ಸುದ್ದಿಮೂಲ ವಾರ್ತೆ ಕವಿತಾಳ, ಜ.11:
ಸಮೀಪದ ಉಟಕನೂರು ಗ್ರಾಾಮದ ಅಡವಿ ಸಿದ್ದೇಶ್ವರ ಮಠದ ಜಾತ್ರೆೆ ಪ್ರಯುಕ್ತ ರವಿವಾರ ರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು.
ದೇವಸ್ಥಾಾನದಲ್ಲಿ ಬಸವಲಿಂಗ ದೇಶೀಕೇಂದ್ರ ಮಹಾ ಶಿವಯೋಗಿಗಳ 161ನೇ ಹಾಗೂ ಮರಿಬಸವಲಿಂಗ ದೇಶೀಕೇಂದ್ರ ಸ್ವಾಾಮೀಜಿಯ 35ನೇ ಪುಣ್ಯ ಸ್ಮರಣೆ ಅಂಗವಾಗಿ ಕರ್ತೃ ಗದ್ದುಗೆಗೆ ಮಹಾ ರುದ್ರಾಾಭಿಷೇಕ, ಸಹಸ್ರ ಬಿಲ್ವಾಾರ್ಚನೆ, ಮಹಾ ಮಂಗಳಾರತಿ ಸೇರಿದಂತೆ ವಿಶೇಷ ಪೂಜೆ, ನೂತನ ರಥೋತ್ಸವದ ಕಳಸಾರೋಹಣ, ಜಂಗಮ ಗಣಾರಾಧನೆ, ದಾಸೋಹ, ಮತ್ತು ಪಲ್ಲಕ್ಕಿಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಭಕ್ತರು ದೀರ್ಘ ದಂಡ ನಮಸ್ಕಾಾರ ಹಾಕಿ ಅರಿಕೆ ತೀರಿಸಿದರು ಕಾಯಿ, ಕರ್ಪೂರ ಅರ್ಪಿಸಿ ಭಕ್ತಿಿ ಮೆರೆದರು.
ಅಗಣಿತ ಲೀಲಾ ಮೂರ್ತಿ ಗ್ರಂಥ ಮತ್ತು ಸ್ವಾಾಮೀಜಿಗಳ ಭಾವಚಿತ್ರವನ್ನು ಅಂಬಾರಿಯಲ್ಲಿ ಗ್ರಾಾಮದ ಪ್ರಮುಖ ರಸ್ತೆೆಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು, ಬೆಳಿಗ್ಗೆೆ 10 ಗಂಟೆಗೆ ಮಹಿಳೆಯರಿಂದ ಹೂವಿನ ರಥೋತ್ಸವ ಹಾಗೂ ಸಂಜೆ ನೂತನ ಮಹಾ ರಥೋತ್ಸವ ನೆರವೇರಿತು.
ರಥೋತ್ಸವದಲ್ಲಿ ಪಾಲ್ಗೊೊಂಡ ಸಹಸ್ರಾಾರು ಭಕ್ತರು ರಥಕ್ಕೆೆ ಉತ್ತತ್ತಿಿ, ಬಾಳೆಹಣ್ಣು ಎಸೆದು ಭಕ್ತಿಿ ಮೆರೆದರು. ಭಕ್ತರಿಗೆ ಪ್ರಸಾದ ವ್ಯವಸ್ಥೆೆ ಮಾಡಲಾಗಿತ್ತು.
ಅಡವಿ ಸಿದ್ದೇಶ್ವರ ಮಠ : ಅದ್ದೂರಿ ರಥೋತ್ಸವ

