ಸುದ್ದಿಮೂಲ ವಾರ್ತೆ ಕಲಬುರಗಿ, ಜ.10:
ಕೇಂದ್ರ ಸರ್ಕಾರದ ವಿ.ಬಿ ಜಿ-ರಾಮ್-ಜಿ ಕಾಯ್ದೆೆ ಸಂವಿಧಾನ ವಿರೋಧಿಯಾಗಿದ್ದು, ಅದರ ವಿರುದ್ದ ರಾಜ್ಯ ಸರ್ಕಾರ ಈಗಾಗಲೇ ನಿರ್ಣಯ ಕೈಗೊಂಡಿದೆ. ಜೊತೆಗೆ ಕಾನೂನು ಹೋರಾಟ ರೂಪಿಸುತ್ತಿಿದೆ ಎಂದು ಗ್ರಾಾಮೀಣಾಭಿವೃದ್ಧಿಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಿಯಾಂಕ್ ಖರ್ಗೆ ಹೇಳಿದರು.
ನಗರದ ಐವಾನ್-ಇ-ಶಾಹಿ ಅತಿಥಿ ಗೃಹದಲ್ಲಿ ಪತ್ರಿಿಕಾಗೋಷ್ಠಿಿಯಲ್ಲಿ ಅವರು ಮಾತನಾಡಿ,ಕೇಂದ್ರದ ವಿಬಿ. ಜಿ-ರಾಮ್-ಜಿ ಕಾಯ್ದೆೆ ದಶರಥನ ರಾಮನೂ ಅಲ್ಲ, ಸೀತಾರಾಮನೂ ಅಲ್ಲ. ಅದು ನಾಥೂರಾಮ. ನಾಥೂರಾಮ ಎಂದರೆ ಅದು ಆರ್ ಎಸ್ ಎಸ್ ತತ್ವದ ರಾಮ. ಆರ್ಎಸ್ ಎಸ್ ತತ್ವಗಳು ಹೇಗಿರುತ್ತವೆ ಎಂದು ಗೊತ್ತಿಿದೆಯಲ್ಲ? ಅವು ಬಡವರ ವಿರುದ್ದವಾಗಿರುತ್ತವೆ. ಧರ್ಮದ ನಶೆಯಲ್ಲಿ ಜನರನ್ನು ತೇಲಾಡಿಸುವುದು ಆಗಿದೆ ಎಂದು ಟೀಕಿಸಿದರು.
ಕಾಯ್ದೆೆ ವಿರುದ್ದ ನಿರ್ಣಯ ಕೈಗೊಳ್ಳಲಾಗಿದೆ. ಕಾಯ್ದೆೆ ಬಗ್ಗೆೆ ವಿವರವಾಗಿ ಚರ್ಚಿಸಲು ಎರಡು ದಿನಗಳ ವಿಶೇಷ ಅಧಿವೇಶನ ಕರೆಯಲು ಕೂಡಾ ತೀರ್ಮಾನಿಸಲಾಗಿದೆ. ಅವರು ಅವರ ವಿಚಾರ ಹೇಳಲಿ. ನಾವು ನಮ್ಮ ವಿಚಾರ ಹೇಳುತ್ತೇವೆ. ಇದರ ಜೊತೆಗೆ ಕಾನೂನು ಹೋರಾಟ ರೂಪಿಸಲಾಗುತ್ತಿಿದೆ. ರಾಜ್ಯ ಸರ್ಕಾರದೊಂದಿಗೆ ಮಹಿಳಾ ಸಂಘಟನೆಗಳು, ಕೂಲಿ ಕಾರ್ಮಿಕರ ಸಂಘಟನೆಗಳು ಕೈಜೋಡಿಸಲು ಮುಂದಾಗಿವೆ. ಮೂರು ಕೃಷಿಕಾಯ್ದೆೆಗಳು ವಾಪಸ್ ಪಡೆದಂತೆ ಇದು ಕೂಡಾ ವಾಪಸ್ ಆಗಲಿದೆ ಎಂದರು.
ಈ ಹಿಂದಿನ ನರೇಗಾ ಯೋಜನೆಯಲ್ಲಿ ಅವ್ಯವಹಾರ ಆಗಿದ್ದು ಅದಕ್ಕೆೆ ಹೊಸ ಕಾಯ್ದೆೆ ಅದನ್ನು ತಡೆಯಲು ಜಾರಿಯಾಗುತ್ತಿಿದೆ. ಹಾಗಾಗಿ ಕಾಂಗ್ರೆೆಸ್ ವಿರೋಧಿಸುತ್ತಿಿದೆ ಎಂದು ಬಿಜೆಪಿ ಹೇಳಿರುವುದರ ಕುರಿತು ಪ್ರಶ್ನಿಿಸಿದಾಗ ದಿನಕ್ಕೆೆ ಸುಮಾರು 12 ಕೋಟಿ ಕಾರ್ಮಿಕರು ಕೆಲಸ ಮಾಡುವಂತ ಯೋಜನೆ. ಸಾವಿರಾರು ಕುಟುಂಬಗಳು ಜೀವನ ನಿರ್ವಹಣೆ ನಡೆಯುತ್ತಿಿತ್ತು. ಅಂತಹ ಬೃಹತ್ ಯೋಜನೆಯಲ್ಲಿ ಎಲ್ಲೋ ಒಂದೆರಡು ಕಡೆ ತಪ್ಪುುಗಳಾದಾಗ ಇಡೀ ಯೋಜನೆಯನ್ನೇ ರದ್ದು ಗೊಳಿಸಬೇಕಾ? ನೆಗಡಿ ಬಂದರೆ ಮೂಗನ್ನೇ ಕತ್ತರಿಸಿಕೊಳ್ಳಬೇಕಾ? ಪ್ರಧಾನ ಮಂತ್ರಿಿ ಕೌಶಲ್ಯ ಯೋಜನೆಯಲ್ಲಿ ಸುಮಾರು 14,500 ಕೋಟಿ ಅವ್ಯವಹಾರವಾಗಿದೆ ಎಂದು ವರದಿ ಹೇಳುತ್ತಿಿದೆ. ಹಾಗಾದಾರೆ, ಅದನ್ನು ಯಾಕೆ ರದ್ದು ಮಾಡಿಲ್ಲ ಎಂದು ಪ್ರಶ್ನಿಿಸಿದರು.
ಕಳೆದ 20 ವರ್ಷದಿಂದ ನರೇಗಾ ಕಾಯ್ದೆೆ ಜಾರಿಗೆ ಬಂದಿದೆ. ಇವರು ಕಳೆದ 11 ವರ್ಷದಿಂದಲೂ ಅಧಿಕಾರದಲ್ಲಿದ್ದರು ಭ್ರಷ್ಟಾಾಚಾರ ನಡೆದಿದ್ದರೆ ಆಗ ವಿರೋಧಿಸದೆ ಏನು ಕತ್ತೆೆ ಕಾಯುತ್ತಿಿದ್ದರಾ? ಆಗಲಿಂದಲೂ ಇವರಿಗೆ ಪಾಲೂ ಹೋಗಿತ್ತಾಾ ? ಅಥವಾ ಹೋಗಿರುವ ಪಾಲು ಕಡಿಮೆಯಾಗಿತ್ತಾಾ ಎಂದು ಪ್ರಶ್ನಿಿಸಿದರು.
ಕೇಂದ್ರದ ವಿಬಿ ಜಿ-ರಾಮ್-ಜಿ ಕಾಯ್ದೆ ವಿರುದ್ದ ಕಾನೂನು ಹೋರಾಟ : ಸಚಿವ ಪ್ರಿಯಾಂಕ್ ಖರ್ಗೆ

