ಸುದ್ದಿಮೂಲ ವಾರ್ತೆ ರಾಯಚೂರು ಜ.10:
ರಾಜ್ಯದಲ್ಲಿ ಬ್ಯಾಾಡ್ಮಿಿಂಟನ್ ಕ್ರೀಡೆ ಉತ್ತೇಜಿಸಲು ಕರ್ನಾಟಕದಲ್ಲಿ ಒಲಂಪಿಕ್ ವಿಲೇಜ್ ನಿರ್ಮಾಣಕ್ಕೆೆ ಭೂಮಿ ಮಂಜೂರು ಮಾಡಲು ಶೀಘ್ರವೆ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರ ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಬ್ಯಾಾಡ್ಮಿಿಂಟನ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ಮಾಜಿ ಸಚಿವ ಕುಮಾರ ಬಂಗಾರಪ್ಪ ತಿಳಿಸಿದರು.
ನಗರದಲ್ಲಿ ಮಾಜಿ ಸಂಸದ ಬಿ.ವಿ.ನಾಯಕರ ನಿವಾಸದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದರು. ಭಾರತ ಒಲಂಪಿಕ್ ಕ್ರೀಡೆ ಆಯೋಜಿಸಲು ನಿರ್ಧರಿಸಿರುವ ಈ ಹೊತ್ತಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ಸಮೀಪ ಸುಮಾರು 25 ಎಕರೆ ಪ್ರದೇಶದಲ್ಲಿ ಒಲಂಪಿಕ್ ಗ್ರಾಾಮ ನಿರ್ಮಾಣಕ್ಕೆೆ ಮನವಿ ಮಾಡಲಾಗುವುದು ಎಂದರು.
ರಾಜ್ಯದ 22 ಜಿಲ್ಲೆೆಗಳಲ್ಲಿ ಸಂಘ ಕಾರ್ಯ ನಿರ್ವಹಿಸುತ್ತಿಿದ್ದು ವಿವಿಧ ಕ್ಲಬ್ಗಳನ್ನು ಅಸೋಸಿಯೇಶನ್ ಜೊತೆ ಸೇರಿಕೊಳ್ಳಲು ಮನವರಿಕೆ ಮಾಡಿಕೊಡಲಾಗುವುದು. 31 ಜಿಲ್ಲೆೆಗಳಲ್ಲೂ ಅಸೋಸಿಯೇಶನ್ ಸ್ಥಾಾಪಿಸಲು ಕೋರಲಾಗುವುದು.
ಹೊಸ ಕ್ರೀಡಾಪಟುಗಳ ಪ್ರೋೋತ್ಸಾಾಹಿಸಲು ನಿರಂತರ ಪ್ರಯತ್ನ ಮಾಡಲಾಗುವುದು ಎಂದರು.
ಸಂಕ್ರಾಾಂತಿ ನಂತರ ತಮ್ಮ ನಟನೆಯ ಸರ್ಕಾರಿ ನ್ಯಾಾಯ ಬೆಲೆ ಅಂಗಡಿ ಚಿತ್ರ ಬಿಡುಗಡೆ ಮಾಡಲಾಗುವುದು. ಮೂರು ಹೊಸ ಚಲನ ಚಿತ್ರಗಳ ಬಗ್ಗೆೆ ಚರ್ಚೆ ನಡೆದಿದ್ದುಘಿ, ಹೊಸ ಚಿತ್ರದ ಚಿತ್ರೀಕರಣಕ್ಕೆೆ ಸಿದ್ದತೆ ಆರಂಭವಾಗಿದೆ ಎಂದರು.
ಸುದ್ದಿಗೋಷ್ಠಿಿಯಲ್ಲಿ ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಶಾಸಕ ಬಸನಗೌಡ ಬ್ಯಾಾಗವಾಟ್, ಬ್ಯಾಾಡ್ಮಿಿಂಟನ್ ಅಸೋಸಿಯೇಶನ್ ಅಧ್ಯಕ್ಷ ಕಿರಣ ಬೆಲ್ಲಂಘಿ, ಹರವಿ ನಾಗನಗೌಡ ಇತರರಿದ್ದರು.
ಒಲಂಪಿಕ್ ವಿಲೇಜ್ಗಾಗಿ 25 ಎಕರೆ ಭೂಮಿಗೆ ಬೇಡಿಕೆ

