ಸುದ್ದಿಮೂಲ ವಾರ್ತೆ ರಾಯಚೂರು, ಜ.11:
ತುಂಗಭದ್ರ ಹಂಗಾಮಿ ನೌಕರರ ಬಾಕಿ ವೇತನ ಪಾವತಿಗಾಗಿ ಗಣರಾಜ್ಯೋೋತ್ಸವದಂದು ಕಪ್ಪುು ಪಟ್ಟಿಿ ಪ್ರದರ್ಶನ ಮಾಡಿ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸುದಾಗಿ ತುಂಗಭದ್ರ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘದ ಅಧ್ಯಕ್ಷ ಆರ್.ಮಾನಸಯ್ಯ ಹೆೀಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ತುಂಗಭದ್ರ ಹಂಗಾಮಿ ನೌಕರರಿಗೆ 8 ತಿಂಗಳಿನಿಂದ ಸಂಬಳವಿಲ್ಲ. ಇಂದಿನಿಂದ ಕೆಲಸವೂ ಇಲ್ಲದಂತಾಗಿದೆ. ಉಸ್ತುವಾರಿ ಸಚಿವರಗಳ ಪತ್ರಕ್ಕೆೆ ನೀರಾವರಿ ನಿಗಮದಲ್ಲಿ ಬೆಲೆಯೇ ಇಲ್ಲದಂತಾಗಿದೆ. ಉತ್ಸವ ಸಚಿವರು ನಮಗೆ ಬೇಡ, ಉಸ್ತುವಾರಿ ಸಚಿವರುಗಳು ಬೇಕು ಎಂದು ಜಿಲ್ಲೆೆಯಲ್ಲಿ ಉತ್ಸವಗಳ ಮೇಲೆ ಉತ್ಸವಗಳು ನಡೆಯುತ್ತಿಿವೆ. ಆದರೆ ಜನರು, ರೈತರು, ಕಾರ್ಮಿಕರ ಸಮಸ್ಯೆೆಗಳು ಮಾತ್ರ ಪರಿಹಾರವಾಗದೇ ಉಳಿದಿವೆ. ತುಂಗಭದ್ರ ಯೋಜನೆಯಡಿ ಕ್ರಸ್ಟಗೇಟ್ ಅಳವಡಿಸುವುದರಿಂದ ನೀರು ಹರಿಸುವದು ಬಂದ್ ಆಗಿದೆ. ಕಾರ್ಮಿಕರಿಗೆ ಕೆಲಸವೂ ಇಲ್ಲ, ಬಾಕಿಯಿರುವ 8 ತಿಂಗಳ ವೇತನಕ್ಕೆೆ ಕೊಪ್ಪಳ ಮತ್ತು ರಾಯಚೂರು ಉಸ್ತುವಾರಿ ಸಚಿವರುಗಳು ಅಧಿಕಾರಿಗಳಿಗೆ ಪತ್ರ ಬರೆದು ಬಾಕಿ ವೇತನನೀಡುವಂತೆ ಸೂಚಿಸಿದ್ದಾಾರೆ. ಆದರೆ ನಿಗಮದ ಅಧಿಕಾರಿಗಳು ವೇತನ ಪಾವತಿಸುತ್ತಿಿಲ್ಲಘಿ. ಈ ಹಿಂದೆ ವರ್ಷವಿಡಿ ಕೆಲಸ ಕೊಡುವುದಾಗಿ ನಿಗಮ ಹೇಳಿತ್ತು. ಆದರೀಗ ಬೆಳೆಯೂ ಇಲ್ಲಘಿ. ವೇತನವೂ ಇಲ್ಲಘಿ. ಕೆಲಸವೂ ಇಲ್ಲದ ಸ್ಥಿಿತಿ ನಿರ್ಮಾಣವಾಗಿದೆ. ಕೂಡಲೇ ಸಚಿವರು ಮಧ್ಯಪ್ರವೇಶಿಸಿ ಬಾಕಿ ವೇತನ ಪಾವತಿಸುವ ವ್ಯವಸ್ಥೆೆ ಮಾಡಬೇಕು. ಇಲ್ಲದೇ ಹೋದರೆ ಜನವರಿ 26 ರಂದು ಗಣರಾಜ್ಯೋೋತ್ಸವದ ಧ್ವಜ ಏರಿಸಲು ಬಿಡುವುದಿಲ್ಲ. ಕಪ್ಪುು ಪಟ್ಟಿಿ ಪ್ರದರ್ಶಿಸಿ ತಂಗಭದ್ರ ಹಂಗಾಮಿ ಕಾರ್ಮಿಕರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಹೊರಗುತ್ತಿಿಗೆ, ಗುತ್ತಿಿಗೆ ನೌಕರರಿಗೆ ವೇತನವಾಗುವುದಿಲ್ಲ. ಅತಿಥಿ ಶಿಕ್ಷಕರಿಗೆ ವೇತನ ಬಿಡುಗಡೆಯಾದರೂ ಹಂಚಿಕೆ ಮಾಡಿಲ್ಲ. ಇದೇ ಸ್ಥಿಿತಿ ವೈಧ್ಯಕೀಯ ಕಾಲೇಜುಗಳು ಸೇರಿದಂತೆ ಅನೇಕ ಇಲಾಖೆಗಳಲ್ಲಿದೆ.
ತುಂಗಭದ್ರ ಯೋಜನೆಯಡಿ 6 ಲಕ್ಷ ಎಕರೆ ನೀರುಣಿಸುವದು, ಎರಡು ಮಹಾನಗರಪಾಲಿಕೆ, ಮೂರು ಪಟ್ಟಣ ಪಂಚಾಯ್ತಿಿ 180 ಗ್ರಾಾಮಗಳ ಕುಡಿಯುವ ನೀರು ಸರಬರಾಜು ಅವಲಂಬಿತರಾಗಿದ್ದು ವೇತನವಿಲ್ಲದೇ ಕಾರ್ಮಿಕರು ಕೆಲಸ ಮಾಡುವಂತಾಗಿದೆ. ದುಡಿಯಲು ಬಿಡುತ್ತಿಿಲ್ಲ. ಕೂಲಿಯೂ ಕೊಡುತ್ತಿಿಲ್ಲ. ಜಿಲ್ಲೆೆಯಲ್ಲಿ ಸೂತಕ ಛಾಯೆ ಆವರಿಸಿದೆ. ಭತ್ತಕ್ಕೆೆ ವೈರಸ್ ರೋಗದೊಂದಿಗೆ ಬೆಲೆಯಿಲ್ಲದೆ ಹೋಗಿದೆ. ಎರಡನೇ ಬೆಳೆ ಇಲ್ಲದಂತಾಗಿದೆ. ಕಾರ್ಮಿಕರು ಸಾಮಾನ್ಯ ಜನರು ನಿತ್ಯದ ಬದುಕಿನ ಪರದಾಟದಲ್ಲಿದ್ದಾಾರೆ. ಕೆಲದಿನಗಳ ಹಿಂದೆಯಷ್ಟೇ ಅಂಬೋತ್ಸವ ನಡೆಸಿದ ಸರ್ಕಾರ ಈಗ ಜಿಲ್ಲೆೆ ಉತ್ಸವ ಮಾಡಲು ಹೊರಟಿರುವದಕ್ಕೆೆ ಧಿಕ್ಕಾಾರವಿರಲಿ ಎಂದರು. ಉಸ್ತುವಾರಿ ಸಚಿವರು ಉತ್ಸವಗಳಿಗೆ ಸೀಮಿತವಾಗಿದ್ದಾಾರೆ. ಜಿಲ್ಲೆೆಯ ಸಮಸ್ಯೆೆಗಳಿಗೆ ಸ್ಪಂದಿಸದೇ ಹೋದದೇ ಇವರ ಅವಶ್ಯಕತೆ ನಮಗಿಲ್ಲಘಿ. ಜನತಂತ್ರದ ಧ್ವಜಾರೋಹಣ ಮಾಡುವದು ಬೇಡ ಎಂದರು. ಈ ಸಂದರ್ಭದಲ್ಲಿ ಸಂಘದ ಪ್ರಧಾನಕಾರ್ಯದರ್ಶಿ ಅಡವಿರಾವ್, ಮುಖಂಡರುಗಳಾದ ಲೋಕಪ್ಪ , ರಾಧಾಕೃಷ್ಣ , ಮುದುಕಪ್ಪ , ಸಿದ್ದಪ್ಪ , ಶಂಕರಪ್ಪ , ನಾಗರಾಜ, ಮಹ್ಮದ ಸಫಿಯುದ್ದೀನ್, ಇದ್ದರು.
ತುಂಗಭದ್ರ ಹಂಗಾಮಿ ನೌಕರರಿಗೆ 8 ತಿಂಗಳಿನಿಂದ ಸಂಬಳವಿಲ್ಲ ಗಣರಾಜ್ಯೋತ್ಸವದಂದು ಕಪ್ಪುು ಪಟ್ಟಿ ಪ್ರದರ್ಶನ – ಮಾನಸಯ್ಯ

