ಸುದ್ದಿಮೂಲ ವಾರ್ತೆ ಲಿಂಗಸೂಗೂರು, ಜ.10
ಕಳೆದ ಐದಾರು ತಿಂಗಳಿನಿಂದಲೂ ತಾಲೂಕಿನ ನಾನಾ ಗ್ರಾಾಮೀಣ ಪ್ರದೇಶದಲ್ಲಿನ ವಿದ್ಯುತ್ ಸಮಸ್ಯೆೆ ಹಾಗೂ ಪರಿವರ್ತಕ ಹಾಗೂ ಕಂಬ ಬದಲಾವಣೆ ಕುರಿತು ಇಲಾಖೆ ಅಧಿಕಾರಿಗಳ ಗಮನಕ್ಕೆೆ ತಂದರೂ ಯಾವುದೇ ಪ್ರಯೋಜನವಾಗುತ್ತಿಿಲ್ಲವೆಂದು ಜೆಸ್ಕಾಾಂ ಇಲಾಖೆ ಅಧಿಕಾರಿ ವಿರುದ್ದ ಗ್ಯಾಾರಂಟಿ ಯೋಜನೆಗಳ ಸಮಿತಿ ಸದಸ್ಯರು ಗರಂ ಆದ ಘಟನೆ ಶುಕ್ರವಾರ ಜರುಗಿತು.
ಸ್ಥಳೀಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಗ್ಯಾಾರಂಟಿ ಸಮಿತಿ ಅಧ್ಯಕ್ಷ ವೆಂಕಟೇಶ ಗುತ್ತೇದಾರ ಅಧ್ಯಕ್ಷತೆಯಲ್ಲಿ ನಡೆದ ಅನುಷ್ಠಾಾನ ಸಮಿತಿ ಸಭೆಯಲ್ಲಿ ಉತ್ತರಿಸಲು ಮುಂದಾದ ಯಶೋಧ ಅವರನ್ನು ತರಾಟೆಗೆ ತೆಗೆದುಕೊಂಡ ಸಮಿತಿ ಸದಸ್ಯ ಗದ್ದೆೆನಗೌಡ ಮತ್ತು ಶಿವಕುಮಾರ ಅವರು ಕಳೆದ ಐದಾರು ಸಭೆಗಳಿಂದ ತಾಲೂಕಿನ ವಿವಿಧ ಗ್ರಾಾಮಗಳಲ್ಲಿನ ಸಮಸ್ಯಗಳ ಬಗ್ಗೆೆ ಎಇಇ ಅವರ ಗಮನಕ್ಕೆೆ ತಂದರೂ ಇಂದಿಗೂ ಪರಿಹಾರವಾಗಿಲ್ಲ ಈ ಬಾರಿ ನೀವೇಕೆ ಬಂದಿರಿ ಹಿಂದಿನ ಸಭೆಯ ನಡವಳಿಕೆಗಳಿಗೆ ಉತ್ತರ ಬೇಕಿದೆ ಎಂದು ಗರಂ ಆದರು. ಆಗ ಸದಸ್ಯ ಮಲ್ಲಿಕಾರ್ಜುನಗೌಡ ಪಾಟೀಲ್ ಇತರರು ಕೂಡಾ ಧ್ವನಿಗೂಡಿಸಿ ತಾಲೂಕಿನ ಕನ್ನಾಾಪೂರ ಹಟ್ಟಿಿ ಮೇದಿನಾಪೂರ ನೀರಲಕೇರಿ ಸೇರಿ ಹಲವೆಡೆ ವಿದ್ಯುತ್ ಕಂಬ ಬದಲಾವಣೆ ಪರಿವರ್ತಕ ಜೋತು ಬಿದ್ದ ತಂತಿಗಳ ಬದಲಾವಣೆ ಆಗುತ್ತಿಿಲ್ಲವೆಂದು ಆರೋಪಿಸಿದರು.
ಆಗ ಮಾಹಿತಿ ನೀಡಲು ಆಗಮಿಸಿದ್ದ ಜೆಸ್ಕಾಾಂ ಅಧಿಕಾರಿಣಿ ನಿಮ್ಮಗಳ ಅಹವಾಲನ್ನು ಮೇಲಾಧಿಕಾರಿಗಳಿಗೆ ಕಳಿಸಿದ್ದು ಅನುಮತಿ ಬೇಕಿದೆ ಎಂದಾಗ ಸದಸ್ಯರು ನಿಮ್ಮ ಇಲಾಖೆ ಸಾರ್ವಜನಿಕರ ಸಮಸ್ಯಗಳಿಗೆ ಸ್ಪಂದಿಸುತ್ತಿಿಲ್ಲ, ಆದರೆ ಕಾರ್ಖಾನೆ ವಾಣಿಜ್ಯ ಬಳಕೆಯ ವಿದ್ಯುತ್ ನೀಡಲು ಮತ್ತು ಹಣ ನೀಡುವ ಗ್ರಾಾಹಕರಿಗೆ 24 ಗಂಟೆಯಲ್ಲೆೆ ಸಮಸ್ಯೆೆ ಪರಿಹಾರವಾಗುತ್ತದೆ ಏಕೆ ಎಂದು ಪ್ರಶ್ನಿಿಸಿ ಸಮಸ್ಯೆೆಗೆ ಸೂಕ್ತ ಉತ್ತರ ಪರಿಹಾರ ಬೇಕೆಂದು ಪಟ್ಟು ಹಿಡಿದು ಸಮಸ್ಯೆೆಗಳ ಕುರಿತು ರೇಜುಲೇಷನ್ ಪಾಸ್ ಮಾಡಲು ಆಗ್ರಹಿಸಿದರು. ಆಗ ಗ್ಯಾಾರಂಟಿ ಸಮಿತಿ ಆದ್ಯಕ್ಷ ವೆಂಕಟೇಶ ಗುತ್ತೇದಾರ ಜೆಸ್ಕಾಾಂ ಎಇಇ ಮತ್ತು ಇಇ ಅವರನ್ನು ದೂರವಾಣಿಯಲ್ಲಿ ತರಾಟೆಗೆ ತೆಗೆದುಕೊಂಡು ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆೆಯ ಹಲವಾರು ಸಮಸ್ಯೆೆಗಳಿದ್ದು ಅಧಿಕಾರಿಗಳಿಂದ ಸ್ಪಂದನೆ ಸಿಗುತ್ತಿಿಲ್ಲ ಸರಕಾರಕ್ಕೆೆ ವರದಿ ಕಳಿಸುವುದಾಗಿ ಹೇಳಿದರು.
ಸಾರಿಗೆ ಘಟಕದಿಂದ ಸಮಯಕ್ಕೆೆ ಸರಿಯಾಗಿ ಬಸ್ ಸೌಕರ್ಯ ಹಾಗೂ ಹೊಸಬಸ್ ಬಿಡುವ ಕುರಿತು ಮತ್ತು ಹಟ್ಟಿಿ ಪಟ್ಟಣಕ್ಕೆೆ ಬರುವ ಬಸ್ ಹಾಗೂ ಇತರೆಡೆ ಸಂಚರಿಸುವ ಬಸ್ಗಳು ಆಗಾಗ ಕೆಟ್ಟು ನಿಲ್ಲುವ ಕುರಿತು ಗದ್ದೆೆನಗೌಡ ಹಾಗೂ ಸದಸ್ಯರು ಘಟಕ ವ್ಯವಸ್ಥಾಾಪಕರ ಗಮನಕ್ಕೆೆ ತಂದರು. ಸದಸ್ಯ ಮಲ್ಲಿಕಾರ್ಜುನ ಪಾಟೀಲ್ ಭೂಪುರ ಅವರು ಈ ಹಿಂದೆ ಸಜ್ಜಲಗುಡ್ಡ ಬೆಂಗಳೂರು ಬಸ್ ರೇಷ್ಮೆೆ ಬೆಳೆಗಾರರ ಹಿತದೃಷ್ಠಿಿಯಿಂದ ರಾಮನಗರವರೆಗೆ ಸಂಚರಿಸುತ್ತಿಿತ್ತು. ಆದರೆ ಇದೀಗ ರದ್ದುಪಡಿಸಿ ಬೆಂಗಳೂರಿಗೆ ಸೀಮಿತ ಮಾಡಲಾಗಿದೆ ರಾಮನಗರಕ್ಕೆೆ ವಿಸ್ತರಣೆಯಾದರೆ ಸಣ್ಣ ರೈತರಿಗೆ ಅನೂಕೂಲವಾಗಲಿದೆ ಹಾಗೂ ಬಸ್ನಲ್ಲಿ ರೇಷ್ಮೇಗೂಡು ಸಾಗಣೆಗೆ ವ್ಯವಸ್ಥೆೆ ಮಾಡುವಂತೆ ಕೋರಿದರು. ಆಗ ವ್ಯವಸ್ಥಾಾಪಕ ಪ್ರಕಾಶ ದೊಡ್ಮನಿ ಸಾರಿಗೆ ಬಸ್ಗಳ ಮೇಲ್ಭಾಾಗ ಕ್ಯಾಾರಿಯರ್ ಸರಕಾರ ರದ್ದುಪಡಿಸಿದೆ ಎಂದಾಗ ರೈತರ ಅನೂಕೂಲಕ್ಕಾಾಗಿ ಅಳವಡಿಸಿ ಇಲ್ಲವೆ ಬಸ್ ಒಳಗಡೆ ಹಿಂಬದಿ ಎರಡು ಸೀಟ್ ತೆಗೆದು ರೇಷ್ಮೆೆಗೂಡು ಸಾಗಿಸಲು ಅನೂಕೂಲ ಮಾಡುವಂತೆ ಮತ್ತು ಅಮರೇಶ್ವರ ಕ್ರಾಾಸ್ ಬಳಿ ಬಸ್ ನಿಲುಗಡೆ, ಹೈದ್ರಾಾಬಾದ ಹಾಗೂ ಇತರೆ ಬಸ್ಗಳ ಸಮಯ ಬದಲಾವಣೆ ಮಾಡುವಂತೆ ವ್ಯವಸ್ಥಾಾಪಕರಿಗೆ ಮನವಿ ಮಾಡಿದರು.
ಸಭೆಯಲ್ಲಿ ಅನ್ನಭಾಗ್ಯ ಯೋಜನೆಯ ಅರ್ಹ ಬಿಪಿಎಲ್ ಲಾನುಭವಿಗಳ ಕಾರ್ಡ್ ರದ್ದು ಸೇರಿ ಗೃಹಲಕ್ಷ್ಮಿಿ, ಯುವನಿಧಿ ಯೋಜನೆಗಳ ಸಮಸ್ಯೆೆಗಳ ಬಗ್ಗೆೆ ಮಾಹಿತಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ತಾ.ಪಂ, ಇಓ ಉಮೇಶ ಘಟಕ ವ್ಯವಸ್ಥಾಾಪಕ ಪ್ರಕಾಶ ದೊಡ್ಮನಿ, ಸಿಡಿಪಿಓ ನಾಗರತ್ನ ಸೇರಿ ಇಲಾಖಾ ಅಧಿಕಾರಿಗಳು ಹಾಗೂ ಗ್ಯಾಾರಂಟಿ ಯೋಜನೆಗಳ ಅನುಷ್ಠಾಾನ ಸಮಿತಿ ಸದಸ್ಯರು ಭಾಗಿಯಾಗಿದ್ದರು.
ಸಮರ್ಪಕ ಮಾಹಿತಿ ನೀಡದ ಜೆಸ್ಕಾಾಂ ಅಧಿಕಾರಿ ತರಾಟೆಗೆ

