ಸುದ್ದಿಮೂಲ ವಾರ್ತೆ ಮಾನ್ವಿ, ಜ.11
ಅಭಿವೃದ್ಧಿಿಗೆ ಪೂರಕ ಪತ್ರಿಿಕೆಗಳು ಹೊರಬರಲಿ ಎಂದು ಮಾಜಿ ಸಚಿವ ಕೆ.ಶಿವನಗೌಡ ನಾಯಕ ಹೇಳಿದರು.
ರವಿವಾರ ಮಾನ್ವಿಿ ಪಟ್ಟಣದ ಪತ್ರಿಿಕಾ ಭವನದಲ್ಲಿ ಆನಂದಸ್ವಾಾಮಿ ಸಂಪಾದಕತ್ವದ ಜಟಾಯು ಕಣ್ಣು ಕನ್ನಡ ದಿನಪತ್ರಿಿಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿಿದ್ದರು.
ಸ್ವಾಾತಂತ್ರ್ಯ ಸಮಯದಲ್ಲಿ ಪತ್ರಿಿಕೆಗಳು ಮಹಾತ್ಮ ಗಾಂಧಿಯವರ ಜೊತೆ ನಿಂತು ಅವರ ಸಂದೇಶಗಳನ್ನು ಜನರಿಗೆ ತಿಳಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದನ್ನು ಕಾಣುತ್ತೇವೆ. ಅಭಿವೃದ್ದಿಗೆ ಪೂರಕ ಮತ್ತು ಸ್ವಾಾಸ್ಥ್ಯ ಸಮಾಜ ನಿರ್ಮಾಣ ಮಾಡುವ ಮಾಧ್ಯಮಗಳು ಹೆಚ್ಚುಹೆಚ್ಚಾಾಗಿ ಮೂಡಿ ಬರಬೇಕಾಗಿದೆ. ಸಾಮಾಜಿಕ ಸಂದೇಶ, ಜಾಗೃತಿಯನ್ನು ಮೂಡಿಸುವ ವಿಚಾರಗಳು ಮಾಧ್ಯಮಗಳಲ್ಲಿ ಪ್ರಸಾರವಾಗಬೇಕೆಂದು ಹೇಳಿದರು.
ಪತ್ರಿಿಕೆಯ ಜೊತೆಗೆ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ವಿವಿಧ ಸಹಾಯವಾಣಿಗಳನ್ನು ಪ್ರಾಾರಂಭ ಮಾಡಲಾಗಿದ್ದು ಜನರ ಕಷ್ಟಗಳನ್ನು ಸ್ಪಂದಿಸುವ ಕಾರ್ಯಮಾಡಿ ಜನರ ವಿಶ್ವಾಾಸವನ್ನು ಗಳಿಸಬೇಕು. ಕನ್ನಡ ಪರ ಸಂಘಟನೆಗಳು ಒಂದಾಗಿ ಕಾರ್ಯನಿರ್ವಹಿಸಿದಾಗ ನಾಡು, ನುಡಿ, ಭಾಷೆಯ ಉಳಿವಿಗೆ ಶ್ರಮಿಸಲು ಸಾಧ್ಯ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಾಮಿಗಳು ಮಾತನಾಡಿ ಇಂದಿನ ದಿನ ಮಾಧ್ಯಮಗಳ ದೃಷ್ಟಿಿಕೋನ ಬದಲಾಗಿರುವುದನ್ನು ಕಾಣಬಹುದಾಗಿದೆ. ಸತ್ಯ, ಅಸತ್ಯಗಳನ್ನು ಪರಿಶೀಲಿಸಿ ಸಮಾಜವನ್ನು ಸರಿದಾರಿಗೆ ತರುವ ಕಾರ್ಯವನ್ನು ಇಂದು ಮಾಧ್ಯಮಗಳು ಮಾಡಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಬಾಲಸ್ವಾಾಮಿ ಕೊಡ್ಲಿಿ, ಎಸ್.ತಿಮ್ಮಾಾರೆಡ್ಡಿಿ ಭೋಗಾವತಿ, ಖಾಲಿದ್ ಖಾದ್ರಿಿ, ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನ ಕಾರ್ಯದರ್ಶಿ ಡಿ.ವಿ.ಸುಬ್ರಹ್ಮಣ್ಯ, ಜಿಲ್ಲಾ ಕಾರ್ಯಧ್ಯಕ್ಷ ಹಾಗೂ ಸಂಪಾದಕ ಆನಂದ ಸ್ವಾಾಮಿ ಹಿರೇಮಠ, ತಾಲೂಕಾ ಅಧ್ಯಕ್ಷ ಭೀಮಣ್ಣ ಮುದಗಲ್, ಹರಿಹರ ಪಾಟೀಲ್, ಮಲ್ಲಿಕಾರ್ಜುನ ಜಕ್ಕಲದಿನ್ನಿಿ, ಜಂಬಣ್ಣ ನೀಲೊಗಲ್, ರಾಜಾ ಸುಭಾಶ್ಚಂದ್ರ ನಾಯಕ, ಪತ್ರಕರ್ತರ ಸಂಘದ ಅಧ್ಯಕ್ಷ ಆಶೋಕ ತಡಕಲ್, ಕಾರ್ಯದರ್ಶಿ ರವಿಕುಮಾರ ಆಲ್ದಾಾಳ್ ಸೇರಿದಂತೆ ಇನ್ನಿಿತರರು ಇದ್ದರು.
ಜಟಾಯು ಕಣ್ಣು ದಿನಪತ್ರಿಕೆಯ ಲೋಕಾರ್ಪಣೆ ಅಭಿವೃದ್ಧಿಗೆ ಪೂರಕ ಪತ್ರಿಕೆಗಳು ಹೊರಬರಲಿ-ಕೆ.ಶಿವನಗೌಡ ನಾಯಕ

