ಸುದ್ದಿಮೂಲ ವಾರ್ತೆ ರಾಯಚೂರು, ಜ.10:
ಕೇಂದ್ರ ಸರ್ಕಾರದ ವಿಕಸಿತ ಭಾರತ ಉದ್ಯೋೋಗ ಖಾತ್ರಿಿ (ವಿಬಿ-ಜಿ-ರಾಮ-ಜಿ) ಮತ್ತು ಜೀವನೋಪಾಯ ಯೋಜನೆಯನ್ನು ಕಾಂಗ್ರೆೆಸ್ ದುರುದ್ದೇಶದಿಂದ ವಿರೋಧಿಸಿ ಜನರಿಗೆ ತಪ್ಪುು ಮಾಹಿತಿ ನೀಡುತ್ತಿಿದೆ ಎಂದು ವಿಧಾನ ಪರಿಷತ್ ಮಾಜಿ ಶಾಸಕ, ಬಿಜೆಪಿ ಮುಖಂಡ ಅಮರನಾಥ ಪಾಟೀಲ ಆರೋಪಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಈ ಹಿಂದೆ ಇದೇ ಕಾಂಗ್ರೆೆಸ್ ನೇತೃತ್ವದ ಯುಪಿಎ ಸರ್ಕಾರ ಜವಾಹಾರ ರೋಜಗಾರ ಯೋಜನೆ ಹೆಸರು ಬದಲಿಸಿ ಮಹಾತ್ಮಗಾಂಧಿ ಉದ್ಯೋೋಗ ಖಾತ್ರಿಿ ಯೋಜನೆ ಎಂದು ರೂಪಿಸಿತ್ತುಘಿ.ಆಗಲೇನಾದರೂ ಆಕ್ಷೇಪಿಸಲಾಗಿತ್ತೆೆಘಿ. ನರೇಂದ್ರ ಮೋದಿ ಸರ್ಕಾರ ಮೂರು ಯೋಜನೆ ಒಗ್ಗೂಡಿಸಿ ಪಾರದರ್ಶಕ, ಪರಿಣಾಮಕಾರಿ ಜಾರಿಗೆ ವಿಬಿ-ಜಿ-ರಾಮ-ಜಿ ಯೋಜನೆ ಜಾರಿಗೆ ತಂದಿದೆ . ಕಾಂಗ್ರೆೆಸ್ನವರಿಗೆ ಯೋಜನೆಗಿಂತ ಹೆಸರು ಮುಖ್ಯವಾಗಿ ರಾಜಕೀಯ ದೊಂಬರಾಟ ಮಾಡುತ್ತಿಿದ್ದಾಾರೆ ಎಂದು ಟೀಕಿಸಿದರು.
ಈ ಯೋಜನೆಯಿಂದ ಭ್ರಷ್ಟಾಾಚಾರ ನಡೆಯುತ್ತಿಿದೆ, ಕಾಮಗಾರಿ ಮಾಡದೆ ಬಿಲ್ಗಳ ಪಾವತಿಯಾಗಿದೆ ಎಂಬ ವರದಿ ಹಿನ್ನೆೆಲೆಯಲ್ಲಿ ಕೇಂದ್ರ ಸರ್ಕಾರ ಕೇಂದ್ರೀಕೃತ ಬಿಲ್ ಪಾವತಿ, ಆರು ತಿಂಗಳಿಗೊಮ್ಮೆೆ ಲೆಕ್ಕ ಪರಿಶೋಧನೆ , ವಿಬಿ-ಜಿ-ರಾಮ-ಜಿ ಯೋಜನೆಯಿಂದ 125 ದಿನಗಳ ಕೆಲಸ, 370 ರೂ ದಿನಗಳು ಸಿಗುತ್ತಿಿದೆ, ಗ್ರಾಾಮ ಪಂಚಾಯಿತಿಗಳೇ ಯೋಜನೆ ಜಾರಿಯ ಕೇಂದ್ರ ಸ್ಥಾಾನ ಸೇರಿ ಹಲವು ಬದಲಾವಣೆ ಮಾಡಲಾಗಿದೆ.
ಯಾವುದರಿಂದ ಕಾಂಗ್ರೆೆಸ್ನವರಿಗೆ ಅನ್ಯಾಾಯವಾಗಿದೆ ಭ್ರಷ್ಟಾಾಚಾರ , ಕಾಮಗಾರಿ ಮಾಡದೆ ಬಿಲ್ ಪಾವತಿಸುವುದೇ ಎಂಬುದನ್ನು ಬಹಿರಂಗ ಪಡಿಸಲಿ ಎಂದರು.
2014ರಲ್ಲಿ ದೇಶದಲ್ಲಿ ಶೇ.25.7ರಷ್ಟಿಿದ್ದ ಬಡತನ ಈಗ 4.86ಕ್ಕೆೆ ಇಳಿದಿದೆ. ಮೋದಿ ಅವರಿಗಿಂತ ಮುಂಚೆ 33 ಸಾವಿರ ಕೋಟಿ ಬಜೆಟ್ ಖಾತ್ರಿಿ ಯೋಜನೆಗಿತ್ತು ಈಗ 2 ಲಕ್ಷ 86 ಸಾವಿರ ಅನುದಾನ ನೀಡಿದ್ದಾಾರೆ. ಸುಳ್ಳು ಹೇಳಿ ಅನುದಾನ ಕಡಿತಗೊಳಿಸುತ್ತಿಿದ್ದಾಾರೆ ಎಂದು ಹೇಳುತ್ತಿಿರುವುದು ಸಲ್ಲದು. ಮಾಡಿದ ಕೆಲಸಕ್ಕೆೆ ಕೇಂದ್ರ ಹಣ ಪಾವತಿಸುತ್ತದೆ ವಿನಃ ಸುಳ್ಳು ಲೆಕ್ಕಗಳಿಗೆ ಇನ್ನು ಮುಂದೆ ನೀಡದು ಎಂದು ಹೇಳಿದರು.
ಸಿದ್ದರಾಮಯ್ಯನವರು ಅಧಿಕಾರಕ್ಕೆೆ ಬಂದ ಮೇಲೆಯೇ 30 ಯೋಜನೆಗಳ ಹೆಸರು ಬದಲಿಸಿದ್ದಾಾರೆ, ಇಂದಿರಾಗಾಂಧಿ ಹೆಸರಲ್ಲಿ 27 ಯೋಜನೆಗಳಿವೆ. ರಾಜೀವಗಾಂಧಿ ಹೆಸರಲ್ಲಿ 55, ಶೈಕ್ಷಣಿಕ ಸಂಸ್ಥೆೆಗಳು, ಕ್ರೀಡಾಂಗಣ, ಪ್ರಶಸ್ತಿಿಗಳು ಗಾಂಧಿ ವಂಶದವರ ಹೆಸರಲ್ಲಿವೆ ಎಂದರು.
ಸಮರ್ಥವಾಗಿ ಗ್ರಾಾಮೀಣ ಭಾಗದ ಜನರ ಸಬಲೀಕರಣಕ್ಕೆೆ ಒತ್ತು ನೀಡುವ ವಿಬಿ-ಜಿ-ರಾಮ-ಜಿ ಯೋಜನೆಯನ್ನು ಜನ ಸಾಮಾನ್ಯರು, ಕೂಲಿಕಾರರು ಸ್ವಾಾಗತಿಸಿದ್ದಾಾರೆ ಎಂದು ಸಮರ್ಥಿಸಿಕೊಂಡರು.
ಸುದ್ದಿಗೋಷ್ಠಿಿಯಲ್ಲಿ ಪಕ್ಷದ ಜಿಲ್ಲಾಾಧ್ಯಕ್ಷ ವೀರನಗೌಡ ಲೆಕ್ಕಿಿಹಾಳ, ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ಜಲ್ದಾಾರ್, ಜಂಬಣ್ಣ ನೀಲೋಗಲ್, ವಕ್ತಾಾರ ಸಿದ್ದನಗೌಡ ನೆಲಹಾಳ,ಯು.ನರಸರೆಡ್ಡಿಿ ಇದ್ದರು.
ಕಾಂಗ್ರೆಸ್ ದುರುದ್ದೇಶದಿಂದ ವಿಬಿ-ಜಿ-ರಾಮ-ಜಿ ಯೋಜನೆ ವಿರೋಧಿಸುತ್ತಿದೆ-ಅಮರನಾಥ ಪಾಟೀಲ

