ಸುದ್ದಿಮೂಲ ವಾರ್ತೆ ರಾಯಚೂರು, ಜ.10:
ಎಲ್ಲರನ್ನೊೊಳಗೊಳ್ಳುವಿಕೆಯ ವ್ಯಕ್ತಿಿತ್ವದ ಮೂಲಕ ಪ್ರೀತಿ ಸ್ನೇಹ ಗಳಿಸಿದ್ದ ಜಿ.ಸುರೇಶ ಈ ಕಾಲದ ಯುವಕರಿಗೆ ಸ್ಪೂರ್ತಿದಾಯಕರಾಗಿದ್ದಾಾರೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್ ಹೇಳಿದರು.
ನಗರದ ಪಂ.ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರದಲ್ಲಿ ಜಿ.ಸುರೇಶ ಪ್ರತಿಷ್ಠಾಾನದಿಂದ ಹಮ್ಮಿಿಕೊಂಡಿದ್ದ ಸಾಹಿತಿ ಅವರ ಒಡನಾಡಿ ವೀರಹನುಮಾನ ರಚಿಸಿದ ಆತ್ಮಬಂಧು ಎರಡು ಜೀವ ಒಂದು ಕಥಾನಕ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ಸಾಹಿತ್ಯಘಿ, ಶಿಕ್ಷಣ ಮತ್ತು ರಾಜಕೀಯದಲ್ಲಿ ಗುರುತಿಸಿಕೊಂಡು ತಮಗೆ ವಹಿಸಿದ ಜವಾಬ್ದಾಾರಿಯನ್ನು ಅಚ್ಚುಕಟ್ಟುತನದಿಂದ ಮಾಡಿದ ಜಿ.ಸುರೇಶ ಅವರ ಬದ್ಧತೆಯ ಗುಣ ಅವರನ್ನು ಅಜಾತಶತ್ರು, ಪ್ರೀತಿಗೆ ಪಾತ್ರರಾಗಿದ್ದರು ಎಂದರು.
ಸರಳ ವ್ಯಕ್ತಿಿತ್ವದ ಜೊತೆಗೆ ಎಲ್ಲರೊಟ್ಟಿಿಗೂ ಗುರುತಿಸಿಕೊಂಡು ಎಲ್ಲಾ ಸಮುದಾಯದ ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು.ಯಾವುದೆ ಜಾತಿ ಧರ್ಮ ಬೇಧಭಾವ ವಿಲ್ಲದೇ ಭಾಗವಹಿಸುತ್ತಿಿದ್ದರು ಎಂದರು.
ವೀರಹನುಮಾನ ಅವರ ಆತ್ಮಬಂಧು ಕೃತಿಯ ಮೂಲಕ ಜಿ. ಸುರೇಶ ಅವರ ಸ್ನೇಹ ಸಂಬಂಧ ಮತ್ತು ಜೀವನದ ಪರಿಚಯ ಮಾಡಿಕೊಟ್ಟಿಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ಕುಮಾರ ಬಂಗಾರಪ್ಪ ಮಾತನಾಡಿ, ಜಿ.ಸುರೇಶ ಸರಳ ಜೀವಿ ಹಾಗೂ ಕ್ರಿಿಯಾಶೀಲ ವ್ಯಕ್ತಿಿತ್ವ ಹೊಂದಿದ್ದರಿಂದ ತಮ್ಮ ತಂದೆ ಮಾಜಿ ಸಿಎಂ ಬಂಗಾರಪ್ಪ ಜೊತೆ ಗುರುತಿಸಿಕೊಂಡು ಈಗಲೂ ಕುಟುಂಬಸ್ಥರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದರು.
ನಾವು ಯಾವುದೆ ಪಕ್ಷದಲ್ಲಿದ್ದರೂ ನಮ್ಮ ಹಿತಚಿಂತಕರಾಗಿ ನಮ್ಮ ಬೆಂಬಲಕ್ಕೆೆ ನಿಂತು ತಂದೆಯವರ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆೆ ತಪ್ಪದೆ ಆಗಮಿಸುತ್ತಿಿದ್ದ ಅವರು ಕೊನೆಯವರೆಗೂ ಬಂಗಾರಪ್ಪನವರ ಶಿಷ್ಯರಾಗಿ ಅವರ ತತ್ವ ಸಿದ್ಧಾಾಂತಗಳಿಗೆ ಬದ್ಧರಾಗಿ ನಡೆದುಕೊಂಡಿದ್ದರು. ಬಂಗಾರಪ್ಪ ಅವರನ್ನು ರಾಯಚೂರು ಜನ ಮನೆ ಮನೆಯ ಮಗನಾಗಿ ಭಾವಿಸಿದ್ದರು.ಕರ್ನಾಟಕ ರಾಜ್ಯಕ್ಕೆೆ ಹಲವಾರು ಯೋಜನೆಗಳ ಮೂಲಕ ಮರೆಯದಂತ ಕೊಡುಗೆಗಳನ್ನು ನೀಡುವುದರ ಜತೆಗೆ ತಮ್ಮ ನೇರ ನುಡಿ ಹಾಗೂ ದಿಟ್ಟ ನಿಲುವುಗಳಿಂದ ರಾಜ್ಯದೆಲ್ಲೆಡೆ ಅಭಿಮಾನಿಗಳ ಮನಸ್ಸಿಿನಲ್ಲಿ ಶಾಶ್ವತವಾಗಿ ನೆಲೆಸಿದ್ದರು ಎಂಬುದಕ್ಕೆೆ ಜಿ.ಸುರೇಶ ಅವರೆ ಸಾಕ್ಷಿಿ ಎಂದರು.
ವೀರಹನುಮಾನ್ ಬರೆದಿರುವ ಆತ್ಮ ಬಂಧು ಕೃತಿ ಜಿ. ಸುರೇಶ ಅವರ ಬಾಲ್ಯ ಸ್ನೇಹ ಸಾಹಿತಿ ವೀರಹನುಮಾನ ಆತ್ಮೀಯ ಸಂಬಂಧ ಬಗ್ಗೆೆ ಹಾಗೂ ರಾಯಚೂರು ಜನರು ಆರ್ಥಿಕವಾಗಿ ಹಿಂದುಳಿದರೂ ಹೃದಯ ಶ್ರೀಮಂತಿಕೆ ಹೊಂದಿದ್ದಾರೆ ಅತ್ಯಂತ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ ಎಂದು ಮೆಲಕು ಹಾಕಿದರು.
ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತ ಬಿ.ವೆಂಕಟಸಿಂಗ್, ಅಧ್ಯಕ್ಷತೆ ವಹಿಸಿದ್ದ ತಾರಾನಾಥ ಶಿಕ್ಷಣ ಸಂಸ್ಥೆೆ ಅಧ್ಯಕ್ಷ ಪಾರಸಮಲ್ ಸುಖಾಣಿ ಅವರು ಜಿ.ಸುರೇಶ ಜೊತೆಗಿನ ಒಡನಾಟ, ಅವರ ಶಿಸ್ತುಘಿ, ಸೇವೆಯ ಬಗ್ಗೆೆ ಸ್ಮರಿಸಿದರು.
ಸಾಹಿತಿ ಮಹಾಂತೇಶ ಮಸ್ಕಿಿಘಿ ಅವರು ಕೃತಿ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಕೃತಿಕಾರ ವೀರಹನುಮಾನ, ರಾಮಣ್ಣ ಹವಳೆ, ಪವನಾಚಾರ್ಯ, ಪ್ರತಿಷ್ಠಾಾನದ ಮಲ್ಕಪ್ಪ ಪಾಟೀಲ, ಈರಣ್ಣ ಬೆಂಗಾಲಿ, ಬಸವರಾಜ ಸೇರಿದಂತೆ ಜಿ.ಸುರೇಶ ಕುಟುಂಬದವರು, ಸ್ನೇಹಿತರು, ವಿದ್ಯಾಾರ್ಥಿಗಳಿದ್ದರು.
ಆತ್ಮಬಂಧು ಎರಡು ಜೀವ ಒಂದು ಕಥಾನಕ ಕೃತಿ ಲೋಕಾರ್ಪಣೆ ಎಲ್ಲರನ್ನೊಳಗೊಳ್ಳುವಿಕೆಯ ಜಿ.ಸುರೇಶ ವ್ಯಕ್ತಿತ್ವ ಅನುಕರಣೀಯ – ಬೋಸರಾಜ್

