ಸುದ್ದಿಮೂಲ ವಾರ್ತೆ ಸಿಂಧನೂರು, ಜ.08:
ಸಿಂಧನೂರು ಜಿಲ್ಲಾಾ ಕೇಂದ್ರವಾದರೆ ಜನರಿಗೆ ಆಡಳಿತ ಹತ್ತಿಿರಕ್ಕೆೆ ಕೊಂಡೋಯ್ದು ಆರ್ಥಿಕ ಚಟುವಟಿಕೆಗಳು ವೃದ್ದಿಸಲಿವೆ ಎಂದು ಹೋರಾಟ ಸಮಿತಿ ಮುಖಂಡ ಡಾ.ಬಿ.ಎನ್.ಪಾಟೀಲ್ ಹೇಳಿದರು.
ಗುರುವಾರ ನಗರದ ಟೌನ್ ಹಾಲ್ನಲ್ಲಿ ಸಿಂಧನೂರು ಜಿಲ್ಲಾಾ ಹೋರಾಟ ಸಮಿತಿಯಿಂದ ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ನೇತೃತ್ವವಹಿಸಿ ಅವರು ಮಾತನಾಡಿದರು. ಸಿಂಧನೂರು ಜಿಲ್ಲಾಾ ಕೇಂದ್ರಕ್ಕಾಾಗಿ ಹೋರಾಟ ಮಾಡಲು ರೂಪರೇಷ, ಹೋರಾಟ ರೂಪಿಸಲು ಅಭಿಪ್ರಾಾಯ ಸಂಗ್ರಹಿಸಲಾಗುತ್ತಿಿದೆ. ಪಕ್ಷಾತೀತ, ಜಾತ್ಯಾಾತೀತ ಹೋರಾಟ ಅಗತ್ಯವಾಗಿದೆ. ಸಿಂಧನೂರು ಜಿಲ್ಲೆೆಯಾಗಲು ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಆರ್ಥಿಕ, ಶೈಕ್ಷಣಿಕ, ಕೃಷಿ, ಸಾಮಾಜಿಕವಾಗಿ ಬಲಿಷ್ಠವಾಗಿದೆ. ಪ್ರಾಾದೇಶಿಕ ಅಸಮತೋಲನ ತಪ್ಪಿಿಸುವ ದೃಷ್ಠಿಿಯಿಂದ ಸಿಂಧನೂರು ಜಿಲ್ಲೆೆಯಾಗಬೇಕಿದೆ. ಭೌಗೋಳಿಕವಾಗಿಯೂ ಸಮರ್ಥವಾಗಿದೆ. ತಾವರಗೇರಾ ತಾಲೂಕಾ ಕೇಂದ್ರಕ್ಕಾಾಗಿ ನಡೆಯುವ ಹೋರಾಟಕ್ಕೆೆ ನಾವು ಬೆಂಬಲಿಸೋಣ. ಕಾರಟಗಿ ಜನತೆಯನ್ನು ಒಪ್ಪಿಿಸೋಣ. ಜೊತೆಗೆ ವಿವಿಧ ಸಂಘ-ಸಂಸ್ಥೆೆಗಳು ತಮ್ಮ ಸಂಬಂಧಿತ ಸಂಘ-ಸಂಸ್ಥೆೆಗಳನ್ನು ಭೇಟಿ ಮಾಡಿ ಸಿಂಧನೂರಿಗೆ ಸೇರಬಹುದಾದ ತಾಲೂಕುಗಳ ಮನವೊಲಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಹಿರಿಯ ಮುಖಂಡ ರಾಜಶೇಖರ ಪಾಟೀಲ್ ಮಾತನಾಡಿ, ಜಿಲ್ಲಾಾ ಕೇಂದ್ರದ ಆಗ್ರಹ ಸುಲಭದ ಮಾತಲ್ಲ. ಪ್ರತಿಯೊಬ್ಬರ ಗಟ್ಟಿಿ ಧ್ವನಿ ಅಗತ್ಯವಾಗಿದೆ. ಬೇರೆ ಬೇರೆ ತಾಲ್ಲೂಕುಗಳ ಸೇರ್ಪಡೆಯ ಜೊತೆಗೆ ಈಗಿರುವ ಸಿಂಧನೂರು ತಾಲ್ಲೂಕು ದೊಡ್ಡದಾಗಿದ್ದು, ಪ್ರಾಾಥಮಿಕ ಸಿಂಧನೂರಿನಲ್ಲೇ ವಿಭಜನೆ ಮಾಡಿ ಎರಡು ತಾಲ್ಲೂಕುಗಳನ್ನು ಸೃಜಿಸಿ, ತುರ್ವಿಹಾಳ ತಾಲ್ಲೂಕು ರಚನೆಗೆ ಪ್ರಸ್ತಾಾವನೆ ಸಲ್ಲಿಸುವುದರ ಜೊತೆಗೆ ಸಿಂಧನೂರು ಜಿಲ್ಲೆೆಯನ್ನಾಾಗಿಸಲು ಪ್ರಯತ್ನಿಿಸಬೇಕು ಎಂದರು. ವೈದ್ಯ ಬಿ.ಎನ್.ಪಾಟೀಲ್ ರನ್ನು ಜಿಲ್ಲಾಾ ಹೋರಾಟ ಸಮತಿಯ ಸಂಚಾಲರನ್ನಾಾಗಿ ಮಾಡಲು ಎಲ್ಲರು ಸಹಕರಿಸಬೇಕು ಎಂದು ಸಲಹೆ ನಿಡಿದರು.
ಸಭೆಯಲ್ಲಿ ಅನೇಕರು ಮಾತನಾಡಿದರು. ಸಿಂಧನೂರು ಜಿಲ್ಲಾಾ ಕೇಂದ್ರವನ್ನಾಾಗಿಸುವ ಕೂಗಿಗೆ ಎಲ್ಲರಿಂದಲೂ ಒಕ್ಕೊೊರಲ ಬೆಂಬಲ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ವಿವಿಧ ಸಂಘ-ಸಂಸ್ಥೆೆಗಳ ಮುಖಂಡರಾದ ಎಂ.ದೊಡ್ಡಬಸವರಾಜ, ವೈ.ನರೇಂದ್ರನಾಥ, ಸೈಯದ್ ಬಾಬರ್ ಪಾಷಾ ವಕೀಲ, ಹೆಚ್.ಎ್.ಮಸ್ಕಿಿ, ಸರಸ್ವತಿ ಪಾಟೀಲ್, ಅಮರಯ್ಯ ಸ್ವಾಾಮಿ, ಶರಣಪ್ಪ ಕೆ.ಗೋನಾಳ, ಹುಸೇನ್ ಸಾಬ್, ತಿಮ್ಮಯ್ಯ ನಾಯಕ, ಅಶೋಕ ಉಮಲೂಟಿ, ಶ್ರೇೇಣಿಕ್ರಾಜ್ ಶೇಠ್, ಸಿದ್ರಾಾಮಪ್ಪ ಸಾಹುಕಾರ, ಪಂಪನಗೌಡ ತಾವರಗೇರಾ, ಶಾಂತಗೌಡ ಜಾಹಗೀರ್ ದಾರ್ ಸೇರಿದಂತೆ ಅನೇಕರು ಇದ್ದರು.
ಸಿಂಧನೂರು ಜಿಲ್ಲಾ ಹೋರಾಟ ಸಮಿತಿಯಿಂದ ಪೂರ್ವಭಾವಿ ಸಭೆ ಜಿಲ್ಲಾ ಕೇಂದ್ರವಾದರೆ ಆರ್ಥಿಕ ಚಟುವಟಿಕೆಗಳು ವೃದ್ದಿ – ಡಾ.ಬಿ.ಎನ್.ಪಾಟೀಲ್

