ಸುದ್ದಿಮೂಲ ವಾರ್ತೆ ಸಿಂಧನೂರು, ಜ.10
ಶೋಷಿತ ಸಮಾಜಗಳು ಶಿಕ್ಷಣ ಪಡೆದು ಆರ್ಥಿಕವಾಗಿ ಬಲಗೊಳ್ಳುವವರೆಗೂ ಸಮಾಜದಲ್ಲಿ ಸಮಾನತೆ ಸಿಗುವುದಿಲ್ಲ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅಭಿಪ್ರಾಾಯಪಟ್ಟರು.
ನಗರದ ಟೌನ್ಹಾಲ್ನಲ್ಲಿ ಶನಿವಾರ ಶ್ರೀ ಮಹರ್ಷಿ ಖಾಸಗಿ ನೌಕರರ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾ ಪುರಸ್ಕಾಾರ ಹಾಗೂ ಸಾಧಕರಿಗೆ ಸನ್ಮಾಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಶೋಷಿತ ಜನಾಂಗಕ್ಕೆೆ ಡಾ.ಬಿ.ಆರ್.ಅಂಬೇಡ್ಕರ್ ಹೊಸ ಧಿಕ್ಕು ತೋರಿಸಿದ್ದಾಾರೆ. ಅಂಬೇಡ್ಕರ್ ಅವರು ಹುಟ್ಟದಿದ್ದರೆ ಸಂವಿಧಾನ ನಮಗೆ ಸಿಗುತ್ತಿಿರಲಿಲ್ಲ. ರಾಜ್ಯದಲ್ಲಿ ದೇವರಾಜ ಅರಸು ಮುಖ್ಯಮಂತ್ರಿಿಗಳಾಗದಿದ್ದರೆ ಮೀಸಲಾತಿಯ ಅನುಕೂಲ ಸಿಗುತ್ತಿಿರಲಿಲ್ಲ. ಏಳು ದಶಕಗಳಿಂದಲೂ ನಿರಂತರ ಹೋರಾಟ, ಪ್ರಯತ್ನಗಳನ್ನು ಮಾಡಿದಾಗಲೂ ಮುಂದುವರೆದಿರವುದಕ್ಕೆೆ ನಾವೇ ಕಾರಣ. ಇನ್ನೊೊಬ್ಬರನ್ನು ದೂರುವುದು ಬಿಡಬೇಕು. ಸರಕಾರ ಸೌಲಭ್ಯ ಕೊಟ್ಟಾಾಗಲೂ ಮುಂದೆ ಬರಲು ಸಾಧ್ಯವಾಗಿಲ್ಲ. ಅವಕಾಶಗಳನ್ನು ಬಳಸಿಕೊಂಡು ಮೇಲೆ ಬರಲು ಆಗುತ್ತಿಿಲ್ಲ ಎನ್ನುವ ನೋವು ನನ್ನಲ್ಲಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಂವಿಧಾನ ಬದ್ಧ ಆರ್ಥಿಕ, ಉದ್ಯೋೋಗ, ಸಾಮಾಜಿಕ ಸಮಾನ ಹಕ್ಕು ಸಿಕ್ಕಾಾಗ ಮಾತ್ರ ಸಮಾನತೆ ಸಿಕ್ಕಂತೆ. ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಉನ್ನತ ಹುದ್ದೆೆಗೆ ಹೋಗಬೇಕು. ಮೀಸಲಾತಿ, ಉದ್ಯೋೋಗ, ರಾಜಕೀಯವಾಗಿ ನಾನೊಬ್ಬನೇ ಬೆಳೆದರೆ ಸಾಲದು. ಮೀಸಲಾತಿ ಸೌಲಭ್ಯಗಳನ್ನು ಪಡೆದು ಉನ್ನತ ಹುದ್ದೆೆಯಲ್ಲಿರುವವರು ಸಮಾಜ ಮೇಲೆತ್ತುವ ಕೆಲಸ ಮಾಡಬೇಕಿದೆ. ಅಧಿಕಾರ ಸಿಗುವವರೆಗೂ ಶೋಷಿತ ಜನಾಂಗಗಳು ಉದ್ಧಾಾರವಾಗುವುದಿಲ್ಲ. ಹಕ್ಕುಗಳನ್ನು ಪಡೆದುಕೊಳ್ಳಲು ಸಂಘಟಿತರಾಗಬೇಕು. ಅಲ್ಪತೃಪ್ತಿಿಗಳಾಗದೇ ಸಮಾಜದ ಬಗ್ಗೆೆ ಚಿಂತನೆ ಮಾಡಬೇಕು. ಬದಲಾವಣೆ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಾಟಿಸಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಿಸಿದ ಮಸ್ಕಿಿ ಶಾಸಕ, ರಾಜ್ಯ ಖಾದಿ ಗ್ರಾಾಮೋದ್ಯೋೋಗ ಮಂಡಳಿ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ ಮಾತನಾಡಿ, ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ನಮ್ಮ ಸರಕಾರ ಶಿಕ್ಷಣಕ್ಕೆೆ ಹೆಚ್ಚಿಿನ ಆದ್ಯತೆ ನೀಡಿದೆ. ನಾಯಕ ಸಮಾಜ ಆರ್ಥಿಕವಾಗಿ ಹಿಂದುಳಿದಿದೆ. ಸಮಾಜದ ಭವಿಷ್ಯ ಶಿಕ್ಷಣದ ಮೇಲಿದೆ ಎಂದರು.
ಒಕ್ಕೂಟದ ಗೌರವಾಧ್ಯಕ್ಷ ತಿಮ್ಮಣ್ಣ ರಾಮತ್ನಾಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಸ್ತುತ ದಿನಮಾನಗಳಲ್ಲಿ ವಾಲ್ಮೀಕಿ ಜನಾಂಗದ ಸ್ಥಿಿತಿಗತಿ ಕುರಿತು ನಿವೃತ್ತ ಪ್ರಾಾಧ್ಯಾಾಪಕ ಡೊಣ್ಣೇಗೌಡರ ವೆಂಕಣ್ಣ ವಿಶೇಷ ಉಪನ್ಯಾಾಸ ನೀಡಿದರು. ಕಾರಟಗಿಯ ಪ್ರಾಾಧ್ಯಾಾಪಕ ಡಾ.ಹನುಮಂತಪ್ಪ ಚಂದಲಪುರ ಆಶಯ ನುಡಿಗಳನ್ನಾಾಡಿದರು. ಒಕ್ಕೂಟದ ಅಧ್ಯಕ್ಷ ಡಾ.ಬಸವರಾಜ ಪಿ.ನಾಯಕ ಪ್ರಾಾಸ್ತಾಾವಿಕವಾಗಿ ಮಾತನಾಡಿದರು. ಬಿಜೆಪಿ ಮುಖಂಡ ಕೆ.ಕರಿಯಪ್ಪ, ಕಾಂಗ್ರೆೆಸ್ ಮುಖಂಡ ರಾಜುಗೌಡ ಬಾದರ್ಲಿ, ಜೆಡಿಎಸ್ ಮುಖಂಡ ಚಂದ್ರಭೂಪಾಲ ನಾಡಗೌಡ, ಬಿಜೆಪಿ ಗ್ರಾಾಮೀಣ ಮಂಡಲ ಅಧ್ಯಕ್ಷ ವೆಂಕೋಬ ನಾಯಕ ರಾಮತ್ನಾಾಳ, ಬಸವಕೇಂದ್ರದ ಅಧ್ಯಕ್ಷ ಕರೇಗೌಡ ಕುರಕುಂದಿ, ಆರ್ಡಿಸಿಸಿ ಬ್ಯಾಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಡಿವೈಎಸ್ಪಿ ಚಂದ್ರಶೇಖರ ನಾಯಕ, ನಾಯಕ ಸಮಾಜದ ಮುಖಂಡರಾದ ಅಯ್ಯನಗೌಡ ಆಯನೂರು, ಪ್ರಸನ್ನ ಪಾಟೀಲ್ ಮಸ್ಕಿಿ, ಹನುಮಂತಪ್ಪ ವೆಂಗಿ, ವಿರುಪಣ್ಣ ನಾಯಕ ವಕೀಲ ಸೇರಿದಂತೆ ನಾಯಕ ಸಮಾಜದ ಮುಖಂಡರು, ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು.
ಶ್ರೀ ಮಹರ್ಷಿ ವಾಲ್ಮೀಕಿ ಖಾಸಗಿ ನೌಕರರ ಒಕ್ಕೂಟದ ಪದಗ್ರಹಣ, ಪ್ರತಿಭಾ ಪುರಸ್ಕಾರ ಆರ್ಥಿಕವಾಗಿ ಬಲಗೊಳ್ಳುವವರೆಗೂ ಸಮಾನತೆ ಸಿಗಲ್ಲ – ವಿರೂಪಾಕ್ಷಪ್ಪ

