ಸುದ್ದಿಮೂಲ ವಾರ್ತೆ ಮಸ್ಕಿ/ಮುದಗಲ್, ಜ.10:
ರಾಯಚೂರು ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಾಧಿಕಾರಿ ಅರುಣಾಂಕ್ಕು ಗಿರಿ ಅವರು ಮಸ್ಕಿಿ ಪೊಲೀಸ್ ಠಾಣೆಗೆ ಭೇಟಿ ನೀಡಿದರು.ಶನಿವಾರ ಮಸ್ಕಿಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ವರಿಷ್ಠಾಾಧಿಕಾರಿ ಅವರು ಪೊಲೀಸ್ ಠಾಣೆಯ ಕಾರ್ಯ ವೈಖರಿ ಪರಿಶೀಲಿಸಿದರು.ಬಳಿಕ ಅಧಿಕಾರಿ ಮತ್ತು ಸಿಬ್ಬಂದಿಗಳ ಸಭೆ ನಡೆಸಿ ಅಪರಾಧ ತಡೆ ಮತ್ತು ಪತ್ತೆೆ ಸಂಚಾರ ವ್ಯವಸ್ಥೆೆ, ಮಾದಕ ದ್ರವ್ಯ ನಿಗ್ರಹ, ಬೀಟ್ ವ್ಯವಸ್ಥೆೆ, ರಾಜ್ಯ ಹೆದ್ದಾರಿ ಸಾರಿಗೆ ಸುವ್ಯವಸ್ಥೆೆ, ಜನ ಸಾಮಾನ್ಯರ ನಿರೀಕ್ಷೆಗೆ ತಕ್ಕಂತೆ ಶಾಂತಿ, ಸುವ್ಯವಸ್ಥೆೆ ಕಾಪಾಡುವಲ್ಲಿ ಪ್ರಾಾಮಾಣಿಕ ಪ್ರಯತ್ನ ಮಾಡಬೇಕು ಮುಂತಾದ ವಿಷಯಗಳ ಬಗ್ಗೆೆ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.
ಈ ಸಂದರ್ಭ ಲಿಂಗಸುಗೂರು ಉಪ ವಿಭಾಗದ ಡಿವೈಎಸ್ಪಿಿ ದತ್ತಾಾತ್ರೆೆಯ ಕಾರ್ನಾಡ್, ಮಸ್ಕಿಿ ವೃತ್ತ ನಿರೀಕ್ಷಕ ಸಿಪಿಐ ರಾಮಪ್ಪ ಜಲಿಗೇರಿ, ಠಾಣಾಧಿಕಾರಿ ಕೆ ರಂಗಯ್ಯ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಮುದಗಲ್ ವರದಿ : ಸ್ಥಳೀಯ ಪೋಲಿಸ್ ಠಾಣೆಗೆ ನೂತನ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಅರುಣಾಂಕ್ಕು ಗಿರಿ ಶನಿವಾರ ಭೇಟಿ ನೀಡಿದರು.
ಠಾಣೆ ಪಿಎಸ್ಐ ವೆಂಕಟೇಶ ಮಾಡಗಿರಿ ನೇತೃತ್ವದಲ್ಲಿ ನೂತನ ಎಸ್ ಪಿಗೆ ಗೌರವ ರಕ್ಷಣೆ ನೀಡಲಾಯಿತು. ಕೆಲ ಹೊತ್ತು ಪೊಲೀಸ್ರೊಂದಿಗೆ ಸಮಾಲೋಚನೆ ನಡೆಸಿದರು.
ಲಿಂಗಸುಗೂರು ಡಿವೈಎಸ್ಪಿಿ ದತ್ತಾಾತ್ರೇಯ ಕಾರ್ನಾಡ್, ಮಸ್ಕಿಿ ವೃತ್ತ ಸಿಪಿಐ ಆರ್ ವೈ ಜಲಗೇರಿ ಹಾಗೂ ಪೊಲೀಸರು ಇದ್ದರು.
ಮಸ್ಕಿ, ಮುದಗಲ್ ಪೊಲೀಸ್ ಠಾಣೆಗೆ ನೂತನ ಎಸ್ಪಿ ಭೇಟಿ

