ಸುದ್ದಿಮೂಲ ವಾರ್ತೆ ಬೆಂಗಳೂರು, ಜ.11
ಚುನಾವಣೆಗಳಲ್ಲಿ ನಿರೀಕ್ಷಿತ ಲಿತಾಂಶ ಬಾರದ ಹಿನ್ನೆೆಲೆಯಲ್ಲಿ ಜಾತ್ಯತೀತ ಜನತಾದಳ ಈಗಿರುವ ಚಿಹ್ನೆೆ ಜೊತೆಗೆ ಚಕ್ರ ಚಿಹ್ನೆೆಯನ್ನು ಸೇರಿಸಿಕೊಳ್ಳಲು ಚಿಂತನೆ ನಡೆಸಿದೆ.
ಶೀಘ್ರದಲ್ಲೇ ಜೆಡಿಎಸ್ ಚಿಹ್ನೆೆಗೆ ಹೆಚ್ಚುವರಿಯಾಗಿ ಚಕ್ರ ಸೇರಿಸಲು ಜೆಡಿಎಸ್ ಕೋರ್ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಮೂಲಕ ತೆನೆ ಹೊತ್ತ ಮಹಿಳೆಯ ಚಿಹ್ನೆೆಗೆ ಶೀಘ್ರದಲ್ಲೇ ಚಕ್ರ ಸೇರ್ಪಡೆಯಾಗಲಿದೆ.
ತೆನೆ ಹೊತ್ತ ಮಹಿಳೆ. ಜನತಾದಳ (ಜಾತ್ಯತೀತ) ಪಕ್ಷದ ಅಧಿಕೃತ ಚಿಹ್ನೆೆ. 2001ರಿಂದ ಜೆಡಿಎಸ್ ಈ ಚುನಾವಣಾ ಚಿಹ್ನೆೆಯೊಂದಿಗೆ ಕಣಕ್ಕಿಿಳಿಯುತ್ತಿಿದೆ. ಆದರೆ, ಈಗ ಜೆಡಿಎಸ್ ಪಕ್ಷ ಈ ಚಿಹ್ನೆೆಗೆ ಹೊಸ ರೂಪ ನೀಡಲು ತೀರ್ಮಾನಿಸಿದೆ.
ಚುನಾವಣಾ ಆಯೋಗಕ್ಕೆೆ ಪ್ರಸ್ತಾಾಪ: ಈ ಸಂಬಂಧ ಜೆಡಿಎಸ್ ಚುನಾವಣಾ ಆಯೋಗಕ್ಕೆೆ ಚಿಹ್ನೆೆ ಬದಲಾವಣೆಗೆ ಪ್ರಸ್ತಾಾಪ ಸಲ್ಲಿಸಲು ನಿರ್ಧರಿಸಿದೆ. ಚಕ್ರ ಸೇರ್ಪಡೆಯಿಂದ ಪಕ್ಷಕ್ಕೆೆ ಸಕಾರಾತ್ಮಕ ಚೈತನ್ಯ ಸಿಗುತ್ತೆೆ ಎಂಬ ನಂಬಿಕೆ ಹೆಚ್.ಡಿ.ದೇವೇಗೌಡರದ್ದಾಗಿದೆ. ಈ ಹಿಂದೆ ಜನತಾದಳ ಪಕ್ಷ ಚಕ್ರದ ಗುರುತು ಹೊಂದಿತ್ತು. ಈಗ ಅದೇ ಚಕ್ರದ ಚಿಹ್ನೆೆಯನ್ನು ತೆನೆ ಹೊತ್ತ ಮಹಿಳೆಯ ಜೊತೆ ಸೇರ್ಪಡೆಗೊಳಿಸಲು ಮುಂದಾಗಿದೆ.
ಹೊಸ ವರ್ಷ 2026ರಲ್ಲೇ ಪಕ್ಷದ ಚುನಾವಣಾ ಚಿಹ್ನೆೆಗೆ ಈ ಹೊಸ ಬದಲಾವಣೆ ತರಲು ಜೆಡಿಎಸ್ ನಿರ್ಧರಿಸಿದೆ. ಕೋರ್ ಕಮಿಟಿ ಸಭೆಯಲ್ಲಿ ದೇವೇಗೌಡರ ಸಲಹೆಯಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಚುನಾವಣಾ ಆಯೋಗಕ್ಕೆೆ ಶೀಘ್ರದಲ್ಲೇ ಅರ್ಜಿ ಸಲ್ಲಿಸಲು ಮುಂದಾಗಿದೆ. ಚುನಾವಣಾ ಆಯೋಗದಿಂದ ಚಿಹ್ನೆೆ ಬದಲಾವಣೆಗೆ ಅನುಮತಿ ಸಿಕ್ಕರೆ ಸ್ಥಳೀಯ ಸಂಸ್ಥೆೆ ಚುನಾವಣೆ, ಬಿಬಿಎಂಪಿ ಚುನಾವಣೆಗೆ ಹೊಸ ಚಿಹ್ನೆೆ ಬಳಕೆ ಮಾಡಲು ತೀರ್ಮಾನಿಸಲಾಗಿದೆ.
ಅದೃಷ್ಟದ ಲೆಕ್ಕಾಾಚಾರ:
ಚಿಹ್ನೆೆ ಬದಲಾವಣೆ ಹಿಂದೆ ಭಾವನಾತ್ಮಕ ಲೆಕ್ಕಾಾಚಾರಗಳಿವೆ. ತೆನೆ ಹೊತ್ತ ಮಹಿಳೆ ಚಿಹ್ನೆೆಯ ಹಿಂದೆ ಚಕ್ರ ಸೇರಿಸುವುದರಿಂದ ಚಲನೆ ಕಾಣುತ್ತದೆ. ಇದು ಪಕ್ಷಕ್ಕೆೆ ಸಕಾರಾತ್ಮಕ ಶಕ್ತಿಿಯನ್ನ ಕೊಡುತ್ತದೆ. ಪಕ್ಷದ ಚಿಹ್ನೆೆಯ ಜೊತೆ ಪೂರ್ಣ ವೃತ್ತ ಹಾಕುವುದರಿಂದ ಪಕ್ಷಕ್ಕೆೆ ಅಭ್ಯುದಯ, ಶ್ರೇೇಯಸ್ಸು ಎಂದು ವಾಸ್ತುಶಾಸದ ಅಭಿಮತ. ಸಂಕ್ರಾಾತಿ ಪಥ ಬದಲು ಜೆಡಿಎಸ್ನಲ್ಲೂ ಬದಲಾವಣೆ ಕಾಣಲಿದೆ ಎಂಬುದು ದೇವೇಗೌಡರ ನಂಬಿಕೆಯಾಗಿದೆ. ಈ ಸಂಬಂಧ ದೇವೇಗೌಡರ ಅದೃಷ್ಟದ ಲೆಕ್ಕಾಾಚಾರವೂ ಹೊಂದಲಾಗಿದೆ. ದೇವೇಗೌಡರು ಯಾವುದೇ ತೀರ್ಮಾನ ಕೈಗೊಂಡರು ಜ್ಯೋೋತಿಷಿಗಳ ಸಲಹೆಯಂತೆ ಮುನ್ನಡೆಯುತ್ತಾಾರೆ. ಈ ಚಿಹ್ನೆೆ ಬದಲಾವಣೆಯಲ್ಲೂ ಜ್ಯೋೋತಿಷಿಗಳ ಸಲಹೆ ಪ್ರಮುಖ ಪಾತ್ರ ವಹಿಸಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಈ ಹಿಂದೆ ಜೆಡಿಎಸ್ ಪಕ್ಷ ಟ್ರ್ಯಾಾಕ್ಟರ್ ಚಿಹ್ನೆೆಯನ್ನು ಹೊಂದಿತ್ತು. ರೈತರು ಬಳಸುವ ಟ್ರ್ಯಾಾಕ್ಟರ್ ಅನ್ನೇ ಚುನಾವಣಾ ಚಿಹ್ನೆೆಯಾಗಿ ಅಳವಡಿಸಿಕೊಂಡಿತ್ತು. ಆದರೆ, ಟ್ರ್ಯಾಾಕ್ಟರ್ ವಾಹನವನ್ನೇ ಹೋಲುವ ಇತರ ಚಿಹ್ನೆೆಗಳನ್ನು ಪಕ್ಷೇತರ ಅಭ್ಯರ್ಥಿಗಳು ವಿಧಾನಸಭಾ ಕ್ಷೇತ್ರಗಳಲ್ಲಿ ಪಡೆದಿದ್ದರಿಂದ ಜನತಾದಳದ ಅಭ್ಯರ್ಥಿಗಳಿಗೆ ಕೆಲವೆಡೆ ಸೋಲು ಉಂಟಾಗಿತ್ತು. ಈ ಹಿನ್ನೆೆಲೆಯಲ್ಲಿ ಎಚ್.ಡಿ.ದೇವೇಗೌಡರು 2001 ಡಿಸೆಂಬರ್ನಲ್ಲಿ ಜೆಡಿಎಸ್ ಪಕ್ಷದ ಟ್ರ್ಯಾಾಕ್ಟರ್ ಚುನಾವಣಾ ಚಿಹ್ನೆೆಯನ್ನು ಬದಲಾಯಿಸಲು ತೀರ್ಮಾನಿಸಿದ್ದರು. ಹೀಗಾಗಿ, ಟ್ರ್ಯಾಾಕ್ಟರ್ ಚುನಾವಣಾ ಚಿಹ್ನೆೆ ಬದಲಾಯಿಸಿ, ತೆನೆ ಹೊತ್ತ ಮಹಿಳೆಯ ಗುರುತಿನ ಚುನಾವಣಾ ಚಿಹ್ನೆೆ ಅಳವಡಿಸಿಕೊಳ್ಳಲಾಯಿತು. ಇದೀಗ 24 ವರ್ಷದ ಬಳಿಕ ಜೆಡಿಎಸ್ ಪಕ್ಷ ಮತ್ತೊೊಮ್ಮೆೆ ಚಿಹ್ನೆೆಯಲ್ಲಿ ಬದಲಾವಣೆ ತರಲು ತೀರ್ಮಾನಿಸಿದೆ. 2026ರಲ್ಲಿ ಈಗ ತೆನೆ ಹೊತ್ತ ರೈತ ಮಹಿಳೆಯ ಜೊತೆಗೆ ಚಕ್ರವನ್ನು ಸೇರಿಸಲು ತೀರ್ಮಾನಿಸಲಾಗಿದೆ.
ಚುನಾವಣಾ ಚಿಹ್ನೆೆಗೆ ಆಯೋಗದಿಂದ ಬೇಗ ಅನುಮತಿ ಸಿಗದೇ ಇದ್ದರೆ, ಮುಂದಿನ 2028ರ ವಿಧಾನಸಭಾ ಚುನಾವಣೆಗೆ ಹೊಸ ಚಿಹ್ನೆೆ ಪಡೆದು ಸ್ಪರ್ಧಿಸುವ ಸಾಧ್ಯತೆ ಇದೆ.

