ಸುದ್ದಿಮೂಲ ವಾರ್ತೆ ಔರಾದ್, ಜ.10:
ಪಟ್ಟಣದ ಬಸ್ ನಿಲ್ದಾಾಣದ ಎದುರಿಗೆ ಸುಮಾರು 9 ಭಾಂಡೆ ಅಂಗಡಿಗಳು, ಚಪ್ಪಲಿ ಅಂಗಡಿ, ಸೇರಿದಂತೆ ಒಂದು ಕಿರಾಣಾ ಅಂಗಡಿ ಬೆಂಕಿಗೆ ಆಹುತಿಯಾದ ಘಟನೆ ನಸುಕಿನ ಜಾವ ಸಂಭವಿಸಿದೆ.
ನಸುಕಿನ ಜಾವ 2 ಗಂಟೆಗೆ ಹೊತ್ತುಕೊಂಡ ಬೆಂಕಿ ಸುಮಾರು 11 ಅಂಗಡಿಗಳ ಸುಟ್ಟು ಭಸ್ಮ ಮಾಡಿದೆ, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ, ಅಗ್ನಿಿಶಾಮಕ ದಳದ ಸಿಬ್ಬಂದಿಗಳು ಬಂದು ಬೆಂಕಿ ನಂದಿಸಿದ್ದಾರೆ.
ಘಟನಾ ಸ್ಥಳಕ್ಕೆೆ ತಹಶೀಲ್ದಾಾರ್ ಮಹೇಶ ಪಾಟೀಲ, ಸಿಪಿಐ ರಘವೀರಸಿಂಗ ಠಾಕೂರ್, ಅಗ್ನಿಿಶಾಮಕ ದಳದ ಅಧಿಕಾರಿಗಳು ಬಂದು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಅಗ್ನಿಿಶಾಮಕ ದಳದ ವೈಲ್ಯದ ಆರೋಪ : ಒಂದು ಅಂಗಡಿಗೆ ಹೊತ್ತುಕೊಂಡ ಬೆಂಕಿ ಸುಮಾರು 11 ಅಂಗಡಿಗಳಿಗೆ ನುಗ್ಗಿಿ ಅಪಾರ ಪ್ರಮಾಣದ ನಷ್ಟವಾಗಿದೆ, ಅಗ್ನಿಿಶಾಮಕ ವಾಹನ ಒಂದೇ ಇರುವ ಕಾರಣ ಬೆಂಕಿ ನಂದಿಸಲು ತಡವಾಗಿದೆ. ಇಷ್ಟೊೊಂದು ಅವಘಡ ಸಂಭವಿಸಲು ನೇರ ಕಾರಣ ಅಗ್ನಿಿಶಾಮಕ ದಳದ ವೈಲ್ಯ ಎಂದು ಅಂಗಡಿ ಮಾಲೀಕರು ಆರೋಪಿಸಿದ್ದಾರೆ.
ಮೂಲಗಳ ಪ್ರಕಾರ ಎರಡು ವಾಹನಗಳಿದ್ದು, ಒಂದು ವಾಹನ ಮಾತ್ರ ಚಾಲ್ತಿಿಯಲ್ಲಿದೆ. ಕೆಕೆಆರ್ಡಿಬಿಯಲ್ಲಿ ಸಾಕಷ್ಟು ಅನುದಾನ ಲಭ್ಯವಿದೆ. ಅನಗತ್ಯ ಕೆಲಸಗಳಿಗಾಗಿ ಕೋಟ್ಯಂತರ ರೂ. ಖರ್ಚು ಮಾಡಲಾಗುತ್ತಿಿದೆ. ದೊಡ್ಡ ತಾಲೂಕು ಕೇಂದ್ರದಲ್ಲಿ ಕೇವಲ ಒಂದೆರಡು ಅಗ್ನಿಿಶಾಮಕ ವಾಹನಗಳು ಕೊಟ್ಟರೆ ಸರಿದೂಗಿಸುವುದು ಹೇಗೆ? ಎಂಬುದು ಸಾರ್ವಜನಿಕರ ಪ್ರಶ್ನೆೆಯಾಗಿದೆ.
ಬೆಂಕಿ ಅವಘಡ : ಭಸ್ಮವಾದ ಅಂಗಡಿಗಳು, ಲಕ್ಷಾಾಂತರ ರೂ. ಹಾನಿ

