ಸುದ್ದಿಮೂಲ ವಾರ್ತೆ ಬೆಂಗಳೂರು, ಜ.11:
ಸಿದ್ದರಾಮಯ್ಯ ಜನ ಸಮೂಹದ ಯಶಸ್ವಿಿ ನಾಯಕ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಾಮಿ ಅವರು ಸಿಎಂ ಬಗ್ಗೆೆ ಮಾತನಾಡುವುದು ಸರಿಯಲ್ಲ. ಏಕೆಂದರೆ ಅವರು ಯಶಸ್ವಿಿ ನಾಯಕ ಎಲ್ಲ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಾಮಿ ಹೇಳಿದರು.
ನಗರದಲ್ಲಿ ಭಾನುವಾರ ಮಾಧ್ಯಮಗೋಷ್ಟಿಿಯಲ್ಲಿ ಮಾತನಾಡಿದ ಅವರು, ಸಾಂದರ್ಭಿಕ ಶಿಶು ಎಂದು ಎಚ್ಡಿಕೆ ಅವರೇ ಹೇಳಿದ್ದಾರೆ. ಮೈತ್ರಿಿ ಆಗಿದ್ದು ಅವರ ಸ್ವಂತ ಹಿತಾಸಕ್ತಿಿಗೆ, ಜನರ ಹಿತಾಸಕ್ತಿಿಗೆ ಅಲ್ಲ. ಕಾರ್ಯಕರ್ತರ ಹಿತಾಸಕ್ತಿಿಗೆ ಮೈತ್ರಿಿ ಮಾಡಿಕೊಂಡಿಲ್ಲ. ಕುಮಾರಸ್ವಾಾಮಿಗೆ ಕೇಂದ್ರದಲ್ಲಿ ಮಂತ್ರಿಿ ಸ್ಥಾಾನ ಕೊಟ್ಟರು. ಹಾಗಾಗಿ ಅವರು ಮೈತ್ರಿಿ ಆಗಿದ್ದಾರೆ. ಮಿಲನ ಆಗುವುದು ಅಥವಾ ಮೈತ್ರಿಿ ಆಗುವುದು ಅವರಿಗೆ ಬಿಟ್ಟಿಿದ್ದು. ದೇವೇಗೌಡರು ಹಾಗೂ ಕುಮಾರಸ್ವಾಾಮಿ ಮೊದಲು ಮೋದಿ ವಿರುದ್ಧ ಕಠಿಣ ಶಬ್ದ ಬಳಸಿ ಟೀಕಿಸುತ್ತಿಿದ್ದರು. ಕುಮಾರಸ್ವಾಾಮಿ ಅವರು ಕಾಂಗ್ರೆೆಸ್ಗೆ ಕೂಡ ಅಷ್ಟು ಕಠಿಣ ಶಬ್ದ ಬಳಸಿಲ್ಲ. ಮೋದಿ ಮತ್ತೆೆ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೀನಿ ಅಂತ ಹೇಳುತ್ತಿಿದ್ದರು. ಈಗ ನೋಡಿದರೆ ಅವರ ಜೊತೆಗೆ ಹೋಗಿದ್ದಾರೆ ಎಂದು ವಾಗ್ದಾಾಳಿ ನಡೆಸಿದರು.
ನರೇಗಾ ಕುರಿತು ಹೆಚ್ಡಿಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಿಯೆ ನೀಡಿ, ಅವರು ಜನರ ಪರವಾಗಿ ಇಲ್ಲ. ಮೇಲ್ವರ್ಗ, ಕೈಗಾರಿಕಾ ಉದ್ಯಮಿಗಳ ಪರ ಇದ್ದಾರೆ. ಬಿಜೆಪಿ ಆರ್ಥಿಕ ಸಬಲೀಕರಣ ಮಾಡಿದವರಲ್ಲ. ರೈತರು ಅಂದರೆ ಎಲ್ಲ ಸಮುದಾಯದವರು ಇರುತ್ತಾಾರೆ. ಹಳೇ ಮೈಸೂರು ಭಾಗದಲ್ಲಿ ಶೇ.60ರಿಂದ 70 ರಷ್ಟು ರೈತರಿದ್ದಾರೆ. ಒಕ್ಕಲಿಗರು ಸೇರಿ ಬೇರೆ ಸಮುದಾಯದವರು ಕೃಷಿ ಮಾಡುತ್ತಿಿದ್ದಾರೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯತರು, ಬೇರೆ ಸಮುದಾಯದವರು ಸಹ ಕೃಷಿ ಕೈಗೊಂಡಿದ್ದಾರೆ. ಕುಮಾರಸ್ವಾಾಮಿ ಕೇಂದ್ರದ ಮಂತ್ರಿಿ ಆಗದಿದ್ದರೆ ಬಿಜೆಪಿ ಜೊತೆ ಹೋಗದಿದ್ದರೆ ಬಿಜೆಪಿಯವರನ್ನು ದಾರಿಯಲ್ಲಿ ನಿಂತು ಬೈಯುತ್ತಿಿದ್ದರು. ಶನಿವಾರ ಬಿಜೆಪಿ ನಾಯಕರ ಜೊತೆ ಸುದ್ದಿಗೋಷ್ಠಿಿ ನಡೆಸಿದ್ದಾರೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಎಚ್ಡಿಕೆ ಯಶಸ್ವಿ ನಾಯಕ ಅಲ್ಲ: ಚಲುವರಾಯಸ್ವಾಮಿ

