ಸುದ್ದಿಮೂಲ ವಾರ್ತೆ ರಾಯಚೂರು, ಜ.10:
ಹುಬ್ಬಳ್ಳಿಿಯಲ್ಲಿ ಮಹಿಳೆಯ ವಿವಸಗೊಳಿಸಿ ಹಲ್ಲೆೆ ಮಾಡಿದ ಪೊಲೀಸರ ನಡೆ ಖಂಡಿಸಿ ಜಿಲ್ಲಾಾ ಬಿಜೆಪಿ ಪಕ್ಷದಿಂದ ಪ್ರತಿಭಟನೆ ನಡೆಸಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರು ಹುಬ್ಬಳ್ಳಿಿ ಪೊಲೀಸರ ವಿರುದ್ಧ ಆಕ್ರೋೋಶ ವ್ಯಕ್ತಪಡಿಸಿದರು ನಂತರ ತಹಶೀಲ್ ಕಚೇರಿ ಅಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಹುಬ್ಬಳ್ಳಿಿ ನಗರದಲ್ಲಿ ಜ.7ರಂದು ಪೊಲೀಸರು ಬಿಜೆಪಿ ಕಾರ್ಯಕರ್ತೆ ಸುಜಾತ ಹಂಡಿಯವರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಘಟನೆ ನಾಗರೀಕ ಸಮಾಜವೇ ತಲೆತಗ್ಗಿಿಸುವಂತೆ ಮಾಡಿದೆ ಎಂದು ದೂರಿದರು.
ಮಹಿಳೆಯರಿಗೆ ಪವಿತ್ರ ಸ್ಥಾಾನ ನೀಡುವ ಈ ಸಮಾಜದಲ್ಲಿ ರಾಜಕೀಯ ದ್ವೇಷಕ್ಕಾಾಗಿ ಒಬ್ಬ ಮಹಿಳೆ ಎಂದು ನೋಡದೆ, ಸಾರ್ವಜನಿಕವಾಗಿ ದೌರ್ಜನ್ಯ ಎಸಗಲು ಪೊಲೀಸರಿಗೆ ಕುಮ್ಮಕ್ಕು ನೀಡಿದ್ದು ಪೊಲೀಸ್ ಇಲಾಖೆಯ ಮೇಲೆ ಸರ್ಕಾರದ ನಿಯಂತ್ರಣ ಇಲ್ಲ ಎನ್ನುವುದಕ್ಕೆೆ ಸಾಕ್ಷಿಿಯಾಗಿದೆಂದು ದೂರಿದರು.
ಕಾಂಗ್ರೆೆಸ್ ಕಾರ್ಪೊರೇಟರ್ ಸುವರ್ಣ ಅವರು ನೀಡಿದ ದೂರಿನ ಮೇರೆಗೆ ಬಿಜೆಪಿ ಕಾರ್ಯಕರ್ತೆ ಸುಜಾತಳ ಮೇಲೆ ಪೊಲೀಸರು ತಮ್ಮ ದರ್ಪ ಪ್ರದರ್ಶಿಸಿದ್ದು ದುರಾಡಳಿತಕ್ಕೆೆ ಹಿಡಿದ ಕೈಗನ್ನಡಿಯಾಗಿದೆ. ಹಾಗೆಯೇ ಒಬ್ಬ ಜೀವಂತ ಜನಪ್ರತಿನಿಧಿಗೆ ಶ್ರದ್ಧಾಾಂಜಲಿ ಪೋಸ್ಟ್ ಹಾಕಿರುವ ಬಿಲ್ಲವ ಸಂದೇಶ್ ಎಂಬುವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಸುಳ್ಯದ ಶಾಸಕಿ ಭಾಗಿರತಿ ಮುರುಳ್ಯ ರವರನ್ನು ತೇಜೋವಧೆ ಮಾಡುವ ಪೋಸ್ಟ್ ಗೆ ತಕ್ಷಣವೇ ಪ್ರಕರಣಗಳಲ್ಲಿ ಸರ್ಕಾರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಿಹಾಳ, ಮಾಜಿ ಸಂಸದ ಬಿ ವಿ ನಾಯಕ, ಮಾಜಿ ಶಾಸಕರಾದ ಅಮರನಾಥ ಪಾಟೀಲ, ಬಸನಗೌಡ ಬ್ಯಾಾಗವಾಟ್, ರವೀಂದ್ರ ಜಲ್ದಾಾರ, ಲಿಂಗರಾಜ ಹೂಗಾರ, ಡಾ ನಾಗರಾಜ್ ಭಾಲ್ಕಿಿ, ಜಂಬಣ್ಣ, ಕೆ.ಎಂ.ಪಾಟೀಲ್. ನರಸರೆಡ್ಡಿಿ, ಚಂದ್ರಶೇಖರ, ಕಡಗೋಲ ರಾಮು, ಬಂಡೇಶ ವಲ್ಕಂದಿನ್ನಿಿ, ವಿಜಯರಾಜೇಶ್ವರಿ, ಶರಣಮ್ಮ ಕಾಮೆರೆಡ್ಡಿಿ , ವಾಣಿಶ್ರೀ , ಸುಲೋಚನಾ ಬಿ ಸ್ವಾಾಮಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಹುಬ್ಬಳ್ಳಿಯ ಮಹಿಳೆ ವಿವಸಗೊಳಿಸಿ ಹಲ್ಲೆ ಖಂಡಿಸಿ ಬಿಜೆಪಿ ಪ್ರತಿಭಟನೆ

