ಸುದ್ದಿಮೂಲ ವಾರ್ತೆ ರಾಯಚೂರು, ಜ.08:
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯಲ್ಲಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ತೀರ್ಪಿನಂತೆ ನಡೆದುಕೊಳ್ಳದೆ ಗೊಂದಲ ಮಾಡಿದೆ ಎಂದು ಮಾದಿಗ, ಸಮಗಾರ, ಡೋಹರ ಡಕ್ಕಲಿಗ ಉಪ ಜಾತಿ ಸಂಘಟನೆಗಳ ಒಕ್ಕೂಟದ ಸಂಚಾಲಕ ರವೀಂದ್ರ ಜಲ್ದಾಾರ್ ಆಪಾದಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಜನಸಂಖ್ಯೆೆಗೆ ಅನುಗುಣವಾಗಿ ಮೀಸಲು ಹಂಚಿಕೆಗೆ ರಾಜ್ಯ ಸರ್ಕಾರ ರಚಿಸಿದ್ದ ನ್ಯಾಾಘಿ.ನಾಗಮೋಹನದಾಸ್ ಶಿಾರಸ್ಸುಗಳ ಜಾರಿಗೊಳಿಸದೆ ತನ್ನದೇ ಮೀಸಲಾತಿ ಹಂಚಿಕೆ ಮಾಡಿ ಸಾಮಾಜಿಕ ನ್ಯಾಾಯ ಒದಗಿಸಿದ್ದಾಾಗಿ ಸುಳ್ಳು ಹೇಳಿ ಮೋಸ ಮಾಡುತ್ತಿಿದೆ ಎಂದು ಖಂಡಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಾ.ಪರಮೇಶ್ವರ, ಡಾ.ಎಚ್.ಸಿ.ಮಹಾದೇವಪ್ಪ ಅವರ ಒತ್ತಡಕ್ಕೆೆ ಇಡೀ ಸರ್ಕಾರವೇ ಮಣಿದು ಅಲೆಮಾರಿಗಳ ಮೀಸಲು ಕಸಿದು ಹಂಚಿಕೆ ಮಾಡಲಾಗಿದೆ. ಆಯೋಗದ ಪ್ರಕಾರ ಮಾದಿಗರಿಗೆ ಶೇ.6, ಛಲವಾದಿ ಸಂಬಂಧಿತ ಜಾತಿಗಳಿಗೆ ಶೇ.5, ಭೋವಿ ಲಮಾಣಿ ಇತರರಿಗೆ ಶೇ.4 ಹಾಗೂ ಅಲೆಮಾರಿಗಳಿಗೆ ಶೇ.1ರ ಅನುಪಾತದಲ್ಲಿ ಮೀಸಲು ಹಂಚಿಕೆ ಮಾಡಿತ್ತುಘಿ. ಆದರೆ, ಸರ್ಕಾರ ಮಾದಿಗ, ಛಲವಾದಿ ಸಮುದಾಯಕ್ಕೆೆ ತಲಾ 6 ಮೀಸಲು ನಿಗದಿ ಮಾಡಿ, ಆದಿ ದ್ರಾಾವಿಡ, ಕರ್ನಾಟಕದ ಒಂದಲ ಇಟ್ಟು ಪ್ರವರ್ಗ 1 ಹಾಗೂ 2ರಲ್ಲಿಯೂ ಮೀಸಲು ಪಡೆಯಲು ಆದೇಶ ಮಾಡಿ ಮಾದಿಗ ಸಂಬಂಧಿತ ಜಾತಿಗಳಿಗೆ ಪುನಃ ಅನ್ಯಾಾಯ ಮಾಡಲಾಗಿದೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಶಿಕ್ಷಣ ಮತ್ತು ಉದ್ಯೋೋಗದಲ್ಲಿ ಮೀಸಲಾತಿ ಅನ್ವಯ ಎಂಬ ಸರ್ಕಾರ, ಬಡ್ತಿಿಯಲ್ಲಿ ಮೀಸಲು ಅಧಿಕೃತ ಜಾರಿಯ ಆದೇಶ ಮಾಡುತ್ತಿಿಲ್ಲಘಿ. ಪರಿಶಿಷ್ಟ ಪಟ್ಟಿಿಯಲ್ಲಿ 101 ಜಾತಿಗಳಿದ್ದರೂ 98ಕ್ಕೆೆ ಮಾತ್ರ ಮೀಸಲು ಕೊಟ್ಟು ಗೊಂದಲ, ಮೋಸ ಮಾಡಿದೆ. ರಾಜಕೀಯ ಒತ್ತಡಕ್ಕೆೆ ಮಣಿದು ಅಲೆಮಾರಿಗಳಿಗೆ ಮೀಸಲು ದೊರೆಯದಂತೆ ಮಾಡಿದ್ದು ಸರಿಪಡಿಸದೆ ಹೋದರೆ ರಾಜ್ಯದಾದ್ಯಂತ ಎರಡನೇ ಹಂತದ ಹೋರಾಟ ಸರ್ಕಾರದ ವಿರುದ್ಧ ಆರಂಭಿಸುವ ತೀರ್ಮಾನ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಿಯಲ್ಲಿ ನಗರಸಭೆ ಮಾಜಿ ಸದಸ್ಯ ಭೀಮಣ್ಣ ಮಂಚಾಲ, ಮಾದಿಗ ದಂಡೋರಾ ರಾಜ್ಯಾಧ್ಯಕ್ಷ ಬಿ.ನರಸಪ್ಪಘಿ, ಚಂದ್ರುಭಂಡಾರಿ, ಭೀಮಯ್ಯಘಿ, ಜೆ.ವೌನೇಶ, ಆಂಜಿನೇಯ್ಯಘಿ, ಲಕ್ಷ್ಮಣ ಇತರರಿದ್ದರು.
ಒಳ ಮೀಸಲು ಹಂಚಿಕೆಯಲ್ಲಿ ಅನ್ಯಾಯ, ಸರಿಪಡಿಸದಿದ್ದರೆ ಹೋರಾಟ – ರವೀಂದ್ರ ಜಲ್ದಾರ್

