ಸುದ್ದಿಮೂಲ ವಾರ್ತೆ ಸಿಂಧನೂರು, ಜ.11:
ಪ್ರಜಾಪ್ರಭುತ್ವ ವ್ಯವಸ್ಥೆೆಯಲ್ಲಿ ಮತದಾರ ನಾಯಕನ್ನು ಆಯ್ಕೆೆ ಮಾಡಿಕೊಳ್ಳಬೇಕು. ಆದರೆ ಇಂದು ನಾಯಕನೇ ಇಂಥ ಮತದಾರರು ಬೇಕು ಎಂದು ಆಯ್ಕೆೆ ಮಾಡಿಕೊಳ್ಳುವ ವ್ಯವಸ್ಥೆೆ ಜಾರಿಯಾಗುತ್ತಿಿದೆ. ಮತದಾರರ ಪರಿಷ್ಕರಣೆ ನೆಪದಲ್ಲಿ ಮತದಾನದ ಹಕ್ಕು ಕಿತ್ತಿಿಕೊಳ್ಳಲಾಗುತ್ತಿಿದೆ ಎಂದು ಚಿಂತಕ, ಮಕ್ಕಳತಜ್ಞ ಡಾ.ಕೆ.ಶಿವರಾಜ ಆರೋಪಿಸಿದರು.
ನಗರದ ಟೌನ್ಹಾಲ್ನಲ್ಲಿ ಭಾನುವಾರ ಮತದಾರರ ವಿಶೇಷ ಪರಿಷ್ಕರಣೆ ಜಾಗೃತಿ ಸಮಿತಿಯಿಂದ ಆಯೋಜಿಸಿದ್ದ ಮತದಾರರ ವಿಶೇಷ ಪರಿಷ್ಕರಣೆ ಸಾಧಕ-ಬಾಧಕ ಕುರಿತು ಸಂವಾದ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ಈ ಮತದಾರರ ವಿಶೇಷ ಪರಿಷ್ಕರಣೆಯಿಂದ ನಿಜವಾದ ಮತದಾರ ಕೈಬಿಟ್ಟು ಹೋದರೆ ಜಿಡ್ಡುಗಟ್ಟಿಿದ ವ್ಯವಸ್ಥೆೆ ಬಲಗೊಳ್ಳಲಿದೆ. ಜನ ಸಾಮಾನ್ಯರಿಗೆ ಮೂಲಭೂತ ಹಕ್ಕು ಪಡೆಯುವ ಹಕ್ಕನ್ನು ಕಸಿದರೆ, ವ್ಯವಸ್ಥೆೆಯು ಬದಲಾಗಿ ಗಂಭೀರ ಸಮಸ್ಯೆೆ ಎದುರಿಸಬೇಕಾಗುತ್ತದೆ. ಮತದಾರನಾಗಲು ಭಾರತ ಪ್ರಜೆಯಾಗಿರಬೇಕೆಂದಿರುವುದು ಸರಿ. ಆದರೆ, ಮತದಾರರನ್ನು ತಿರಸ್ಕಾಾರ ಮಾಡುವ ಹಕ್ಕು ಯಾರಿಗೆ ಇಲ್ಲ. ಬಾಂಗ್ಲಾಾ ವಿಮೋಚನೆ ಸಂದರ್ಭದಲ್ಲಿ ತಾಲೂಕಿಗೆ ಬಂದು ಕೆಲವರಿಗೆ ಮಾತ್ರ ಮತದಾನದ ಹಕ್ಕು ಇತ್ತು. ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿ ನಿಮಗೆ ಮತದಾನದ ಹಕ್ಕು ಕೊಡಿಸುವೆ, ನಮ್ಮ ಪರವಾಗಿ ಬೆಂಬಲಿಸಬೇಕು ಎಂಬ ಷರತ್ತು ಎಷ್ಟು ಸರಿ? ಎಂದರು.
ಚಿಂತಕ ಶಿವಸುಂದರ್ ಮಾತನಾಡಿ, ಈ ಮತದಾರರ ವಿಶೇಷ ಪರಿಷ್ಕರಣೆಯಿಂದ ಮತದಾನದ ಹಕ್ಕಿಿಗೆ ಗಂಡಂತಾರ ಎದುರಾಗಿದೆ. ಮೂಲಭೂತ ಹಕ್ಕು ಕಸಿಯುವ ಸಂಚು ನಡೆದಿದೆ. ಈ ಪರಿಷ್ಕರಣೆಯಲ್ಲಿ ಖೊಟ್ಟಿಿ ಮತದಾರರ ಕಿತ್ತು ಹಾಕಿ, 18 ವರ್ಷ ತುಂಬಿದ ಯುವಕರಿಗೆ ಮತದಾನದ ಹಕ್ಕು ನೀಡುವುದಾಗಬೇಕಿತ್ತು. ನುಸುಳುಕೋರರಿಗೆ ಮತದಾನದ ಹಕ್ಕು ನೀಡಬಾರದು ಎಂದು ಹೇಳಿ, ತಮ್ಮ ಚುನಾವಣೆಗೆ ಅವಕಾಶವಾಗುವಂತೆ ಮತದಾರರ ಯಾದಿ ಸಿದ್ಧಪಡಿಸುವ ವ್ಯವಸ್ಥೆೆ ನಡೆದಿದೆ. ವೋಟಿನ ಹಕ್ಕು ಕೊಡುವುದು ಕರ್ತವ್ಯ. ಆದರೆ, ಪರಿಷ್ಕರಣೆ ಹೆಸರಿನಲ್ಲಿ ಕಿತ್ತಿಿಕೊಳ್ಳುವದನ್ನು ಮಾಡಲಾಗುತ್ತಿಿದೆ ಎಂದರು.
ಪ್ರಾಾಸ್ತಾಾವಿಕವಾಗಿ ಸಂಚಾಲಕ ಹುಸೇನಸಾಬ ಮಾತನಾಡಿ, ಮತದಾರರ ಪರಿಷ್ಕರಣೆಯಿಂದ ಕೆಲ ಮತದಾರರನ್ನು ಕೈಬಿಡುವ ಹುನ್ನಾಾರ ಅಡಗಿದೆ. ನಾವು ಜಾಗೃತವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಿತಿ ಸಂಚಾಲಕ ಡಿ.ಎಚ್. ಕಂಬಳಿ ಮಾತನಾಡಿದರು. ಕಸಾಪ ಮಾಜಿ ತಾಲೂಕು ಅಧ್ಯಕ್ಷೆ ಸರಸ್ವತಿ ಪಾಟೀಲ್ ಸಂವಿಧಾನ ಪೀಠಿಕೆ ಓದಿದರು. ರೈತ ಸಂಘದ ರಾಜ್ಯಾಾಧ್ಯಕ್ಷ ಡಿ.ಎಚ್.ಪೂಜಾರ, ಸಮಿತಿ ಸಂಚಾಲಕ ಚಂದ್ರಶೇಖರ ಗೊರೇಬಾಳ ಇದ್ದರು. ಎಂ.ಗಂಗಾಧರ ಸಂಗಡಿಗರು ಪ್ರಾಾರ್ಥಿಸಿದರು. ಮೌನೇಶ ಜಾಲವಾಡಗಿ ಸ್ವಾಾಗತಿಸಿದರು. ಶಂಕರ ಗುರಿಕಾರ ನಿರೂಪಿಸಿದರು.
ಮತದಾರರ ವಿಶೇಷ ಪರಿಷ್ಕರಣೆ ಸಾಧಕ – ಬಾಧಕ ಕುರಿತು ಸಂವಾದ ಕಾರ್ಯಕ್ರಮ ಮತದಾರರ ಪರಿಷ್ಕರಣೆ ನೆಪದಲ್ಲಿ ಮತದಾನದ ಹಕ್ಕು ಕಿತ್ತಿಕೊಳ್ಳಬಾರದು – ಡಾ.ಕೆ.ಶಿವರಾಜ

