ಸುದ್ದಿಮೂಲ ವಾರ್ತೆ ಕೊಪ್ಪಳ, ಜ.10:
ಕೊಪ್ಪಳ ತಾಲೂಕಿನ ಬಸಾಪುರ ಬಳಿ ತುಂಗಭದ್ರಾಾ ಎಡದಂಡೆ ಕಾಲುವೆಯಲ್ಲಿ ಬೃಹತ್ ಬೋಂಗಾ ಬಿದ್ದು ಅಪಾರ ಪ್ರಮಾಣದ ನೀರು ಪೋಲಾಗುತ್ತಿಿದೆ.ಕಾಲುವೆಗಳನ್ನು ದುರಸ್ತಿಿ ಮಾಡದ ಹಿನ್ನಲೆಯಲ್ಲಿ 3,000 ಸಾವಿರ ಕ್ಯುಸೆಕ್ ನೀರು ನಾಲೆಯಿಂದ ಹರಿಸುತ್ತಿಿದ್ದಾಾರೆ. ಇಲ್ಲಿ ಕಳೆದೆರಡು ವಾರಗಳಿಂದ ಬೋಂಗಾ ಬಿದ್ದಿದ್ದರು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾಾರೆ ಎಂಬ ಆರೋಪ ಕೇಳಿ ಬಂದಿದೆ.
ತುಂಗಭದ್ರಾಾ ಜಲಾಶಯದಿಂದ ಈ ಬಾರಿ ಬೇಸಿಗೆ ಕಾಲಕ್ಕೆೆ ನೀರು ನೀಡುವುದಿಲ್ಲ ಎಂದು ತುಂಗಭದ್ರಾಾ ಮಂಡಳಿ ಸ್ಪಷ್ಠಪಡಿಸಿದೆ. ಆದರೆ ವಿಜಯನಗರ ಕಾಲದ ಕಾಲುವೆಗೆ ವರ್ಷದ 11 ತಿಂಗಳು ನೀರು ನೀಡಬೇಕು. ಈಗ ಜಲಾಶಯ ಕ್ರೆೆಸ್ಟ್ ಗೇಟ್ ಬದಲಾವಣೆ ಮಾಡುತ್ತಿಿರುವದರಿಂದ ಜಲಾಶಯದ ನೀರು ಖಾಲಿ ಮಾಡಲಾಗುತ್ತಿಿದೆ.ಇರುವ ನೀರನ್ನು ಬಳಕೆ ಮಾಡುವ ಉದ್ದೇಶ ರೈತರಲ್ಲಿದೆ. ಈಗ ಭತ್ತನಾಟಿ ಮಾಡುತ್ತಿಿರುವ ಎಡದಂಡೆ ಕಾಲುವೆ ರೈತರಿಗೆ ಸಂಕಷ್ಟ ಏದುರಾಗಿದೆ. ಭತ್ತನಾಟಿ ಮಾಡಿರುವ ಭೂಮಿ ಕಾಲುವೆಯಲ್ಲಿ ಬೋಂಗಾ ಬಿದ್ದು ನೀರು ನುಗ್ಗಿಿ ಬೆಳೆ ನಾಶವಾಗುತ್ತಿಿದೆ. ಇದೇ ನಿರ್ಲಕ್ಷ್ಯ ಮುಂದುವರಿದರೆ ಕಾಲುವೆ ಸಹ ಒಡೆಯುವ ಸಾಧ್ಯತೆ ಎನ್ನುತ್ತಾಾರೆ ಸ್ಥಳೀಯರು.
ಈ ಬಾರಿ ಕ್ರೆೆಸ್ಟ್ ಗೇಟ್ ಬದಲಾವಣೆ ಹಿನ್ನೆೆಲೆಯಲ್ಲಿ ಬೇಸಿಗೆ ಬೆಳೆಗೆ ನೀರು ಇಲ್ಲ. ಈ ಸಮಯದಲ್ಲಿ ಹಳೆಯದಾಗಿರುವ ತುಂಗಭದ್ರಾಾ ಕಾಲುವೆಗಳ ದುರಸ್ತಿಿ ಮಾಡಬೇಕೆನ್ನುವ ಒತ್ತಾಾಯ ಕೇಳಿ ಬಂದಿದೆ. ಈ ನಿಟ್ಟಿಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾಾರಾ ಕಾದು ನೋಡಬೇಕು.
ಕಾಲುವೆಯಲ್ಲಿ ಬೋಂಗಾ ; ಅಧಿಕಾರಿಗಳ ನಿರ್ಲಕ್ಷ ್ಯ

