ಸುದ್ದಿಮೂಲ ವಾರ್ತೆ ಮಾನ್ವಿ, ಜ.10:
ವೃತ್ತಿಿಪರ ಕೋರ್ಸುಗಳು ವಿದ್ಯಾಾರ್ಥಿಗಳ ಉಜ್ವಲ ಭವಿಷ್ಯಕ್ಕೆೆ ಬಹಳ ಅನುಕೂಲವಾಗುತ್ತವೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಶನಿವಾರ ಸರ್ವೋದಯ ಸಮೂಹ ಶಿಕ್ಷಣ ಸಂಸ್ಥೆೆ ಹಾಗೂ ಕಳಿಂಗ ಕಾಲೇಜು ವತಿಯಿಂದ ನಡೆದ ಸಂಸ್ಥೆೆಯ ವಾರ್ಷಿಕೋತ್ಸವ, ವಿದ್ಯಾಾರ್ಥಿಗಳ ಬೀಳ್ಕೊೊಡುಗೆ ಸಮಾರಂಭ ಉದ್ಘಾಾಟಿಸಿ ಮಾತನಾಡುತ್ತಿಿದ್ದರು.
ಮನೋಜ್ ಕುಮಾರ, ಅನಿಲ್ ಕುಮಾರ ಮತ್ತು ಆಂಜನೇಯ ಎಂಬ ಮೂವರು ಸ್ನೇಹಿತರು ಕಳೆದ 15 ವರ್ಷಗಳ ಹಿಂದೆ ಸರ್ವೋದಯ ಶಿಕ್ಷಣ ಸಂಸ್ಥೆೆ ಸ್ಥಾಾಪಿಸುವ ಮೂಲಕ ಪ್ರಾಾಥಮಿಕ, ಪ್ರೌೌಢ ಶಾಲೆ, ವಿಜ್ಞಾನ ಕಾಲೇಜು ಆರಂಭಿಸಿ ಇದರ ಜೊತೆಗೆ ಅನೇಕ ವೃತ್ತಿಿಪರ ಕೋರ್ಸುಗಳನ್ನು ಆರಂಭಿಸಿದ್ದಾರೆ.
ಈ ಕೋರ್ಸುಗಳು ಬಡ ಹಾಗೂ ಹಿಂದುಳಿದ ವರ್ಗದ ವಿದ್ಯಾಾರ್ಥಿಗಳ ಭವಿಷ್ಯಕ್ಕೆೆ ಬಹಳ ಅನುಕೂಲವಾಗಲಿವೆ. ಪಟ್ಟಣದ ಸರಕಾರಿ ಬಾಲಕಿಯರ ಕಾಲೇಜಿನಲ್ಲಿ ಮುಚ್ಚಿಿ ಹೋಗಿದ್ದ ವಿಜ್ಞಾನ ವಿಭಾಗವನ್ನು ನಾನು ಶಾಸಕನಾದ ಅವಧಿಯಲ್ಲಿ ಪುನಃ ಆರಂಭಿಸಿ ಹೆಣ್ಣು ಮಕ್ಕಳು ವಿಜ್ಞಾನ ಕೋರ್ಸು ಓದಲು ಅನುಕೂಲ ಮಾಡಿಕೊಟ್ಟಿಿದ್ದೇನೆ. ವಿದ್ಯಾಾರ್ಥಿಗಳು ಸರ್ವೋದಯದಂತ ಉತ್ತಮ ಶಿಕ್ಷಣ ಸಂಸ್ಥೆೆಯಲ್ಲಿ ಗುರಿ ಇಟ್ಟು ಅಭ್ಯಾಾಸ ಮಾಡಿ ಸಂಸ್ಥೆೆಗೆ, ಪಾಲಕರಿಗೆ ಕೀರ್ತಿ ತರಬೇಕು ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಕರೇಗುಡ್ಡ ಮಠದ ಸ್ವಾಾಮೀಜಿಗಳು, ಸುಲ್ತಾಾನಪುರ ಮಠದ ಸ್ವಾಾಮೀಜಿಗಳು ಮಾತನಾಡಿ ಆಶೀರ್ವಚನ ನೀಡಿದರು.
ಈ ಕಾರ್ಯಕ್ರಮದಲ್ಲಿ ಕಲ್ಮಠ ಆಯುರ್ವೇದಿಕ್ ಕಾಲೇಜಿನ ಪ್ರಾಾಚಾರ್ಯ ಡಾ.ಜೀವನೇಶ್ವರಯ್ಯ, ಬಾಷುಮಿಯಾ ಸಾಹುಕಾರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪೊ್ರೆಸರ್ ಡಾ.ಮಿನಾಜ್ ಉಲ್ ಹಸನ್, ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ ತಡಕಲ್, ಕಾರ್ಯದರ್ಶಿ ರವಿಕುಮಾರ ಹಾಗೂ ಜಿಲ್ಲಾ-ತಾಲೂಕಾ ಪದಾಧಿಕಾರಿಗಳನ್ನು, ಹಿರಿಯ ಪತ್ರಕರ್ತರನ್ನು ಸನ್ಮಾಾನಿಸಲಾಯಿತು.
ವೇದಿಕೆಯ ಮೇಲೆ ಬಿಇಓ ಚಂದ್ರಶೇಖರ ದೊಡ್ಡಮನಿ, ಪ್ರಥಮ ದರ್ಜೆ ಗುತ್ತೇದಾರ ಸೈಯದ್ ಅಕ್ಬರ್ ಪಾಷಾ, ವಕೀಲರ ಸಂಘದ ಅಧ್ಯಕ್ಷ ರವಿಕುಮಾರ ಪಾಟೀಲ್, ಗಾಂಧಿ ಸ್ಮಾಾರಕ ಶಿಕ್ಷಣ ಸಂಸ್ಥೆೆಯ ಆಡಳಿತಾಧಿಕಾರಿ ರಾಮಲಿಂಗಪ್ಪ, ಖಾಸಗಿ ಶಿಕ್ಷಣ ಸಂಸ್ಥೆೆಗಳ ಒಕ್ಕೂಟದ ಕಾರ್ಯದರ್ಶಿ ರಾಜು ತಾಳಿಕೋಟೆ, , ಜ್ಞಾನ ನಿಧಿ ಶಾಲೆಯ ಅಧ್ಯಕ್ಷ ಎಂ.ಎ.ಹೆಚ್.ಮುಖೀಮ್, ವೆಂಕಟೇಶ್ವರ ಶಾಲೆಯ ಅಧ್ಯಕ್ಷ ಮಹಾಂತೇಶ ಓಲೇಕಾರ, ರೈಸಿಂಗ್ ಶಾಲೆಯ ಕಾರ್ಯದರ್ಶಿ ಹೀನಾ ಬೇಗಂ, ಸರ್ವೋದಯ ಶಿಕ್ಷಣ ಸಂಸ್ಥೆೆಯ ಮುಖ್ಯಸ್ಥರಾದ ಮನೋಜ್ ಕುಮಾರ ಮಿಶ್ರಾಾ, ಅನಿಲ್ ಕುಮಾರ, ಆಂಜನೇಯ, ದತ್ತಾಾತ್ರೇೇಯ ಮೇಟಿ, ಪ್ರಾಾಚಾರ್ಯರಾದ ರೇಣುಕಾ ಮತ್ತು ಮಂಜುನಾಥ ಮುಖಂಡರಾದ ಈರಣ್ಣ ಮರ್ಲಟ್ಟಿಿ, ಪಿ.ರವಿಕುಮಾರ, ಹೆಚ್. ಮೌನೇಶಗೌಡ, ಶಿವಕುಮಾರ ಚಲ್ಮಲ್, ದೇಸಾಯಿ ದೋತರಬಂಡಿ ಉಪಸ್ಥಿಿತರಿದ್ದರು.
ವೃತ್ತಿಪರ ಕೋರ್ಸುಗಳಿಂದ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ-ರಾಜಾ ವೆಂಕಟಪ್ಪ ನಾಯಕ

