ಸುದ್ದಿಮೂಲ ವಾರ್ತೆ ಮಾನ್ವಿ, ಜ.10
ಇಂದಿನ ದಿನಗಳಲ್ಲಿ ವಿದ್ಯಾಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಜ್ಞಾನ ಅತ್ಯಗತ್ಯ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದರು.
ಶನಿವಾರ ಪಟ್ಟಣದ ನೇತಾಜಿ ಸುಭಾಶ್ಚಂದ್ರ ಬೋಸ್ ಶಿಕ್ಷಣ ಸಂಸ್ಥೆೆಯ ಆವರಣದಲ್ಲಿ ನೇತಾಜಿ ಪ್ರಾಾಥಮಿಕ, ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ವತಿಯಿಂದ ನಡೆದ ನೇತಾಜಿ ವಿಜ್ಞಾನ ವೈಭವ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವಿಜ್ಞಾನ ವಿಭಾಗ ಉದ್ಘಾಾಟಿಸಿ ಮಾತನಾಡುತ್ತಿಿದ್ದರು.
ಇಂದಿನ ದಿನಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ಬಹಳಷ್ಟು ಮುಂದುವರೆದಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಇಲ್ಲದೆ ಅಭಿವೃದ್ದಿ ಸಾಧ್ಯವಿಲ್ಲ ಎನ್ನುವಂತಾಗಿದೆ. ಈ ನಿಟ್ಟಿಿನಲ್ಲಿ ವಿದ್ಯಾಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದಕ್ಕೆೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಬೆಂಗಳೂರಿನ ಹೆಬ್ಬಾಾಳ್ ಹತ್ತಿಿರ ವಿಜ್ಞಾನ ಅಕಾಡೆಮಿ ಸ್ಥಾಾಪನೆ ಮಾಡಲಾಗಿದೆ. ಮಂಗಳೂರಿನ ಪಿಲಿಕುಳ ಮತ್ತು ವಿಜಯನಗರದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ವಿಜ್ಞಾನ ಕೇಂದ್ರಗಳನ್ನು ಪ್ರಾಾರಂಭಿಸಲಾಗಿದೆ. ರಾಯಚೂರಿನ ವಿಜ್ಞಾನ ಕೇಂದ್ರ ಮೇಲ್ದರ್ಜೆಗೇರಿಸುವುದಕ್ಕೆೆ 20 ಕೋಟಿ ರೂ ಮತ್ತು ತಾರಾಲಯ ನಿರ್ಮಾಣಕ್ಕೆೆ 10 ಕೋಟಿ ನೀಡಲಾಗಿದೆ. ಕೋಲಾರ, ರಾಮನಗರ, ರಾಯಚೂರು ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರ ನಿರ್ಮಾಣಕ್ಕೆೆ ಅಗತ್ಯವಿರುವ ಜಮೀನು ಗುರುತಿಸಲಾಗಿದೆ. ರಾಜ್ಯದ 830 ಸರ್ಕಾರಿ ಶಾಲೆಗಳಿಗೆ ಟೆಲಿಸ್ಕೋೋಪ್ಗಳನ್ನು ನೀಡಲಾಗಿದೆ. ಕಲ್ಯಾಾಣ ಕರ್ನಾಟಕದ 7 ಜಿಲ್ಲೆಗಳಲ್ಲಿನ ಶಾಲಾ ಮಕ್ಕಳಿಗೆ ವಿಜ್ಞಾನ ವಸ್ತು ಪ್ರದರ್ಶನಕ್ಕೆೆ ಸಂಚಾರಿ ವಿಜ್ಞಾನ ವಸ್ತು ಪ್ರದರ್ಶನ ವಾಹನಗಳ ವ್ಯವಸ್ಥೆೆ ಮಾಡಲಾಗಿದೆ ಎಂದು ತಿಳಿಸಿದರು.
ಶಿಕ್ಷಣ ವ್ಯಾಾಪಾರಿ ದೃಷ್ಟಿಿಯಲ್ಲಿ ನೋಡದೆ ಸೇವಾ ದೃಷ್ಠಿಿಯಲ್ಲಿ ನೋಡುವ ಮೂಲಕ ಇಂದು ಕೆ.ಈ.ನರಸಿಂಹ ಮತ್ತು ವಿಜಯಲಕ್ಷ್ಮಿಿ ಇವರು 1180 ವಿದ್ಯಾಾರ್ಥಿಗಳಿಗೆ ನೇತಾಜಿ ಸಂಸ್ಥೆೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿಿದ್ದಾರೆ.
ಬಹುತೇಕ ಗ್ರಾಾಮೀಣ ವಿದ್ಯಾಾರ್ಥಿಗಳ ಅನುಕೂಲಕ್ಕಾಾಗಿ ಇಂದು ನೇತಾಜಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಪ್ರಾಾರಂಭಿಸಿದ್ದು ವಿದ್ಯಾಾರ್ಥಿಗಳು ಉತ್ತಮ ಅಭ್ಯಾಾಸ ಮಾಡಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಬೋಸರಾಜು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಹಂಪಯ್ಯ ನಾಯಕ ಸಮಾರಂಭ ಕುರಿತು ಮಾತನಾಡಿದರು.
ಕಾಲೇಜಿನ ವಿವಿಧ ಕೊಠಡಿಗಳಲ್ಲಿ ಆಯೋಜನೆ ಮಾಡಿದ್ದ ವಿಜ್ಞಾನ, ಇತಿಹಾಸ, ಗಣಿತ, ವಾಣಿಜ್ಯ, ಕಲಾ, ಕೃಷಿ, ಸಾಹಿತ್ಯ, ಸಂಸ್ಕೃತಿ, ಭಾಷೆ, ಖಗೋಳಶಾಸ ಭೂಮಿ ಸಂರಕ್ಷಣೆ, ಆಯುರ್ವೇದ, ಅಬಾಕಾಸ್, ಮುಂತಾದ ವಿಷಯಗಳಿಗೆ ಸಂಬಂಧಿಸಿದ 270 ಕ್ಕೂ ಹೆಚ್ಚು ಮಾದರಿಗಳ ಪ್ರದರ್ಶನವನ್ನು ಸಚಿವರು, ಶಾಸಕರು ಹಾಗೂ ಗಣ್ಯರು ವೀಕ್ಷಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ನೇತಾಜಿ ಶಿಕ್ಷಣ ಸಂಸ್ಥೆೆಯ ಅಧ್ಯಕ್ಷ ಕೆ.ಈ.ನರಸಿಂಹ, ಕಾರ್ಯದರ್ಶಿ ಕೆ.ವಿಜಯಲಕ್ಷ್ಮಿಿ, ಕುರುಬರ ಸಂಘದ ರಾಜ್ಯಾಾಧ್ಯಕ್ಷ ಎಂ.ಈರಣ್ಣ, ನಯೋಪ್ರಾಾ ಅಧ್ಯಕ್ಷ ಅಬ್ದುಲ್ ಗೂರ್ ಸಾಬ್, ಮುಖಂಡರಾದ ಬಿ.ಕೆ.ಅಮರೇಶಪ್ಪ, ಬಾಲಸ್ವಾಾಮಿ ಕೊಡ್ಲಿಿ, ಜಿ.ನಾಗರಾಜ, ಕೆ.ಶಾಂತಪ್ಪ, ಶರಣಪ್ಪ ನಾಯಕ ಗುಡದಿನ್ನಿಿ, ಜಿ.ಶಿವಮೂರ್ತಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸೋಮಶೇಖರ ಹೊಕ್ರಾಾಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಕುರ್ಡಿ, ಪಕ್ಷಿಪ್ರೇೇಮಿ ಸಲ್ಲಾವುದ್ದೀನ್, ಶಿಕ್ಷಕರ ಸಂಘದ ಅಧ್ಯಕ್ಷ ಸಂಗಮೇಶ ಮುಧೋಳ, ಖಾಸಗಿ ಶಿಕ್ಷಣ ಸಂಸ್ಥೆೆಗಳ ಒಕ್ಕೂಟದ ಅಧ್ಯಕ್ಷ ರಾಜಾ ಸುಭಾಶ್ಚಂದ್ರ ನಾಯಕ, ಪದವಿ ಪೂರ್ವ ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ತಿಪ್ಪಣ್ಣ ಬಾಗಲವಾಡ, ಖಾಸಗಿ ಕಾಲೇಜುಗಳ ಉಪನ್ಯಾಾಸಕರ ಸಂಘದ ಅಧ್ಯಕ್ಷ ಆಂಜನೇಯ ನಾಯಕ ನಸಲಾಪುರ, ನೇತಾಜಿ ಶಾಲೆಯ ಮುಖ್ಯ ಶಿಕ್ಷಕಿ ಆನೀಸ್ ಾತೀಮಾ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
ಮಾನ್ವಿ : ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಜ್ಞಾನ ಅಗತ್ಯ – ಬೋಸರಾಜ್

