ಸುದ್ದಿಮೂಲ ವಾರ್ತೆ ಮಸ್ಕಿ, ಜ.11:
ಪಟ್ಟಣದ ಶ್ರೀ ಭ್ರಮರಾಂಬ ದೇವಸ್ಥಾಾನದಲ್ಲಿ ಶನಿವಾರ ಶಕೀಲ್ ಅಹ್ಮದ್ ನಿರ್ದೇಶನದ ನಿರ್ದಿಗಂತ ತಂಡ ಮೈಸೂರ ಪ್ರಸ್ತುತಪಡಿಸಿರುವ ಕೊಡಲ್ಲ ಅಂದ್ರೆೆ ಕೊಡಲ್ಲ’ ನಾಟಕ ಪ್ರದರ್ಶನದೊಂದಿಗೆ ಶನಿವಾರ, ತೆರೆಬಿತ್ತು.ಉಚಿತವಾಗಿ ಪ್ರದರ್ಶಿಸಿದ ಕೊಡಲ್ಲ ಅಂದ್ರೆೆ ಕೊಡಲ್ಲ’ ನಾಟಕ ತೆರಿಗೆಯಿಂದ ಜನಸಾಮಾನ್ಯರು ಅನುಭವಿಸುತ್ತಿಿರುವ ಸಂಕಷ್ಟವನ್ನು ವಿಡಂಬನಾತ್ಕಕ ನಾಟಕ ಬಿಂಬಿಸಿತು.
ಮಸ್ಕಿಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ , ಸರ್ಕಾರಿ ನೌಕರರ ಸಂಘ, ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತು,ಸಾವಿತ್ರಿಿಬಾಯಿ ುಲೆ ಶಿಕ್ಷಕಿಯರ ಸಂಘ, ಲಯನ್ಸ ಕ್ಲಬ್, ಇತ್ಲಿಿ ೌಂಡೇಶನ್ ಸಹಯೋಗದಲ್ಲಿ ಜರುಗಿದ ನಾಟಕದಲ್ಲಿ ರಂಗ ಕಲಾವಿದರಾದ ಹುಬ್ಬಳ್ಳಿಿ ಮಂಜುನಾಥ ಮಡಲಗಿರಿ, ಧಾರವಾಡ ಸಲ್ಮಾಾ ದಂಡಿನ್, ಮಂಗಳೂರು ಚರಿತ್ ಸುವರ್ಣ, ಶಿವಮೊಗ್ಗ ದಿನೇಶ್ ನಾಯ್ಕ, ಚರಿತ್ ಶಾರದಾ ಉಡುಪಿ ಅವರ ವಿವಿಧ ಪಾತ್ರಗಳಿಗೆ ಜೀವ ತುಂಬಿದರು. ತೆರೆಯ ಹಿಂದೆ ಕಲ್ಲಪ್ಪ ಪೂಜಾರ್, ಅವರು ಪ್ರಸ್ತುತಪಡಿಸಿದ್ದರು. ಮಾಡಿದ್ದ ಕಳ್ಳತನದಿಂದ ತಪ್ಪಿಿಸಿಕೊಳ್ಳಲು ಮಹಿಳೆಯರು ಗರ್ಭಿಣಿಯರಂತೆ ನಟಿಸಿದ್ದು, ಅನ್ಯಾಾಯ ಖಂಡಿಸುವ ಹೋರಾಟಗಾರ ಕೊನೆಗೆ ತಾನು ಕದಿಯುವ ವಿಡಂಬನಾತ್ಮಕ, ಇಬ್ಬರು ಪುರುಷರು ಜಗಳ ನಿಲ್ಲಿಸಿ, ತಮ್ಮ ಹೆಂಡತಿಯರಿಗೆ ಧೈರ್ಯ ತುಂಬಿದ ಹಾಸ್ಯದ ಪರಿ ಪ್ರೇೇಕ್ಷಕರನ್ನು ಅಲುಗಾಡಿಸಲಿಲ್ಲ. ಹಾಗಾಗ ಪ್ರೇೇಕ್ಷಕರ ಜೊತೆ ಸಂವಾದ ನಡೆಸಿದ ಕಲಾವಿದರು ಮೆಚ್ಚುಗೆಗೆ ಪಾತ್ರರಾದರು.ಜಾನಪದ, ರಂಗಗೀತೆ, ಹಿಂದೂಸ್ಥಾಾನಿ ಸಂಗೀತ, ನಾಟಕಗಳ ಹೂರಣದ ಸವಿಯನ್ನು ಎಲ್ಲರು ಸವಿದರು.
ಜನಕವಿ, ದಲಿತ ಸಾಹಿತಿ ಸಿ ದಾನಪ್ಪ ನಿಲೋಗಲ್ ಮಾತನಾಡಿ ರಂಗಭೂಮಿ ಸದಭಿರುಚಿ, ಸಾಮರಸ್ಯ ಮತ್ತು ಮಾನವೀಯ ಮೌಲ್ಯ ಬೆಳೆಸುವ ಸಂಜೀವಿನಿ. ಜನರ ಬದುಕನ್ನು ಹಸನು ಮಾಡುವ ಅದು, ಸಮಾಜದಲ್ಲಿ ಪ್ರೀೀತಿ ಮತ್ತು ಸಾಮರಸ್ಯವನ್ನು ನೆಲೆಗೊಳಿಸುತ್ತದೆ ಎಂದರು. ಪ್ರಸಕ್ತ ಕಾಲಘಟ್ಟವು ವಿಷಮಯವಾಗಿದ್ದು, ಜಾತಿ, ಧರ್ಮದ ಅಸಹನೆ ಹೆಚ್ಚಾಾಗಿದೆ. ಜನರಲ್ಲಿ ಪ್ರೀೀತಿ ಮತ್ತು ವಿಶ್ವಾಾಸವನ್ನು ಮರುನಿರ್ಮಿಸಲು ರಂಗಭೂಮಿ ಅತ್ಯುತ್ತಮ ಮಾರ್ಗವಾಗಿದೆ. ಮಾನವೀಯತೆ ಎಲ್ಲೆಡೆ ನೆಲೆಗೊಳಿಸಬೇಕಿದೆ. ಇಲ್ಲದಿದ್ದರೆ ಮುಂದಿನ ಪೀಳಿಗೆಯ ನೆಮ್ಮದಿ ಹಾಳಾಗಲಿದೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಡಾ. ಶಿವಶರಣಪ್ಪ ಇತ್ಲಿಿ ಮಾತನಾಡಿ, ನಿರಂತರವು ಸಹಜರಂಗ ತರಬೇತಿ ಶಿಬಿರ, ಕಾವ್ಯ ಓದು, ಸಾಹಿತ್ಯ ಹಾಗೂ ನಾಟಕಗಳ ನೋಡುವುದರ ಮೂಲಕ ಸಾರ್ವಜನಿಕರನ್ನು ಸರಿಯಾದ ದಿಕ್ಕಿಿನತ್ತ ಕರೆದೊಯ್ಯುತ್ತಿಿದೆ ಎಂದರು.
ಈ ವೇಳೆ ಡಾ. ಶಿವ ಶರಣಪ್ಪ ಇತ್ಲಿಿ, ಸಿ ದಾನಪ್ಪ ನಿಲೋಗಲ್, ವಿದ್ಯಾಾವತಿ
ವನಕಿ, ಪಂಪಾಪತಿ ಹೂಗಾರ, ಕಳಕಪ್ಪ ಆದಿಮನಿ, ಈರಮ್ಮ ಹಾಗೂ ಇತರರು ಉಪಸ್ಥಿಿತರಿದ್ದರು.
ಕೊಡಲ್ಲ ಅಂದ್ರ ಕೊಡಲ್ಲ ನಾಟಕ ಪ್ರದರ್ಶನ

