ಸುದ್ದಿಮೂಲ ವಾರ್ತೆ ಸಿಂಧನೂರು, ಜ.11:
ತಾಲೂಕಿನ ಬಂಗಾಲಿಕ್ಯಾಾಂಪ್, ಗಾಂಧಿನಗರ, ಸಿಂಧನೂರು ನಗರ ಸೇರಿದಂತೆ ತಾಲೂಕಿನಾದ್ಯಂತ ನಡೆಯುವ ಗಾಂಜಾ, ಇಸ್ಪೀಟ್, ಓಸಿ ಸೇರಿ ಅಕ್ರಮ ಚಟುವಟಿಕೆಗಳ ರೂವಾರಿ ಬಾಬುಗೌಡ ಬಾದರ್ಲಿ. ಇಂಥವನಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಆರ್ಡಿಸಿಸಿ ಬ್ಯಾಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಏಕ ವಚನಗಳಲ್ಲೇ ತಿರುಗೇಟು ನೀಡಿದರು.
ನಗರದ ಪತ್ರಿಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಟಿಿ ನಡೆಸಿ ಅವರು ಮಾತನಾಡಿದರು. ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ ತಾಲೂಕಿನ ಜನತೆಯ ಬೆಳೆಸಿದಿದ್ದಾಾರೆ. ರಾಜಕೀಯ ವೈಯಕ್ತಿಿಕವಾಗಿರಬಾರದು. ವೈಯಕ್ತಿಿಕವಾಗಿ ನಮ್ಮ ಕುಟುಂಬದ ಬಗ್ಗೆೆ ತೇಜೋವಧೆ ಮಾಡಿದರೆ ಸಹಿಸಲ್ಲ. ಏಕ ವಚನದಲ್ಲಿ ಬಳಸುವ ಸಮಯ, ಸನ್ನಿಿವೇಶ, ಅನಿವಾರ್ಯತೆ ಆತನೇ ಸೃಷ್ಠಿಿಸಿದ್ದಾಾನೆ. ನಿಜವಾಗಿಯೂ ನಿನಗೆ ಧಮ್ಮು, ತಾಕತ್ತು ಇದ್ದರೆ ನೀನೇ ಸ್ಥಳ, ಸಮಯ ನಿಗದಿ ಮಾಡು.. ಇಲ್ಲ ನಾನು ಮಾಡ್ತೀನಿ. ಬಹಿರಂಗ ಚರ್ಚೆಗೆ ಬಾ ಎಂದು ಸವಾಲೆಸೆದರು.
ಕ್ಷೇತ್ರದ ಕಾರ್ಯಕರ್ತರ, ಪಕ್ಷದ ನಾಯಕರಿಂದ ಬಸನಗೌಡ ಎಂಎಲ್ಸಿ ಆಗಿದ್ದಾಾರೆ. ಯೂಥ್ ಕಾಂಗ್ರೆೆಸ್ ರಾಜ್ಯಾಾಧ್ಯಕ್ಷ ಸ್ಥಾಾನಕ್ಕೆೆ ಬಸನಗೌಡ ಸ್ಪರ್ಧಿಸಿದಾಗ ಹಂಪನಗೌಡರು ಹಾಗೂ ಅವರ ಕುಟುಂಬದವರು ಏನು ಮಾಡಿದ್ದಾಾರೆ ಎನ್ನುವದು ಜನತೆಗೆ ಗೊತ್ತಿಿದೆ. ಬಾದರ್ಲಿ ಕಾಂಪೌಂಡ್ ನಮ್ಮ ಮುತ್ತಜ್ಜನ ಆಸ್ತಿಿ. ಈಗಲೂ ಅವರ ಗದ್ದುಗೆ ಅಲ್ಲಿಯೇ ಇದೆ. ನವಾಬರ ಕಾಲದಿಂದಲೂ ಆ ಕಾಗದ ಪತ್ರಗಳು ಇವೆ. ಯಾರ ಉಪ್ಪುು ಯಾರು ತಿನ್ನುತ್ತಿಿದ್ದಾಾರೆ. ಬಾಬು ಮಾತುಗಳು ಅವರ ಸಂಸ್ಕೃತಿ ತೋರಿಸುತ್ತೆೆ. ನಾಗನಗೌಡ ತಾತ ನಮಗೆ ಸಂಸ್ಕೃತಿ, ಸಂಸ್ಕಾಾರ ಕಲಿಸಿದ್ದಾಾರೆ. ನಮ್ಮಲ್ಲಿ ಧರ್ಮವಿದೆ. ದ್ರೋಹವಿಲ್ಲ. ಸಣ್ಣ ವೆಂಕಟರಾವ ಅವರು ನನಗೂ ತಾತನೇ. ಹಿಂದೆ ಬಾದರ್ಲಿಯಲ್ಲಿ ಜಿನ್ನ ಹಾಕಿದಾಗ ನಮ್ಮ ತಂದೆ ಒಂದು ಎಕರೆ ಹೊಲ ಬಿಟ್ಟುಕೊಟ್ಟಿಿದ್ದಾಾರೆ. ಸಿಂಧನೂರಿನ ಆಸ್ತಿಿ ನಮ್ಮ ಮುತ್ತಜ್ಜನಿಗೆ ಸೇರಿದ್ದು ಎಂದು ಕುಟುಕಿದರು.
ಶಾಸಕ ಹಂಪನಗೌಡ ಬಾದರ್ಲಿ ಅವರ ಬಗ್ಗೆೆ ನಾವೆಲ್ಲೂ ಹಗುರವಾಗಿ ಮಾತನಾಡಿಲ್ಲ. ನಾವೆಂದೂ ನಾಲಿಗೆ ಹರಿಬಿಟ್ಟು ಮಾತನಾಡಿಲ್ಲ. ಈ ಸಂದರ್ಭ ಅವರೇ ಸೃಷ್ಠಿಿಸಿದ್ದಾಾರೆ. ಹಿಂದೆ ಬಸನಗೌಡ ಬಾದರ್ಲಿ ಅನ್ನದಾನೇಶ್ವರ ಆಸ್ಪತ್ರೆೆಯಲ್ಲಿ ಕೆಲಸ ಮಾಡಿಲ್ಲ. 35 ಲಕ್ಷ ರೂ. ಹೇಗೆ ಲಪಟಾಯಿಸಲು ಸಾಧ್ಯ. ಬ್ಲಡ್ಬ್ಯಾಾಂಕ್ಗೆ ನೀಡಿದ ಬಾಬುಗೌಡರ ಜಾಗ ಅಕ್ರಮ ಚಟುವಟಿಕೆಗಳ ತಾಣವಾಗಿತ್ತು. ನಾವು 50 ಲಕ್ಷ ಖರ್ಚು ಮಾಡಿ ನವೀಕರಣ ಮಾಡಿದ್ದೇವೆ. ಆತ್ಮಸಾಕ್ಷಿಯಿದ್ದರೆ ಒಪ್ಪಿಿಕೊಳ್ಳಲಿ ಎಂದು ಆವಾಲೆಸದರು.
ಪಕ್ಷದಿಂದ ಅನ್ಯಾಾಯವಾಗಿಲ್ಲ:
2023 ರ ಚುನಾವಣೆಯಲ್ಲಿ ಬಸನಗೌಡರಿಗೆ ಕಾಂಗ್ರೆೆಸ್ ಟಿಕೆಟ್ ಸಿಗುವ ವಿಶ್ವಾಾಸವಿತ್ತು. ನಿರಂತರವಾಗಿ ಪಕ್ಷದ ಸಂಘಟನೆ ಮಾಡುತ್ತಲೇ ಬಂದಿದ್ದರು. ಆದರೆ ಕೆಲವರ ಷಡ್ಯಂತ್ರದಿಂದ ಟಿಕೆಟ್ ಕೈ ತಪ್ಪಿಿತೇ ಹೊರತು, ಪಕ್ಷದಿಂದ ಅನ್ಯಾಾಯವಾಗಿಲ್ಲ. ಎಐಸಿಸಿ ಕಾರ್ಯದರ್ಶಿ ಸುರ್ಜೇವಾಲ್ ಅವರೇ ನಮ್ಮ ಮನೆಗೆ ಬಂದು ನಮ್ಮ ಮನವೊಲಿಸಿದ್ದನ್ನು ಸ್ಮರಿಸಿದರು.
ಗೂಂಡಾಗಿರಿ ನಡೆಯಲ್ಲ:
ಬಾಬುಗೌಡ ಗೂಂಡಾಗಿರಿ ಮಾಡಿದರೆ ನಡೆಯಲ್ಲ. ನಮಗೂ ರಾಜ್ಯಾಾದ್ಯಂತ ಯುವ ಕಾಂಗ್ರೆೆಸ್ ಕಾರ್ಯಕರ್ತರಿದ್ದಾಾರೆ. ರೌಡಿಗಳೂ ನಮ್ಮ ಜೊತೆಯಿದ್ದಾಾರೆ. ಧಮ್ಕಿಿ ಹಾಕಿದರೆ ನಡೆಯಲ್ಲ. ಬಹಿರಂಗ ಚರ್ಚೆಗೆ ಸಮಯ ಹಾಗೂ ಸ್ಥಳ ನಾನು ನಿಗದಿ ಮಾಡಬೇಕಾ ನೀನು ನಿಗದಿ ಮಾಡ್ತೀಯಾ? ದಾಖಲೆಗಳೊಂದಿಗೆ ಬರುತ್ತೇನೆ ಎಂದು ಪಂಥಾಹ್ವಾಾನ ಮಾಡಿದ ಅವರು, ಆತನಲ್ಲಿ ಶಿಷ್ಟಾಾಚಾರವೇ ಇಲ್ಲ. ಶಿಷ್ಟಾಾಚಾರದ ಬಗ್ಗೆೆ ಮಾತನಾಡುತ್ತಾಾನೆ. ಬಸ್ಗಳನ್ನು ನೀಡಿದ್ದು ಸರಕಾರ. ತಿಮ್ಮಾಾಪುರ ಅವರಪ್ಪನ ಹೊಲ ಮಾರಿ ತಂದಿದ್ದಲ್ಲ. ಸಂವಾದ ಕಾರ್ಯಕ್ರಮದಲ್ಲಿ 5-10 ನಿಮಿಷ ಮಾತನಾಡಲು ಬಸನಗೌಡರಿಗೆ ನೀಡಿದ್ದರೆ ಪ್ರಪಂಚ ಪ್ರಳಯವಾಗುತ್ತಿಿರಲಿಲ್ಲ. ಇಂಥ ಘಟನೆಗಳು ಅನೇಕ ಸಂಭವಿಸಿವೆ ಎಂದರು.
ಸವಾಲು ಸ್ವೀಕರಿಸುವೆ:
ಜಿ.ಪಂ.ಚುನಾವಣೆಯಲ್ಲಿ ಬೇರೆ ಕ್ಷೇತ್ರಗಳೇ ಬೇಡ. ಬಾದರ್ಲಿ ಕ್ಷೇತ್ರದಿಂದ ಬಾಬುಗೌಡ ಸ್ಪರ್ಧಿಸಲಿ. ನಾವು ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ. ಸೋತರೆ ನಾನು ರಾಜಕೀಯ ನಿವೃತ್ತಿಿ ಪಡೆಯುತ್ತೇನೆ. ತಾಕತ್ತಿಿದ್ದರೆ ಚುನಾವಣೆ ಎದುರಿಸಲಿ ಎಂದು ಸವಾಲೆಸೆದರು.
ಬ್ರೋೋಕರ್ ನೇಮಕ:
ಬಾಬುಗೌಡ ನಗರಾಭಿವೃದ್ದಿ ಪ್ರಾಾಧಿಕಾರದ ಅಧ್ಯಕ್ಷರಾದ ನಂತರ ಸುಡಾದಲ್ಲಿ ಬ್ರಹ್ಮಾಾಂಡ ಭ್ರಷ್ಟಾಾಚಾರ ನಡೆಯುತ್ತಿಿದೆ. ಒಂದು ಎಕರೆ ವಸತಿ ನಿವೇಶನಕ್ಕೆೆ ಅನುಮತಿ ನೀಡಲು ಎರಡು ಲಕ್ಷ ರೂ. ನಿಗದಿ ಮಾಡಿದ್ದಾಾನೆ. ಒಬ್ಬ ಬ್ರೋೋಕರ್ ನೇಮಕ ಮಾಡಿಕೊಂಡಿದ್ದಾಾರೆ. ಕುಷ್ಟಗಿ ರಸ್ತೆೆಯ ಟಿಎಪಿಸಿಎಂಎಸ್ ಜಾಗ ನುಂಗುತ್ತಿಿದ್ದಾಾರೆ. ಜ್ಯೋೋತಿ ಮಹಿಳಾ ಸಮಾಜದ ಜಾಗ ನುಂಗಿದ್ದಾಾರೆ. ಎಲ್ಲೆೆಲ್ಲಿ ಸರಕಾರಿ ಜಾಗ ನುಂಗಿದ್ದಾಾರೆ ಎಲ್ಲವನ್ನು ದಾಖಲೆಗಳೊಂದಿಗೆ ಬಯಲಿಗೆ ತರುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಕಾಮನ್ಸೆನ್ಸ್ ಇಲ್ಲ:
ಎಸ್ಸಿ ಎಸ್ಟಿಗೆ ಕೊಳವೆಬಾವಿಗಳ ಲಾನುಭವಿಗಳ ಆಯ್ಕೆೆಗೆ ಸಂಬಂಧಿಸಿದಂತೆ ಕಾಮನ್ ಸೆನ್ಸ್ ಇಲ್ಲದಂತೆ ಬಾಬು ಮಾತನಾಡಿದ್ದಾಾನೆ. ಬೇರೆ ಪಕ್ಷದವರು ನಮ್ಮ ಪಕ್ಷಕ್ಕೆೆ ಬಂದಿದ್ದಾಾರೆ. ಅವರಿಗೆ ನಾವು ಯೋಜನೆಗಳನ್ನು ಕೊಟ್ಟಿಿದ್ದೇವೆ. ಬಾದರ್ಲಿಯ 9 ಕುಟುಂಬಗಳು ಈ ಪಟ್ಟಿಿಯಲ್ಲಿವೆಯಲ್ಲ. ಅವರೇನು ಬಾದರ್ಲಿ ಕುಟುಂಬಕ್ಕೆೆ ಮೋಸ ಮಾಡಿದ್ದರು ಎಂದು ಪ್ರಶ್ನಿಿಸಿದರು.
ಬಾದರ್ಲಿ ಕುಟುಂಬ ಎಂದು ಹೇಳಿಕೊಂಡಿಲ್ಲ:
ನಾವೆಂದೂ ಬಾದರ್ಲಿ ಹಂಪನಗೌಡರ ಕುಟುಂಬ ಎಂದು ಹೇಳಿಕೊಂಡಿಲ್ಲ. ನಾವು ಬಾದರ್ಲಿ ಗ್ರಾಾಮದವರೆ. ನಮ್ಮ ಎಲ್ಲಾಾ ದಾಖಲೆಗಳು ಬಾದರ್ಲಿಯಲ್ಲಿಯೇ ಇವೆ. ನಮ್ಮೂರ ಹೆಸರು ನಾವು ಹೇಳಿಕೊಳ್ಳುವದು ತಪ್ಪಾಾ? ಬಾದರ್ಲಿ ಕುಟುಂಬ ಎಂದು ಹೇಳಿಕೊಳ್ಳುವ ಅಗತ್ಯವೂ ನಮಗಿಲ್ಲ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ, ನಿರುಪಾದಿ ಸಾಸಲಮರಿ, ಅಮರೇಶ ಗಿರಿಜಾಲಿ, ಯುನೂಸ್ ಪಾಷಾ, ಶರಣಯ್ಯ ಸ್ವಾಾಮಿ, ಖಾಜಾ ಹುಸೇನ್, ಪ್ರಕಾಶ ಸೋಮಲಾಪುರ, ಅಮರೇಶ ಗಿಣಿವಾರ ಹಾಗೂ ಇತರರು ಇದ್ದರು.
ತಾಲೂಕಿನ ಅಕ್ರಮ ಚಟುವಟಿಕೆಗಳ ರೂವಾರಿ ಬಾಬುಗೌಡನಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ – ಸೋಮನಗೌಡ

