ ಎಸ್ಆರ್ಎಸ್ ರೆಸಾರ್ಟ್ನಲ್ಲಿ ಓರಿಯಂಟೇಶನ್ ಕಾರ್ಯಕ್ರಮ ಆಯೋಜಿಸಲಾಯಿತು.
ಮೂರು ದಿನಗಳ ಪರಿಚಿತ ಪ್ರವಾಸವು ಜನವರಿ 7ರಿಂದ 9ರವರೆಗೆ ನಡೆಯಲಿದೆ.
ಓರಿಯಂಟೇಶನ್ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಶಿಲ್ಪಾಾ ಶರ್ಮಾ ಅವರು ಉದ್ಘಾಾಟಿಸಿ ಮಾತನಾಡಿ, ಬೀದರ್ ಜಿಲ್ಲೆಯ ಶ್ರೀಮಂತ ಐತಿಹಾಸಿಕ ಪರಂಪರೆ, ಸಾಂಸ್ಕೃತಿಕ ವೈಭವ ಹಾಗೂ ಪ್ರವಾಸೋದ್ಯಮದ ಅಪಾರ ಸಾಧ್ಯತೆಗಳ ಕುರಿತು ವಿವರಿಸಿದರು. ಪ್ರಮುಖ ಪರಂಪರಾ ಸ್ಮಾಾರಕಗಳು, ಪ್ರವಾಸೋದ್ಯಮ ಅಭಿವೃದ್ಧಿಿ ಯೋಜನೆಗಳು ಹಾಗೂ ಜಿಐ ಟ್ಯಾಾಗ್ ಪಡೆದ ಬಿದ್ರಿಿವೇರ್ ಕರಕುಶಲ ಕುರಿತು ಮಾಸ್ಟರ್ ಕುಶಲಕರ್ಮಿಗಳ ನೇರ ಪ್ರದರ್ಶನಗಳೊಂದಿಗೆ ಕಾರ್ಯಾಗಾರ ಆಯೋಜಿಸಲಾಗಿದ್ದು, ಇದು ಶತಮಾನಗಳ ಹಳೆಯ ಈ ಕಲೆಯ ಜಾಗತಿಕ ಆಕರ್ಷಣೆ ಮತ್ತಷ್ಟು ಹೆಚ್ಚಿಿಸಲಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಭಾಗವಹಿಸುವವರಿಗೆ ಬೀದರ್ ಕೋಟೆ, ರಂಗೀನ್ ಮಹಲ್, ಸೋಲಾ ಖಂಬಾ ಮಸೀದಿ, ಕರೇಜ್ ಜಲವ್ಯವಸ್ಥೆೆ, ಬರಿದ್ ಶಾಹಿ ಗೋರಿಗಳು, ಶ್ರೀ ಕ್ಷೇತ್ರ ಜರ್ನಿ ನರಸಿಂಹ ಗುಹಾ ದೇವಾಲಯ ಸೇರಿದಂತೆ ವನ್ಯಜೀವಿ ಸಾರಿ ಮತ್ತು ಪಕ್ಷಿ ವೀಕ್ಷಣೆಯಂತಹ ಪ್ರಕೃತಿ ಆಧಾರಿತ ಅನುಭವಗಳನ್ನು ಒದಗಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಹ್ವಾಾನಿತ ಪ್ರವಾಸ ನಿರ್ವಾಹಕರು, ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಹಾಗೂ ಸ್ಥಳೀಯ ಪ್ರವಾಸೋದ್ಯಮ ಪಾಲುದಾರರು ಭಾಗವಹಿಸಿದ್ದರು. ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ಆಕರ್ಷಣೆಗಳಿಗೆ ಪರಿಚಿತ ಭೇಟಿ ಕೈಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಭಾರತ ಪ್ರವಾಸೋದ್ಯಮ ಬೆಂಗಳೂರು ನಿರ್ದೇಶಕಿ ಸಂಧ್ಯಾಾ ಹರಿದಾಸ್, ಹೆಚ್ಚುವರಿ ಪೆಲೀಸ್ ಅಧೀಕ್ಷಕ ಚಂದ್ರಕಾಂತ ಪೂಜಾರಿ, ಪೌರಾಯುಕ್ತ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಡೆಂಗಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿಿತರಿದ್ದರು.
ಬೀದರ್ ಪ್ರವಾಸೋದ್ಯಮಕ್ಕೆ ಜಾಗತಿಕ ಗುರುತು : ಡಿಸ್ಕವರ್ ಬೀದರ್

