ಸುದ್ದಿಮೂಲ ವಾರ್ತೆ ರಾಯಚೂರು, ಜ.08:
ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿಯನ್ನು ಜ.14ರಂದು ಜಿಲ್ಲಾಾಡಳಿತದ ಸಹಯೋಗದೊಂದಿಗೆ ಆಚರಿಸಲಾಗುವುದು ಎಂದು ಭೋವಿ ವಡ್ಡರ ಸಂಘದ ಜಿಲ್ಲಾಾಧ್ಯಕ್ಷ ನಾರಾಯಣಸ್ವಾಾಮಿ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ,ಅಂದು ಬೆಳಿಗ್ಗೆೆ ಆಶಾಪೂರು ರಸ್ತೆೆಯಲ್ಲಿನ ಶ್ರೀ ಸಿದ್ದರಾಮೇಶ್ವರ ಮೂರ್ತಿಗೆ ಪೂಜೆ ಗಣ್ಯರು, ಅಧಿಕಾರಿಗಳೊಂದಿಗೆ ನೆರವೇರಿಸಲಾಗುವುದು. ಅಲ್ಲಿಂದ ಪಂ.ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರದವರೆಗೆ ಮೆರವಣಿಗೆಯಲ್ಲಿ ಆಗಮಿಸಲಿದ್ದೇವೆ ಎಂದರು.
ಶೇ.90ರಷ್ಟು ಅಂಕ ಪಡೆದ ಸಮುದಾಯದ ಪ್ರತಿಭಾನ್ವಿಿತರಿಗೆ ಮಾಜಿ ಸೈನಿಕರಿಗೆ, ರೈತರಿಗೆ ಸನ್ಮಾಾನಿಸಲಾಗುತ್ತದೆ ಎಂದರು. ಜಯಂತಿಗಳಲ್ಲಿ ಎಲ್ಲ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಬೇಕು ಎಂದು ಜಿಲ್ಲಾಾಧಿಕಾರಿಗಳ ಗಮನಕ್ಕೆೆ ತರಲಾಗಿದೆ. ಭಾಗವಹಿಸದೆ ಹೋದರೆ ಮುಖ್ಯಮಂತ್ರಿಿಗಳ ಗಮನಕ್ಕೆೆ ತಂದು ಕ್ರಮಕ್ಕೆೆ ಆಗ್ರಹಿಸುವುದಾಗಿ ಹೇಳಿದರು.
ಸುದ್ದಿಗೋಷ್ಠಿಿಯಲ್ಲಿ ಸಮಾಜದ ಮಹಿಳಾಧ್ಯಕ್ಷೆೆ ಶಶಿಕಲಾ ಭೀಮರಾಯ, ನಾಗರಾಜ, ಕಾಶಿನಾಥ ಕವಿತಾಳ, ಆಂಜಿನೇಯ್ಯ, ಲಕ್ಷ್ಮಣ, ಸತ್ಯಪ್ಪಘಿ, ಹುಲಿಗೆಪ್ಪ ಇತರರಿದ್ದರು.

