ಸುದ್ದಿಮೂಲ ವಾರ್ತೆ ಸಿಂಧನೂರು, ಜ.11:
ಚೈತ್ರಾಾ ಸಿಸಿ ಗೆಳೆಯ ಬಳಗ ಹಾಗೂ ಸಿಂಧನೂರು ಗೆಳೆಯರ ಬಳಗದಿಂದ ಆಯೋಜಿಸಲಾಗಿದ್ದ ಸಿಂಧನೂರು ಪ್ರೀಮಿಯರ್ ಲೀಗ್ ಸೀಜನ್-8ನ್ನು ಸುಡಾ ಅಧ್ಯಕ್ಷ ಬಾಬುಗೌಡ ಬಾದರ್ಲಿ ಮಾಲೀಕತ್ವ ಸಿಂಧನೂರು ಟೈಗರ್ಸ್ ಚಾಂಪಿಯನ್ ಆಗಿ ಟ್ರೋೋಫಿಗೆ ಮುತ್ತನ್ನಿಿಕ್ಕಿಿತು.
ನಗರದ ತಾಲೂಕಾ ಕ್ರೀೆಡಾಂಗಣದಲ್ಲಿ ನಡೆದ ರಣರೋಚಕ ೈನಲ್ ಪಂದ್ಯದಲ್ಲಿ ಸಿಂಧನೂರು ಟೈಗರ್ಸ್ ತಂಡವು ಸಿಂಧನೂರು ಲೆಜೆಂಡ್ಸ್ ತಂಡದ ವಿರುದ್ದ 76 ರನ್ಗಳ ಅಧಿಕಾರಯುತ ಗೆಲುವು ಸಾಧಿಸಿತು. ಸಿಂಧನೂರು ಟೈಗರ್ಸ್ ತಂಡವೂ ಲೀಗ್ನ ಎಲ್ಲಾಾ ಪಂದ್ಯಗಳಲ್ಲಿ ಜಯಗಳಿಸುವ ಮೂಲಕ ಪಂದ್ಯಾಾವಳಿಯಲ್ಲಿ ಹೊಸ ದಾಖಲೆ ಬರೆಯಿತು. ಮೊದಲು ಬ್ಯಾಾಟ್ ಮಾಡಿದ ಟೈಗರ್ಸ್ ತಂಡವು 14 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 139 ರನ್ಗಳನ್ನು ಗಳಿಸಿತು. ಟೈಗರ್ಸ್ ತಂಡದ ಪರವಾಗಿ ಆರಂಭಿಕನಾಗಿ ಕಣಕ್ಕಿಿಳದ ಬುದ್ದ ಆಕರ್ಷಕ ಬ್ಯಾಾಟ್ ಬೀಸುವ ಮೂಲಕ 33 ಎಸೆತಗಳಲ್ಲಿ 64 ರನ್ಗಳಿಸಿ ವಿಕೆಟ್ ಒಪ್ಪಿಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಾಟಿಂಗ್ಗೆ ಇಳಿದ ವಿಜಯಕುಮಾರ ಭರ್ಜರಿ ಐದು ಸಿಕ್ಸರ್ ಬಾರಿಸುವ ಮೂಲಕ 29 ಎಸೆತಗಳಲ್ಲಿ 50 ಗಳಿಸಿದರು. ಲೆಜೆಂಡ್ಸ್ ಪರವಾಗಿ ಎಂ.ಹಿಜಾಹರ್ ಹಾಗೂ ಉಸ್ಮಾಾನ್ ಖಾನ್ ತಲಾ ಎರಡು ವಿಕೆಟ್ ಪಡೆದುಕೊಂಡರು.
140 ರನ್ಗಳ ಗುರಿಯೊಂದಿಗೆ ಬ್ಯಾಾಟಿಂಗ್ಗೆ ಇಳಿದ ಲೆಜೆಂಡ್ಸ್ ಆರಂಭದಲ್ಲಿಯೇ ಎಂ.ಹಿಜಾಹರ್(3) ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆೆ ಸಿಲುಕಿತು. ಬಸವ ಹೋರಾಟ ನಡೆಸಿ 34 ರನ್ಗಳನ್ನು ಗಳಿಸಿ ರನೌಟ್ಗೆ ಬಲಿಯಾಗಿ ಪೆವಿಲಿಯನ್ಗೆ ಮರಳಿಸಿದರು. ನಂತರ ಬ್ಯಾಾಟ್ಸ್ಮನ್ಗಳು ಪೆವಿಲಿಯನ್ಗೆ ಪರೇಡ್ ನಡೆಸಿದರು. ಅಂತಿಮವಾಗಿ 11.5 ಓವರ್ಗಳಲ್ಲಿ 74 ರನ್ಗೆ ಸರ್ವ ಪತನ ಕಂಡು 76 ರನ್ಗಳ ಸೋಲು ಕಂಡಿತು. ಟೈಗರ್ಸ್ ತಂಡದ ನಾಯಕ 4 ವಿಕೆಟ್ ಪಡೆದರೆ, ಬುದ್ದ ಹಾಗೂ ಶುಭಂ ತಲಾ ಎರಡು ವಿಕೆಟ್ ಪಡೆದು ಗೆಲುವಿನ ರುವಾರಿ ಎನಿಸಿದರು. ಆಲ್ರೌಂಡ್ ಆಟ ಪ್ರದರ್ಶಿಸಿದ ಬುದ್ದ ನಿರೀಕ್ಷೆಯಂತೆ ಪಂದ್ಯದ ಪುರುಷೋತ್ತಮ ಪ್ರಶಸ್ತಿಿಗೆ ಭಾಜನರಾದರು.
ಕಿಕ್ಕಿಿರಿದ ಪ್ರೆೆಕ್ಷಕರು:
ಎಸ್ಪಿಎಲ್ ಸಿಜನ್ -8 ೈನಲ್ ಪಂದ್ಯ ವೀಕ್ಷಣೆಗೆ ತಾಲೂಕಾ ಕ್ರೀೆಡಾಂಗಣದಲ್ಲಿ ಕಿಕ್ಕಿಿರಿದು ಕ್ರಿಿಕೆಟ್ ಅಭಿಮಾನಿಗಳು ಸೇರಿದ್ದರು. ಆಟಗಾರರು ೆರ್, ಸಿಕ್ಸರ್ ಬಾರಿಸಿದಾಗ, ವಿಕೆಟ್ ಚೆಲ್ಲಿದಾಗ ಕೆಕೆ, ಶಿಳ್ಳೆೆ ಹಾಕಿ ಸಂಭ್ರಮಿಸಿ, ತಮ್ಮ ಆಟಗಾರರಿಗೆ ಹುರಿದುಂಬಿಸಿದರು. ಯಾವುದೇ ಅಹಿತರಕ ಘಟನೆಗಳು ನಡೆಯದಂತೆ ಖುದ್ದಾಾಗಿ ಡಿವೈಎಸ್ಪಿ ಚಂದ್ರಶೇಖರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ರಕ್ತದಾನ ಶಿಬಿರ:
ಎಸ್ಪಿಎಲ್ 8 ರ ೈನಲ್ ಪಂದ್ಯಕ್ಕೂ ಮುನ್ನ ಚೈತ್ರಾಾ ಸಿಸಿ ಗೆಳೆಯರ ಬಳಗದಿಂದ ಎಸ್ಪಿಎಲ್ ಆಯೋಜನೆಯ ಜೊತೆಗೆ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಾಾ ಬಂದಿದೆ. ಈ ವರ್ಷ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಅನೇಕರು ರಕ್ತದಾನ ಮಾಡಿದರು. ಜೊತೆಗೆ ಗುರುಸಿದ್ದಯ್ಯ ಮಠದ 50 ಶಾಲಾ ಮಕ್ಕಳಿಗೆ ಸಮವಸ ವಿತರಿಸಲಾಯಿತು.
ವಿಜೇತ ತಂಡಗಳಿಗೆ ಸುಡಾ ಅಧ್ಯಕ್ಷ ಹಾಗೂ ಇತರರು ಬಹುಮಾನ ವಿತರಿಸಿದರು. ಚೈತ್ರಾಾ ಸಿಸಿ ಗೆಳೆಯರ ಬಳಗದ ಅಧ್ಯಕ್ಷ ನಾಗರಾಜ ಗಸ್ತಿಿ, ರಾಜಶೇಖರ ಹಿರೇಮಠ, ಮುದಿಯಪ್ಪ ಡೈಮಂಡ್, ರವಿಕುಮಾರ ಉಪ್ಪಾಾರ, ಶಿವು ಎಸ್ಆರ್ಕೆ, ರಘು ಸಚಿನ, ವೀರಭದ್ರಯ್ಯ ತಾತ, ದೇವು ನಾಯಕ ಪಿಂಟು ಪ್ರಕಾಶ ನೇತೃತ್ವದಲ್ಲಿ ಎಸ್ಪಿಎಲ್ ಸಿಜನ್-8 ಅತ್ಯಂತ ಯಶಸ್ಸಿಿಯಾಗಿ ತೆರೆ ಕಂಡಿತು.
ಸಿಂಧನೂರು ಪ್ರೀಮಿಯರ್ ಲೀಗ್-8 ಬಾಬುಗೌಡ ಬಾದರ್ಲಿ ಮಾಲಿಕತ್ವದ ಸಿಂಧನೂರು ಟೈಗರ್ಸ್ ಚಾಂಪಿಯನ್

